ಚಾಮರಾಜನಗರ: ಮಳೆಗಾಲ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗೆ ಸೀಸನ್ನಲ್ಲಿ ಮಾತ್ರವೇ ಹೆಚ್ಚಾಗಿ ಸಿಗುವ ಮಾವು, ಹಲಸು, ನೇರಳೆ ಹಣ್ಣು ಲಗ್ಗೆ ಇಟ್ಟಿವೆ. ವರ್ಷದಲ್ಲಿ ಕೇವಲ ಎರಡರಿಂದ ಮೂರು ತಿಂಗಳು ಲಭ್ಯವಿರುವ ಹಣ್ಣುಗಳನ್ನು ಖರೀದಿಸಲು ಗ್ರಾಹಕರು ಉತ್ಸಾಹ ತೋರುತ್ತಿದ್ದಾರೆ.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯ ಇಕ್ಕೆಲ, ಚಾಮರಾಜೇಶ್ವರ ದೇವಸ್ಥಾನದ ಸುತ್ತಮುತ್ತ ಸೇರಿದಂತೆ ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿನ ವ್ಯಾಪಾರ ನಡೆಯುತ್ತಿದ್ದು, ದಾರಿಹೋಕರ ಗಮನ ಸೆಳೆಯುತ್ತಿದೆ. ನೋಡಿದಾಕ್ಷಣ ಅರೆಕ್ಷಣ ಮನಸ್ಸು ಸೆಳೆಯುವ ನೇರಳೆ ಹಣ್ಣಿನ ರುಚಿಗೆ ಗ್ರಾಹಕರು ಮನಸೋಲುತ್ತಿದ್ದಾರೆ.

ಸಾಮಾನ್ಯವಾಗಿ ಮೇ ಅಂತ್ಯಕ್ಕೆ ಮಾರುಕಟ್ಟೆಗೆ ಬರುವ ನೇರಳೆ ಜೂನ್, ಜುಲೈವರೆಗೂ ಲಭ್ಯವಿರುತ್ತದೆ. ಭರಪೂರ ಪೋಷಕಾಂಶ ಹೊಂದಿರುವ ನೇರಳೆ ಋತುಮಾನದಲ್ಲಷ್ಟೇ ಸಿಗುವ ಹಣ್ಣಾಗಿರುವುದರಿಂದ ಗ್ರಾಹಕರು ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.

ಜಂಬು ಹಾಗೂ ನಾಟಿ ಮಾದರಿಯ ನೇರಳೆ ಮಾರುಕಟ್ಟೆಗೆ ಬಂದಿದ್ದು, ಕೆ.ಜಿಗೆ ₹ 180 ರಿಂದ ₹ 200ವರೆಗೂ ದರ ಇದೆ. ಕಡುಗಪ್ಪು ಬಣ್ಣದ ಜಂಬು ನೇರಳೆಯಲ್ಲಿ ತಿರುಳು ಹೆಚ್ಚಾಗಿದ್ದರೆ, ನಾಟಿ ನೇರಳೆ ಸ್ವಾದದಲ್ಲಿ ಒಂದು ಕೈ ಮೇಲೆ ಎನ್ನುತ್ತಾರೆ ವ್ಯಾಪಾರಿಗಳು.

ಸೀಸನ್ ಆರಂಭವಾಗಿರುವುದ ರಿಂದ ದರ ದುಬಾರಿಯಾಗಿದ್ದು ಗ್ರಾಹಕರು ಶಕ್ತಾನುಸಾರ ಕನಿಷ್ಠ ಕಾಲು ಕೆಜಿಯಿಂದ ಗರಿಷ್ಠ ಒಂದು ಕೆ.ಜಿವರೆಗೆ ಖರೀದಿ ಮಾಡುತ್ತಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎನ್ನುತ್ತಾರೆ ಚಾಮರಾಜೇಶ್ವರ ದೇವಸ್ಥಾನದ ಸಮೀಪ ವ್ಯಾಪಾರ ಮಾಡುವ ನೇರಳೆ ವ್ಯಾಪಾರಿ.

ವಿದೇಶಗಳಲ್ಲಿ ನೇರಳೆ ವಾಣಿಜ್ಯ ಕೃಷಿಯಾಗಿ ಹೆಚ್ಚು ಲಾಭದಾಯಕವಾಗಿದ್ದು, ರಾಜ್ಯದಲ್ಲಿ ಇಂದಿಗೂ ವಾಣಿಜ್ಯ ಕೃಷಿಯಾಗಿ ಪರಿವರ್ತನೆಗೊಂಡಿಲ್ಲ, ತೋಟ ಹಾಗೂ ಜಮೀನಿನ ಒಂದು ಬದಿಯಲ್ಲಿ, ಮನೆಯ ಹಿತ್ತಲಿನಲ್ಲಿ ಬೆರಳೆಣಿಕೆ ನೇರಳೆ ಮರಗಳು ಮಾತ್ರ ಕಾಣಸಿಗುತ್ತವೆ. ವರ್ಷಪೂರ್ತಿ ಹಣ್ಣುಕೊಡುವ ತಳಿಗಳನ್ನೂ ಅಭಿವೃದ್ಧಿಪಡಿಸಲಾಗಿದ್ದು ರೈತರು ಬೆಳೆಯಲು ಆಸಕ್ತಿ ತೋರಿದರೆ ಹೆಚ್ಚು ಲಾಭದಾಯಕ ಎನ್ನುತ್ತಾರೆ ಕೃಷಿಕ ಶ್ರೀನಿವಾಸ್.

ಜಿಲ್ಲೆಯಲ್ಲಿ ನೇರಳೆ ಬೆಳೆಯುವುದು ಕಡಿಮೆ. ನೆರೆಯ ಮೈಸೂರು, ಬಳ್ಳಾರಿ ಸೇರಿದಂತೆ ಮಲೆನಾಡು ಭಾಗಗಳಿಂದ ಹೆಚ್ಚಾಗಿ ಪೂರೈಕೆಯಾಗುತ್ತದೆ. ಸಾಗಣೆ ವೆಚ್ಚ, ಕೊಯ್ಲು ತ್ರಾಸದಾಯಕ ಹಾಗೂ ನಾಜೂಕಾದ ಕೆಲಸವಾದ್ದರಿಂದ ನೇರಳೆ ಹಣ್ಣಿನ ಬೆಲೆ ದುಬಾರಿ. ಹಿಂದೆಲ್ಲ ನೇರಳೆ ಹಣ್ಣನ್ನು ನೇರವಾಗಿ ಸೇವಿಸಲಷ್ಟೆ ಬಳಕೆಯಾಗುತ್ತಿತ್ತು. ಈಚೆಗೆ ನೇರಳೆ ಹಣ್ಣಿನ ಜ್ಯೂಸ್, ಐಸ್ಕ್ರೀಂ, ಜಾಮ್, ವೈನ್ ಸಹಿತ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ.

ನೇರಳೆ ಹಣ್ಣಿನ ಬೀಜದಲ್ಲೂ ಆಯುರ್ವೇದ ಗುಣಗಳಿದ್ದು, ರಕ್ತದಲ್ಲಿನ ಸಕ್ಕರೆಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ, ಮಧುಮೇಹಿಗಳು ಇಷ್ಟಪಟ್ಟು ತಿನ್ನಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು.

ಭರಪೂರ ಮಾವು: ಸೀಸನ್ ಹಣ್ಣುಗಳಲ್ಲಿ ಒಂದಾದ ಮಾವಿನ ಭರಾಟೆಯೂ ಜೋರಾಗಿದೆ. ಆರಂಭದಲ್ಲಿ ಬಾದಾಮಿ, ತೋತಾಪುರಿ, ಸೆಂಧೂರ, ರಸಪೂರಿ ತಳಿಯ ಮಾವು ಮಾರುಕಟ್ಟೆಗೆ ಬಂದಿದ್ದವು. ಈಗ ಹೆಚ್ಚು ಸ್ವಾದಿಷ್ಟಭರಿತವಾದ ಮಲ್ಲಿಕಾ ತಳಿಯೂ ಹೆಚ್ಚಾಗಿ ಬಂದಿದ್ದು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಬೆಲೆಯೂ ಕೊಂಚ ಕಡಿಮೆ ಇದ್ದು ಬಾದಾಮಿ ಹಾಗೂ ಮಲ್ಲಿಕಾ ಕೆ.ಜಿಗೆ ತಲಾ ₹ 100, ಸೆಂಧೂರ ಹಾಗೂ ತೋತಾಪುರಿ ಕೆ.ಜಿಗೆ ತಲಾ 50 ದರ ಇದೆ.

ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವು ಮಾರುಕಟ್ಟೆಗೆ ಬಂದಿರುವುದರಿಂದ ದರ ಕಡಿಮೆ ಇದ್ದು ಗ್ರಾಹಕರು ಖರೀದಿಗೆ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿ ಮಹೇಶ್.

ತರಕಾರಿ ದರ: ಮಾರುಕಟ್ಟೆಯಲ್ಲಿ ಈ ವಾರ ತರಕಾರಿ ದರ ಬಹುತೇಕ ಸ್ಥಿರವಾಗಿದೆ. ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾಲಕ್ರಮೇಣ ತರಕಾರಿಗಳ ದರ ಮತ್ತಷ್ಟು ಇಳಿಕೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು. ಟೊಮೆಟೊ ಅಲ್ಪ ಏರಿಕೆ ಕಂಡಿದ್ದು ಕೆ.ಜಿಗೆ ₹ 50 ರಿಂದ ₹ 60ರವರೆಗೆ ಇದೆ. ಗಗನಕ್ಕೇರಿದ್ದ ಬೀನ್ಸ್ ಸ್ವಲ್ಪ ಇಳಿಕೆಯಾಗಿದ್ದು ಕೆ.ಜಿಗೆ 80 ರಿಂದ 100ರವರೆಗೆ ಇದೆ. ತೆಂಗಿನಕಾಯಿ ದರವೂ ಇಳಿಕೆ ಕಂಡಿದ್ದು ಕೆ.ಜಿಗೆ ₹ 40 ರಿಂದ ₹ 50ಕ್ಕೆ ಸಿಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-37-871198336

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.