ಸಂತೇಮರಹಳ್ಳಿ: ಬಸವಾದಿ ಶರಣರ ಚಿಂತನೆಗಳನ್ನು ಪ್ರಚುರ ಪಡಿಸುವುದರ ಜತೆಗೆ ಬಸವಣ್ಣನವರ ಕಾಯಕ ಮತ್ತು ದಾಸೋಹ ಪರಿಕಲ್ಪನೆಯನ್ನು ಪಸರಿಸುತ್ತಿರುವ ಬಾಣಹಳ್ಳಿ ಗ್ರಾಮದ ಗುರುಮಲ್ಲೇಶ್ವರ ಭಿಕ್ಷದ ಮಠಕ್ಕೆ ಶತಮಾನದ ಸಂಭ್ರಮ.

ಕಾಯಕ ಯೋಗಿ ಬಸವಣ್ಣನವರ ಜನ್ಮದಿನದಂದೇ ನೂರು ವರ್ಷ ಪೂರೈಸುತ್ತಿರುವ ಬಾಣಹಳ್ಳಿ ಭಿಕ್ಷದ ಮಠವನ್ನು ದೇವನೂರು ಮಠದ ಗರುಮಲ್ಲೇಶ್ವರ ಸ್ವಾಮಿಗಳು ಸ್ಥಾಪನೆ ಮಾಡಿದರು. ಶಿವ ಶರಣರ ಚಿಂತನೆಗಳನ್ನು ಬಿತ್ತುವುದು ಹಾಗೂ ಹಸಿದು ಬಂದವರಿಗೆ ದಾಸೋಹ ನೀಡುವುದು ಹಾಗೂ ದಾಸೋಹದ ಪರಿಕಲ್ಪನೆ ತಿಳಿಸುವ ಉದ್ದೇಶದಿಂದ ಆರಂಬಿಸಿದ ಬಾಣಹಳ್ಳಿ ಮಠ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ.

ಗುರುಮಲ್ಲೇಶ್ವರರು ಆರಂಭದಲ್ಲಿ ಗುಬ್ಬಿ ತಾಲ್ಲೂಕಿನ ಬೆಟ್ಟದಳ್ಳಿಯ ವೀರತಪ್ಪ ಎಂಬ ಸ್ವಾಮಿಗಳನ್ನು ಬಾಣಹಳ್ಳಿ ಭಿಕ್ಷದ ಮಠಾಧ್ಯಕ್ಷರನ್ನಾಗಿ ನೇಮಿಸಿದ್ದರು. ವೀರತಪ್ಪ ಬಿಕ್ಷಾ ಕಾಯಕ ಆರಂಬಿಸಿ ದಾಸೋಹ ಕಾಯಕಕ್ಕೆ ನಾಂದಿ ಹಾಡಿದರು.

ವೀರತಪ್ಪ ಸ್ವಾಮಿಗಳ ನಂತರ ಗ್ರಾಮದ ನಂಜದೇವರು ಮಠಾದ ಅಧ್ಯಕ್ಷರಾದರು. ಪ್ರತಿನಿತ್ಯ ಮನೆಗಳಿಗೆ ತೆರಳಿ ಕಂತೆ ಭಿಕ್ಷೆ ಮಾಡಿ ಮಠದಲ್ಲಿ ಅಡುಗೆ ತಯಾರಿಸಿ ಹಸಿದು ಬಂದ ಭಕ್ತರಿಗೆ ನಿತ್ಯ ದಾಸೋಹ ಬಡಿಸುತ್ತಿದ್ದರು. ದಾಸೋಹದ ಜತೆಗೆ ಗ್ರಾಮಸ್ಥರನ್ನು ಒಗ್ಗೂಡಿಸಿ ಭಜನೆ, ವಚನಗಳ ಸಾರವನ್ನು ತಿಳಿ ಹೇಳುವ ಮೂಲಕ ಶರಣರ ಚಿಂತನೆಗಳನ್ನು ಬಿತ್ತಿದರು.

ಬಸವಾದಿ ಶರಣರ ಚಿಂತನೆಗಳಿಂದ ಪ್ರೇರೇಪಿತರಾದ ಬಾಗಳಿ, ಸಂತೇಮರಹಳ್ಳಿ, ದೇಮಹಳ್ಳಿ ಹಾಗೂ ಕಾವುದವಾಡಿ ಗ್ರಾಮಸ್ಥರು ಬಾಣಹಳ್ಳಿ ಮಠಕ್ಕೆ ಖಾಯಂ ಭಕ್ತರಾಗಿ ಆಹ್ವಾನಿತರಾದರು. ನಂಜದೇವರು 40 ವರ್ಷಗಳ ಕಾಲ ಮಠಕ್ಕೆ ಸುಧೀರ್ಘ ಸೇವೆ ಸಲ್ಲಿಸಿ ಲಿಂಗೈಕ್ಯರಾದರು. ಅವರ ನಂತರ ಗುರುಸ್ವಾಮಿಗಳು ಮಠಾಧ್ಯಕ್ಷರಾಗಿ ಕಾಯಕ ಹಾಗೂ ದಾಸೋಹದ ಪರಿಕಲ್ಪನೆ ಮುಂದುವರಿಸಿಕೊಂಡು ಬಂದರು. ನಂತರ ಬಂದ ಸಿದ್ದಲಿಂಗಸ್ವಾಮಿಗಳು 27 ವರ್ಷಗಳಿಂದ ಮಠಾಧ್ಯಕ್ಷರಾಗಿ ಬಸವಣ್ಣನವರ ಕಾಯಕ ನಿಷ್ಠೆ ಹಾಗೂ ಹಿಂದಿನ ಮಠಾಧ್ಯಕ್ಷರ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಪ್ರತಿದಿನ ಲಿಂಗಪೂಜೆಯೊಂದಿಗೆ ಮಠಾಧ್ಯಕ್ಷರ ಕಾಯಕ ಆರಂಭವಾಗುತ್ತದೆ. ನಂತರ ಮನೆಗಳಿಗೆ ತೆರಳಿ ಕಂತೆ ಭಿಕ್ಷೆ ಮಾಡುತ್ತಾರೆ.

ದಿನದ ಮೂರು ಹೊತ್ತು ದಾಸೋಹ ನಡೆಯುತ್ತದೆ. ಭಕ್ತಾಧಿಗಳು ಮಠದ ದಾಸೋಹ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮದ್ಯಾಹ್ನದ ಬಿಸಿಯೂಟ ಆರಂಭವಾಗುವ ಮುನ್ನವೇ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟ ನೀಡಲಾಗುತಿತ್ತು ಎಂದು ಸಿದ್ದಲಿಂಗಸ್ವಾಮಿಗಳು ನೆನೆಯುತ್ತಾರೆ.

ದೇವನೂರು ಮಠದ ಗರುಮಲ್ಲೇಶ್ವರ ಸ್ವಾಮಿಗಳಿಂದ ಸ್ಥಾಪನೆ

ಮನೆ ಮನೆಗಳಿಗೆ ತೆರಳಿ ಭಿಕ್ಷೆ ಬೇಡಿ ದಾಸೋಹಕ್ಕೆ ಬಳಕೆ

ಬಸವಾದಿ ಶರಣರ ಚಿಂತನೆ ಪ್ರಚುರ, ಭಜನೆ ಆಯೋಜನೆ

ವ ಶರಣರ ಚಿಂತನೆಗಳನ್ನು ಪಾಲಿಸಿಕೊಂಡು ಗೌರವಯುತವಾದ ಜೀವನ ನಡೆಸುವಂತೆ ಪ್ರೇರೇಪಿಸುವುದು ಮಠಗಳ ಉದ್ದೇಶ. ಈ ಹಿನ್ನೆಲೆಯಲ್ಲಿ ಬಾಣಹಳ್ಳಿ ಮಠ ಮುನ್ನಡೆಯುತ್ತಿದೆ
ಎನ್ರಿಚ್ ಮಹದೇವಸ್ವಾಮಿ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ

‘ನಿತ್ಯ ಜ್ಞಾನ ದಾಸೋಹ’

ಪೂರ್ಣಿಮೆ ಹಾಗೂ ಅಮವಾಸ್ಯೆ ದಿನ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಭಜನೆ ಮೂಲಕ ದೇವರ ನಾಮಗಳನ್ನು ಹಾಡಿಸಿ ವಚನಗಳ ಮಹತ್ವವನ್ನು ತಿಳಿಸಲಾಗುತ್ತಿದೆ. ಭಕ್ತಿ ಪರಂಪರೆಯಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ಶಿಸ್ತಿನಿಂದ ಕಾಯಕ ಮುಂದುವರಿಸಿಕೊಂಡು ಬರುತ್ತಿದೆ. ಮುಂದೆ ಗ್ರಾಮಮಟ್ಟದಲ್ಲಿ ಕಲ್ಯಾಣ ಮಂಟಪ ನಿರ್ಮಿಸಿ ಸಾಮಾನ್ಯ ಜನರಿಗೆ ಮದುವೆ ಸಮಾರಂಭ ಆಯೋಜಿಸಲು ನೀಡಲಾಗುವುದು ಎನ್ನುತ್ತಾರೆ ಸಿದ್ದಲಿಂಗಸ್ವಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.