ಚಾಮರಾಜನಗರ: ಚಾಮರಾಜನಗರದ ಅಭ್ಯಾಸಿ ಟ್ರಸ್ಟ್ ವತಿಯಿಂದ ಏ.20 ರಿಂದ ಮೇ 17ರ ವರೆಗೆ ‘ಹಟ್ಟಿ ಹೈಕಳ ಜಗುಲಿ’ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಕಿರಣ್ ಗಿರ್ಗಿ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಸರ್ಕಾರಿ ಪಿಯು ಕಾಲೇಜು ಹತ್ತಿರವಿರುವ ಸಿ.ಎಸ್.ಐ ಚರ್ಚ್ ಆವರಣದ ಸಿ.ಎಸ್.ಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಏ.18ರಂದು ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದ್ದು 7ರಿಂದ 14 ವರ್ಷದೊಳಗಿನ ಮಕ್ಕಳು ದಾಖಲಾಗಬಹುದು.

ಪ್ರತಿದಿನ ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ಶಿಬಿರ ನಡೆಯಲಿದ್ದು, ರಂಗಾಯಣದಲ್ಲಿ ತರಬೇತಿ ಹೊಂದಿರುವ ಹಾಗೂ ಮಕ್ಕಳ ರಂಗಭೂಮಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತ ಕಲಾವಿದರು ತರಬೇತಿ ನೀಡಲಿದ್ದಾರೆ.

ಅಭಿನಯ, ನಾಟಕ, ಸಂಗೀತ, ಕಥೆ, ರಂಗಾಟ, ಪುಸ್ತಕ ಓದು, ಚಿತ್ರಕಲೆ, ಕರಕುಶಲತೆ, ಕ್ಷೇತ್ರ ಪ್ರವಾಸ, ಮಕ್ಕಳ ಸಿನಿಮಾ ವೀಕ್ಷಣೆ, ಮಕ್ಕಳ ಸಂತೆ, ಗೊಂಬೆ ತಯಾರಿ, ಪರಿಸರ ನಡಿಗೆ, ಯೋಗ, ವ್ಯಾಯಾಮ, ಉರಗಗಳ ಪ್ರಾತ್ಯಕ್ಷಿಕೆ ನೀಡಲಾಗುವುದು. ಶಿಬಿರದ ಕೊನೆಯ ದಿನ ಜಿಲ್ಲಾ ರಂಗಮಂದಿರದಲ್ಲಿ ಮಕ್ಕಳಿಂದ ಗೀತ ಗಾಯನ ಹಾಗೂ ನಾಟಕ ಪ್ರದರ್ಶನ ನಡೆಯಲಿದೆ. ಭಾಗವಹಿಸಿದವರಿಗೆ ತರಬೇತಿ ಪ್ರಮಾಣ ಪತ್ರ ನೀಡಲಾಗುವುದು.

ಹಟ್ಟಿ ಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರದ ಕುರಿತು ಹೆಚ್ಚಿನ ಮಾಹಿತಿಗೆ ಹಾಗೂ ನೋಂದಾಯಿಸಿಕೊಳ್ಳಲು 7411491077, 9108301194 ಸಂಪರ್ಕಿಸಬಹುದು ಎಂದು ತಿಳಿಸಿದರು.

ಶಿಬಿರದ ಸಂಚಾಲಕಿ ನಂದಿನಿ, ಕಲಾವಿದರಾದ ಗಣಪತಿ, ನಾಗೇಶ್, ಸುರೇಶ್, ನಾಗರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-37-1796872824

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.