ಚಾಮರಾಜನಗರ: ಮಾರ್ಚ್ 17ರಂದು ಜಿಲ್ಲೆಯಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ 400 ಹೆಕ್ಟೇರ್ನಷ್ಟು ತೋಟಗಾರಿಕೆ ಹಾಗೂ ಕೃಷಿ ಬೆಳೆಗಳಿಗೆ ಗಂಭೀರ ಹಾನಿಯಾಗಿದೆ.

ಕಬ್ಬು, ಮೆಕ್ಕೆಜೋಳ, ಬಾಳೆ, ಟೊಮೊಟೊ, ಈರುಳ್ಳಿ, ಕೋಸು, ಕಲ್ಲಂಗಡಿ, ಎಂಸಿ ಸೌತೆ, ಮಾವು ಸೇರಿದಂತೆ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳು ನಾಶವಾಗಿದ್ದು ಅಪಾರ ನಷ್ಟ ಸಂಭವಿಸಿದೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಯು ಕೈಗೆ ಬರುವ ಸಮಯದಲ್ಲಿ ಆಲಿಕಲ್ಲು ಮಳೆ ಸುರಿದ ಪರಿಣಾಮ ರೈತರು ಕಂಗಾಲಾಗಿದ್ದಾರೆ.

ಕೃಷಿಗೆ ಮಾಡಿದ ಸಾಲದ ಹೊರೆ ಹೆಗಲೇರುವುದರ ಜೊತೆಗೆ ಆದಾಯವೂ ಖೋತಾ ಆಗಿದ್ದು ಅನ್ನದಾತರು ವೈಜ್ಞಾನಿಕ ಬೆಳೆ ಪರಿಹಾರದ ನಿರೀಕ್ಷೆಯಲ್ಲಿ ಇದ್ದಾರೆ.

ಆಲಿಕಲ್ಲು ಮಳೆಗೆ ಚಾಮರಾಜನಗರ ತಾಲ್ಲೂಕಿನಲ್ಲಿ ಅಪಾರ ಹಾನಿಯಾಗಿದೆ. ಕೃಷಿ ಹಾಗೂ ಕಂದಾಯ ಇಲಾಖೆ ನಡೆಸಿರುವ ಪ್ರಾಥಮಿಕ ಹಂತದ ಜಂಟಿ ಸಮೀಕ್ಷೆಯಲ್ಲಿ 380 ಹೆಕ್ಟೇರ್ನಷ್ಟು ತೋಟಗಾರಿಕಾ ಬೆಳೆಗಳಿಗೆ ಹಾನಿ ಅಂದಾಜಿಸಲಾಗಿದೆ. ಚಾಮರಾಜನಗರದಲ್ಲಿ ಅತಿ ಹೆಚ್ಚು 304 ಹೆಕ್ಟೇರ್ ನಾಶವಾಗಿದ್ದರೆ, ಯಳಂದೂರು ತಾಲ್ಲೂಕಿನಲ್ಲಿ 38.08 ಹೆಕ್ಟೇರ್, ಹನೂರು ತಾಲ್ಲೂಕಿನಲ್ಲಿ 21.02 ಹೆಕ್ಟೇರ್, ಗುಂಡ್ಲುಪೇಟೆಯಲ್ಲಿ 10.69 ಹೆಕ್ಟೇರ್ ಹಾಗೂ ಕೊಳ್ಳೇಗಾಲದಲ್ಲಿ 5.94 ಹೆಕ್ಟೇರ್ನಲ್ಲಿ ಬೆಳೆಯಲಾಗಿದ್ದ ಬೆಳೆಗಳು ನಾಶವಾಗಿದೆ.

ಬಾಳೆಗೆ ಪೆಟ್ಟು: ಹಾನಿಯಾಗಿರುವ ತೋಟಗಾರಿಕಾ ಬೆಳೆಗಳ ಪೈಕಿ ಶೇ 85ರಷ್ಟು ಬಾಳೆ ಇದ್ದು ಬೆಳೆಗಾರರಿಗೆ ದೊಡ್ಡ ಆರ್ಥಿಕ ಹೊಡೆತ ಬಿದ್ದಿದೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದಿದ್ದ ಬಾಳೆಯ ಗೊನೆಗಳು ಹಾಗೂ ಗಿಡಗಳು ಆಲಿಕಲ್ಲು ಮಳೆಗೆ ಮುರಿದು ಬಿದ್ದು ಕೋಟ್ಯಂತರ ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಉಳಿದಂತೆ ಟೊಮೆಟೊ, ಈರುಳ್ಳಿ, ಎಂಸಿ ಸೌತೆ, ಕಲ್ಲಂಗಡಿ, ಕೋಸಿನ ಬೆಳೆಗಳಿಗೆ ಹಾನಿಯಾಗಿದೆ.

ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿಯ ಹೆಗ್ಗವಾಡಿಪುರ, ಹೆಗ್ಗವಾಡಿ, ನಂಜೆದೇವನಪುರ, ಹೊನ್ನೂರು, ಯಡಪುರ, ಶಿವಪುರ, ಹನೂರು ತಾಲ್ಲೂಕಿನ ಶಾಗ್ಯಂ, ಹೂಗ್ಯಂ ಸೇರಿದಂತೆ ಹಲವು ಗ್ರಾಮಗಳಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ.

ಕೃಷಿ ಬೆಳೆ ಹಾನಿ: ಮುಂಗಾರು ಪೂರ್ವ ಹಾಗೂ ಮುಂಗಾರು ಬಿತ್ತನೆ ಅವಧಿ ಇನ್ನೂ ಆರಂಭವಾಗದಿರುವುದರಿಂದ ಕೃಷಿ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿಲ್ಲ. ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 25 ಎಕರೆ ಕಬ್ಬು ಹಾಗೂ 4 ಎಕರೆ ಮೆಕ್ಕೆಜೋಳಕ್ಕೆ ಹಾನಿಯಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸುಷ್ಮಾ ಪ್ರಜಾವಾಣಿಗೆ ಮಾಹಿತಿ ನೀಡಿದರು.

ಶೀಘ್ರ ಹಾನಿ ವರದಿ ಸಲ್ಲಿಕೆ: ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ಹೆಚ್ಚು ಹಾನಿಯಾಗಿದ್ದು ಕಂದಾಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳ ತಂಡ ಜಂಟಿ ಸಮೀಕ್ಷೆ ನಡೆಸುತ್ತಿದೆ. ಶೀಘ್ರ ನಿಖರವಾದ ಹಾನಿಯ ವಿವರವನ್ನು ಸಂಗ್ರಹಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಬಳಿಕ ನೇರವಾಗಿ ರೈತರ ಖಾತೆಗಳಿಗೆ ಪರಿಹಾರದ ಹಣ ಜಮೆಯಾಗಲಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಶಿವಪ್ರಸಾದ್ ಮಾಹಿತಿ ನೀಡಿದರು.

‘ಪರಿಹಾರ ಬೇಡ; ನಷ್ಟ ತುಂಬಿಕೊಡಿ’

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಗದಿಪಡಿಸಿರುವ ಪರಿಹಾರ ಮಾರ್ಗಸೂಚಿಯೇ ಅವೈಜ್ಞಾನಿಕವಾಗಿದೆ. ಒಂದು ಹೆಕ್ಟೇರ್ನಲ್ಲಿ ಬಾಳೆ ಬೆಳೆಯಲು ರೈತ ಲಕ್ಷಾಂತರ ರೂಪಾಯಿ ವ್ಯಯ ಮಾಡುತ್ತಾನೆ. ಆದರೆ, ಬೆಳೆ ನಾಶವಾದರೆ ಸರ್ಕಾರ ನೀಡುವುದು ಕೇವಲ ₹ 18,000 ಪರಿಹಾರ. ಸರ್ಕಾರಗಳು ಪರಿಹಾರ ನೀಡುವ ಅಗತ್ಯವಿಲ್ಲ; ನಷ್ಟ ಭರಿಸಿದರೆ ಸಾಕು. ರೈತರ ಬಗ್ಗೆ ಕಾಳಜಿ ಇದ್ದರೆ ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ವೈಜ್ಞಾನಿಕ ಪರಿಹಾರ ನಿಗದಿ ಮಾಡಬೇಕು ಎಂದು ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷೀಯ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್ ಹೇಳಿದರು.

'ಸರ್ಕಾರಕ್ಕೆ ಪ್ರಸ್ತಾವ'

ಪರಿಹಾರ ಬಿಡುಗಡೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಶಿವಪ್ರಸಾದ್ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸುಷ್ಮಾ. ತಿಳಿಸಿದರು.

ಬೆಳೆ ನಷ್ಟ ಪರಿಹಾರ ವಿವರ:

ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆ ಹಾನಿಯಾದರೆ ಹೆಕ್ಟೇರ್ಗೆ ₹ 8,500, ನೀರಾವರಿ ಬೆಳೆ ನಾಶವಾದರೆ ಹೆಕ್ಟೇರ್ಗೆ 17,000, ಬಹುವಾರ್ಷಿಕ ತೋಟದ ಬೆಳೆಗಳಿಗೆ ಹಾನಿಯಾದರೆ ಹೆಕ್ಟೇರ್ಗೆ ₹ 22,500 ಪರಿಹಾರ ಸಿಗಲಿದೆ. ಬೆಳೆಹಾನಿಯಾಗಿರುವ ರೈತರು ಪಹಣಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ಪಡೆಯಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.