ಬುಧವಾರ, 13 ಮೇ 2026
×
ADVERTISEMENT

ಚಾಮರಾಜನನಗರ | ಬತ್ತಿದ ಪಾಲಾರ್ ಹಳ್ಳ: ಕಾಡಿನಲ್ಲಿ ಬವಣೆ

ಬಸವರಾಜು.ಬಿ
Published : 27 ಏಪ್ರಿಲ್ 2026, 23:59 IST
Last Updated : 28 ಏಪ್ರಿಲ್ 2026, 7:19 IST
ADVERTISEMENT
ಫಾಲೋ ಮಾಡಿ
Comments
‘ಟ್ಯಾಂಕರ್ ನೀರು ಪೂರೈಕೆ’
ಮಲೆ ಮಹದೇಶ್ವರ ವನ್ಯಜೀವಿ ವಲದಯಲ್ಲಿ ಹರಿಯುವ ಪಾಲಾರ್ ಹಳ್ಳ ಬತ್ತಿದ್ದು ಅಲ್ಲಲ್ಲಿ ಗುಂಡಿ ಗಳಲ್ಲಿ ಸಂಗ್ರಹವಾಗಿರುವ ನೀರನ್ನು ಪ್ರಾಣಿಗಳು ಕುಡಿಯುತ್ತಿವೆ. ನಿಂತ ನೀರಾಗಿರುವ ಕಾರಣ ಕುಡಿಯಲು ಯೋಗ್ಯವಾಗಿದೆಯೇ ಎಂದು 15 ದಿನಗಳಿಗೊಮ್ಮೆ ಪರೀಕ್ಷೆ ನಡೆಸಲಾಗುತ್ತಿದೆ. ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 15 ಕಡೆಗಳಲ್ಲಿ ನೀರಿನ ಕಟ್ಟೆಗಳನ್ನು ಕಟ್ಟಲಾಗಿದ್ದು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಹೂಗ್ಯಂ, ಉಡುತೊರೆ, ದೊಡ್ಡಹಳ್ಳ, ದೇವರಮಡು ಹಳ್ಳದಲ್ಲಿ ನೀರಿದ್ದು ಸಧ್ಯಕ್ಕೆ ಪರಿಸ್ಥಿತಿ ಗಂಭೀರವಾಗಿಲ್ಲ ಎಂದು ಮಲೆ ಮಹದೇಶ್ವರ ವನ್ಯಜೀವಿ ಧಾಮ ಡಿಸಿಎಫ್‌ ಭಾಸ್ಕರ್ ತಿಳಿಸಿದ್ದಾರೆ.
‘ಕಳ್ಳಬೇಟೆಗೆ ಅನುಕೂಲ’
ಪಾಲಾರ್ ಹಳ್ಳದಲ್ಲಿ ನೀರಿಲ್ಲದಿರುವುದು ಬೇಟೆಗಾರರಿಗೆ ವರವಾಗಿ ಪರಿಣಮಿಸಿದೆ. ತಮಿಳುನಾಡು ಭಾಗದಿಂದ ಸುಲಭವಾಗಿ ಪಾಲಾರ್ ಹಳ್ಳ ದಾಳಿ ರಾಜ್ಯದ ಅರಣ್ಯದೊಳಗೆ ಅಕ್ರಮವಾಗಿ ನುಸುಳುವ ಆತಂಕವೂ ಅರಣ್ಯಾಧಿಕಾರಿಗಳಿಗೆ ಎದುರಾಗಿದೆ. ರಾತ್ರಿ ವೇಳೆ ಹಳ್ಳ ದಾಟಿ ಬರುವ ಬೇಟೆಗಾರರು ವನ್ಯಜೀವಿಗಳನ್ನು ಬೇಟೆಯಾಡಿ ಹಳ್ಳದ ಮೂಲಕ ತಮಿಳುನಾಡಿಗೆ ಕೊಂಡೊಯ್ಯುವ ಸಾಧ್ಯತೆಗಳು ಹೆಚ್ಚಿವೆ. ಅರಣ್ಯ ಇಲಾಖೆ ಸಿಬ್ಬಂದಿ ಪಾಲಾರ್ ಹಳ್ಳದ ಸಮೀಪ ಪ್ರತಿರಾತ್ರಿ ಗಸ್ತು ತಿರುಗುವ ಅನಿವಾರ್ಯತೆ ಎದುರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT