ಚಾಮರಾಜನಗರ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಡೀಸೆಲ್ ಮೇಲೆ ವಿಧಿಸಿರುವ ತೆರಿಗೆಗಳನ್ನು ಇಳಿಸಬೇಕು, ಟೋಲ್ ಶುಲ್ಕದಿಂದ ಸರಕು ಸಾಗಾಟ ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ಚಾಮರಾಜಗರ ಪಿಕ್ಅಪ್ ಮಾಲೀಕರ ಮತ್ತು ಚಾಲಕರ ಅಸೋಸಿಯೇನ್, ಲೋಕಲ್ ಲಾರಿ ಮಾಲೀಕರ ಅಸೋಸಿಯೇಷನ್, ಟೆಂಪೋ ಮಾಲೀಕರ ಸಂಘದಿಂದ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಡಳಿತ ಭವನದ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸುವಂತೆ ಹಾಗೂ ಟೋಲ್ ವಿನಾಯಿತಿ ನೀಡುವಂತೆ ಘೋಷಣೆ ಕೂಗಿದರು.

ಅಸೋಷಿಯನ್ ಅಧ್ಯಕ್ಷ ನಾರಾಯಣ ಪ್ರಸಾದ್ ಮಾತನಾಡಿ, ಇಂಧನ ದರ ಹೆಚ್ಚಳ, ದುಬಾರಿ ಟೋಲ್ ಶುಲ್ಕ, ಟೈರ್ಗಳ ಬೆಲೆ ಹೆಚ್ಚಳ ಸಹಿತ ಹಲವು ಸೌಲಭ್ಯಗಳ ದರ ಹೆಚ್ಚಳದಿಂದ ಸರಕು ಸಾಗಾಣೆ ವಾಹನ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರಗಳು ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಕಳೆದ ತಿಂಗಳಷ್ಟೆ ಡೀಸೆಲ್ ಬೆಲೆ ಲೀಟರ್ 8 ಹೆಚ್ಚಳವಾಗಿತ್ತು. ವಾಹನಗಳ ಫಿಟ್ನೆಸ್ ಶುಲ್ಕ ಕೂಡ ಏರಿಸಲಾಗಿದೆ, ಟೈರ್ ಮತ್ತು ಬಿಡಿ ಭಾಗಗಳ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ಆದರೆ ಸರಕು ಸಾಗಣೆ ವಾಹನಗಳ ಬಾಡಿಗೆ ಹೆಚ್ಚಳವಾಗಿಲ್ಲ. ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ನಷ್ಟ ಹೆಚ್ಚಾಗಿದ್ದು ಜೀವನ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ವಾಹನಗಳ ಸಾಲದ ಕಂತು ಮರುಪಾವತಿ ಮಾಡಲಾಗದೆ ತೊಂದರೆಗೆ ಸಿಲುಕಿದ್ದೇವೆ ಎಂದರು.

ಚಾಮರಾಜನಗರ ಲಾರಿ ಮಾಲೀಕರ ಅಸೋಸಿಯೇಷನ್ ಉಪಾಧ್ಯಕ್ಷ ಮುಕ್ತಾರ್ ಪಾಷಾ, ಇರ್ಷಾದ್ ಪಾಷಾ, ಖಜಾಂಚಿ ಸುರೇಶ್, ಮುಸ್ತಾಕ್ ಅಹಮದ್ ಹಾಗೂ ಪದಾಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-37-163618492

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.