ಚಾಮರಾಜನಗರ: ಜಿಲ್ಲೆಯಲ್ಲಿ ಜನಗಣತಿಯ ಮೊದಲ ಹಂತವಾಗಿರುವ ಮನೆಗಳನ್ನು ಪಟ್ಟಿ ಮಾಡುವ ಕಾರ್ಯ ಯಶಸ್ವಿಯಾಗಿ ನಡೆದಿದ್ದು, ಕಾರಣಕರ್ತರಾದ ಗಣತಿದಾರರು ಹಾಗೂ ಮೇಲ್ವಿಚಾರಕರು ಅಭಿನಂದನಾರ್ಹರು ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಸಿ.ಡಿ.ಎಸ್ ಸಮುದಾಯ ಭವನದಲ್ಲಿ ಶುಕ್ರವಾರ ಚಾಮರಾಜನಗರ ತಾಲ್ಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮನೆಪಟ್ಟಿ ಕಾರ್ಯಕ್ಕೆ ನಗರ, ಸ್ಥಳೀಯ ಸಂಸ್ಥೆ ಹಾಗೂ ಕಂದಾಯ ಇಲಾಖೆಯಿಂದ ನಿಯೋಜಿಸಿದ್ದ ಗಣತಿದಾರರು ಹಾಗೂ ಮೇಲ್ವಿಚಾರಕರನ್ನು ಅಭಿನಂದಿಸಿ ಮಾತನಾಡಿದ ಅವರು, ಜನಗಣತಿಯ ಮೊದಲ ಹಂತದ ಮನೆಪಟ್ಟಿ ಕಾರ್ಯವನ್ನು ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೂರ್ಣಗೊಳಿಸಲಾಗಿದೆ.

ನಿಗದಿತ ಅವಧಿಗಿಂತ 15 ದಿನಗಳ ಮೊದಲೇ ಮನೆಪಟ್ಟಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿರುವ ಗಣತಿದಾರರು ಹಾಗೂ ಮೇಲ್ವಿಚಾರಕರನ್ನು ಆಯಾ ತಾಲ್ಲೂಕುವಾರು ಅಭಿನಂದಿಸಲಾಗುತ್ತಿದೆ. 2027ರ ಫೆಬ್ರವರಿಯಲ್ಲಿ ಆರಂಭವಾಗುವ ಜನಗಣತಿ 2ನೇ ಹಂತದಲ್ಲಿಯೂ ಇದೇ ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಜನಗಣತಿಯ ಆರಂಭದ ದಿನಗಳಲ್ಲಿ ಮನೆಪಟ್ಟಿ ಕಾರ್ಯದಲ್ಲಿ ಚಾಮರಾಜನಗರ ಜಿಲ್ಲೆ ರಾಜ್ಯದಲ್ಲಿ 30ನೇ ಸ್ಥಾನದಲ್ಲಿತ್ತು. ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಪರಿಣಾಮಕಾರಿ ತೊಡಗಿಕೊಳ್ಳುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು. ಪರಿಣಾಮ ಜಿಲ್ಲೆ ಎಂಟನೇ ಸ್ಥಾನ ಪಡೆದಿದೆ. ಇದಕ್ಕಾಗಿ ಗಣತಿ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ಗಣತಿದಾರರು ಅಭಿನಂದನಾರ್ಹರು ಎಂದರು. ನಗರ, ಸ್ಥಳಿಯ ಸಂಸ್ಥೆಗಳಿಂದ ನಿಯೋಜಿತರಾಗಿದ್ದ ಮೇಲ್ವಿಚಾರಕರಾದ ಎನ್. ಸೋಮಶೇಖರ್, ತ್ರಿವೇಣಿ, ಎಂ. ನಂಜುಂಡಸ್ವಾಮಿ, ಗಣತಿದಾರರಾದ ಡಿ.ವಿ. ರಂಗಪ್ಪ, ಶ್ರೀಶೈಲ, ಅಮಿತಾ ಭಾನು, ರೇಣುಕಾ, ಎಂ. ಕುಮಾರ, ಶಿವಣ್ಣ, ನಟರಾಜು, ಕಿಶೋರ್ ಹಾಗೂ ಕಂದಾಯ ಇಲಾಖೆಯ ಎಂ. ರಾಜೇಂದ್ರ, ಪಿ.ವಿ. ಲಕ್ಷ್ಮೀ, ಎಚ್.ಎಂ. ಮಂಜುನಾಥ್, ಸಿದ್ದಲಿಂಗಮೂರ್ತಿ, ಆರ್. ವಿನೋದ್, ಸಿ. ಶ್ರೀಲಕ್ಷ್ಮೀ ಅವರನ್ನು ಜಿಲ್ಲಾಧಿಕಾರಿ ಶ್ರೀರೂಪಾ ಶಾಲು ಹೊದಿಸಿ ಸನ್ಮಾನಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವೆಂಕಟೇಶ್, ತಹಶೀಲ್ದಾರ್ ಗಿರಿಜಾ, ನಗರಸಭೆಯ ಸಮುದಾಯ ಸಂಘಟನಾಧಿಕಾರಿ ವೆಂಕಟ್ನಾಯಕ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-37-158566482

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.