ಆಸ್ಪತ್ರೆಗಳಲ್ಲೂ ಸಿಬ್ಬಂದಿ ಕೊರತೆ
ತಾಲ್ಲೂಕಿನಲ್ಲಿ 10 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಒಂದು ಸಮುದಾಯ ಆರೋಗ್ಯ ಕೇಂದ್ರ ಮತ್ತು ಒಂದು ಸಂಚಾರಿ ಆರೋಗ್ಯ ಘಟಕವಿದೆ. ಪ್ರಾಥಮಿಕ ಹಾಗೂ ಉಪ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು 32 ಸಮುದಾಯ ಆರೋಗ್ಯಾಧಿಕಾರಗಳ ಹುದ್ದೆ ಮಂಜೂರಾಗಿವೆ. ಈ ಪೈಕಿ 23 ಹುದ್ದೆ ಭರ್ತಿಯಾಗಿದ್ದು, 9 ಹುದ್ದೆ ಖಾಲಿ ಇವೆ. 36 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆ ಪೈಕಿ 18 ಹುದ್ದೆ ಭರ್ತಿಯಾಗಿದ್ದು, ಉಳಿದ 18 ಹುದ್ದೆ ಖಾಲಿ ಉಳಿದಿವೆ.