ಕೊಳ್ಳೇಗಾಲ: ಇಲ್ಲಿನ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮೀಪದ ಮನೆವೊಂದರಲ್ಲಿ ಮದುವೆ ಸಂಬಂಧ ಆಭರಣದ ವಿಷಯಕ್ಕೆ ಎರಡು ಕುಟುಂಬಗಳ ನಡುವೆ ಜಗಳವಾಗಿದ್ದು, ಪರಸ್ಪರ ಚಾಕು ಇರಿತದಿಂದ 5 ಮಂದಿ ಗಾಯಗೊಂಡಿದ್ದಾರೆ.

ನಗರದ ಸಾಮಂದಗೇರಿ ಬಡಾವಣೆಯ ನಿವಾಸಿ ವರನ ಕಡೆಯ ಸಹೋದರ ಸಮೀರ್ ಆಯಾಜ್ (32), ಶೋಯೆಬ್ (30) ಮತ್ತು ವಧುವಿನ ಸಂಬಂಧಿಗಳಾದ ಪೈರೋಜ್ ಖಾನ್, (36) ಅಬ್ದುಲ್ ವಾಯಿದ್ (44) ಅಬ್ದುಲ್ ಆರೀಫ್ (40) ಗಾಯಗೊಂಡವರು. ಗಾಯಾಳುಗಳನ್ನು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿದೆ.

ಘಟನೆ ವಿವರ: ಕುರುಬನ ಕಟ್ಟೆ ರಸ್ತೆಯಲ್ಲಿನ ಆರ್ಎಂ ಕಲ್ಯಾಣ ಮಂಟಪದಲ್ಲಿ ನಗರದ ಸಾಮಂದಗೇರಿ ಬಡಾವಣೆಯ ಸೈಯದ್ ಮುನೀರ್ ಅವರೊಂದಿಗೆ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮೀಪದ ಗುಲ್ಲಾಸ್ ಬೇಗಂನೊಂದಿಗೆ ವಿವಾಹ ನಿಶ್ಚಯಯವಾಗಿತ್ತು. ಮಂಗಳವಾರ ರಾತ್ರಿ ಎರಡು ಕಡೆಯ ಸಂಬಂದಿಕರು ಕಲ್ಯಾಣ ಮಂಟಪದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಶಾಸ್ತ್ರಕ್ಕೆ ಮುಂದಾದ ವೇಳೆ ವಧುವಿನ ಮನೆಯವರು ವರನಿಗೆ ಕೊಡಬೇಕಾಗಿದ್ದ ಚಿನ್ನದ ವಿಷಯಕ್ಕೆ ವಾಗ್ವಾದ ಅರಂಭವಾಗಿದೆ. ಎರಡೂ ಮನೆಯವರ ನಡುವೆ ಮಾತಿನ ಚಕಮಕಿ ನಡೆದು ನಡೆಯಬೇಕಾಗಿದ ಶಾಸ್ತ್ರ ಸ್ಥಗಿತಗೊಂಡಿತ್ತು.

ಆದರೆ ಬುಧವಾರ ಬೆಳಿಗ್ಗೆ ವಧುವಿನ ಮನೆಗೆ ವರನ ಕಡೆಯವರು ತೆರಳಿ ಮಾತನಾಡುತ್ತಿದ್ದ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಬಾಕು ಇರಿತ ಒಳಗಾಗಿದ್ದಾರೆ. ಇಂದು ನಡೆಯಬೇಕಾಗಿದ್ದ ಮದುವೆ ರದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-37-170856136

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.