ಗುಂಡ್ಲುಪೇಟೆ: ‘ವಿದ್ಯಾರ್ಥಿಗಳು ಚಾಮರಾಜನಗರ ಜಿಲ್ಲೆಯ ಜನಪದ ಮತ್ತು ಸಾಂಸ್ಕೃತಿಕ ಮಹತ್ವವನ್ನು ಅರಿಯಬೇಕು’ ಎಂದು ಸಾಹಿತಿ ಮಹದೇವ ಶಂಕನಪುರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕಬ್ಬಹಳ್ಳಿ ಗ್ರಾಮದ ಶ್ರೀ ಮದ್ದಾನೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಜಿಲ್ಲೆಯ ಸಾಹಿತ್ಯ, ಜಾನಪದ ಮತ್ತು ಸಂಸ್ಕೃತಿಯ ಪ್ರತಿನಿಧಿಗಳು ಹಾಗೂ ರಾಯಭಾರಿಗಳು, ನಮ್ಮ ಜಿಲ್ಲೆ ರಾಜ್ಯ ದೇಶ ಮಾತ್ರವಲ್ಲ ವಿಶ್ವಕ್ಕೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ’ ಎಂದು ಶ್ಲಾಘಿಸಿದರು.

‘ಜಿಲ್ಲೆಯ ಜನಪದ ಗಾಯಕರು ಮೌಖಿಕ ಕಾವ್ಯಗಳನ್ನು ಜೀವಂತವಾಗಿ ಇಡುವ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಲೆ ಮಹದೇಶ್ವರ, ಮಂಟೇಸ್ವಾಮಿ ಜನಪದ ಮಹಾಕಾವ್ಯಗಳು ಜಗತ್ತಿನ ಸುದೀರ್ಘ ಮತ್ತು ಮಹತ್ವ ಕಾವ್ಯ ಸ್ಥಳಗಳಾಗಿದ್ದು, ಜಿಲ್ಲೆಯ ಕೊಡುಗೆಯಾಗಿದೆ. ಡಾ.ರಾಜಕುಮಾರ್, ಪುನೀತ್ ರಾಜಕುಮಾರ್ ನಮ್ಮ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಗಳು. ಅವರು ಪಠ್ಯ ಸಾಧನೆಗಿಂತ ಪಠ್ಯೇತರ ಚಟುವಟಿಕೆಗಳಾದ ನಟನೆ, ಹಾಡುಗಾರಿಕೆ ಮೂಲಕ ಜಗತ್ತಿನ ಶ್ರೇಷ್ಠ ಕಲಾವಿದರ ಸ್ಥಾನಕ್ಕೆ ಏರಿದರು. ಅವರು ನಮಗೆ ಆದರ್ಶವಾಗಬೇಕು’ ಎಂದು ಹೇಳಿದರು.

‘ವಿದ್ಯಾರ್ಥಿಗಳು ತಮ್ಮಲ್ಲಿರುವ ಸಾಹಿತ್ಯ, ನೃತ್ಯ, ಸಂಗೀತ, ಜ್ಞಾನ ಪ್ರತಿಭೆಗಳ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕು. ಪಠ್ಯ,ಪಠ್ಯೇತರ ಎರಡೂ ಸಾಧನೆಯೇ ನಿಜವಾದ ಶಿಕ್ಷಣ ಎಲ್ಲಾ ಅಸಮಾನತೆ ಭೇದ ಭಾವಗಳನ್ನು ಮೀರಬೇಕು. ಆಗ ಮಾತ್ರ ಶಿಕ್ಷಣಕ್ಕೆ ಬೆಲೆ ಬರುತ್ತದೆ. ಅಂಬೇಡ್ಕರ್, ಗಾಂಧೀಜಿ, ಬುದ್ಧ, ಬಸವಣ್ಣ ಅವರಂತಹ ಸಾಧಕರು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು’ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲೆ ಕವಿತಾ ಮಾತನಾಡಿ, ‘ಇತ್ತೀಚೆಗೆ ಜಗತ್ತಿನಲ್ಲಿ ವಿದ್ಯೆಯೂ ಹೈಜಾಕ್ ಆಗುತ್ತಿದೆ. ಇಂತಹ ದುರಿತ ಕಾಲದಲ್ಲಿ ನಮ್ಮನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಬದುಕನ್ನು ಪ್ರೀತಿಸುವಂತೆ ಮಾಡುವ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಕ್ರಿಯಾಶೀಲ ಕೌಶಲ ಹೆಚ್ಚಿದಷ್ಟು ಬದುಕು ಗಟ್ಟಿಯಾಗುತ್ತದೆ. ಪ್ರಯತ್ನಗಳಲ್ಲಿ ಸೋಲಾದರೂ ಛಲ ಮಾತ್ರ ಬಿಡಬಾರದು, ನಿರಂತರ ಪ್ರಯತ್ನಗಳಿಂದಲೇ ಜೀವನದ ಗೆಲುವು ಸಾಧ್ಯ’ ಎಂದು ತಿಳಿಸಿದರು.

ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಾದ ಮಹೇಶ್ವರಿ, ರಾಜೇಶ್ವರಿ ಅವರಿಗೆ ದತ್ತಿ ಬಹುಮಾನ, ವಿಭಾಗವಾರು ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಯಾ ಅಧ್ಯಾಪಕರು ನಗದು ಬಹುಮಾನ, ಸಾಂಸ್ಕೃತಿಕ, ಕ್ರೀಡೆ ಮತ್ತು ಎನ್ಎಸ್ಎಸ್ ಸೇರಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಐಕ್ಯೂಎಸಿ ಸಂಚಾಲಕ ಮಹದೇವಸ್ವಾಮಿ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ತೇಜಸ್ವಿನಿ, ಎನ್.ಎಸ್.ಎಸ್ ಸಂಯೋಜನಾಧಿಕಾರಿ ಸುರೇಶ, ಕ್ರೀಡಾ ಸಮಿತಿ ಸಂಚಾಲಕ ಪ್ರಮೋದ್ ಕುಮಾರ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-37-11520873

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.