ಕೊಳ್ಳೇಗಾಲ: ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು ಬಿಸಿಲಿನ ದಗೆಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಪರದಾಡುತ್ತಿದ್ದು ನೆರಳು ಹುಡುಕಿ ಅಲೆಯುವಂತಹ ಪರಿಸ್ಥಿತಿ ನಿರ್ಮಾನವಾಗಿದೆ.

ನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ತೆರಳುವ ನೌಕರರು, ದುಡಿಮೆಗೆ ಹೋಗುವ ದಿನಗೂಲಿ ನೌಕರರು, ಕೆಲಸ ಕಾರ್ಯಗಳಿಗೆ ಓಡಾಡುವ ಸಾರ್ವಜನಿಕರು ಸೂಕ್ತ ಬಸ್ ತಂಗುದಾಣಗಳು ಇಲ್ಲದೆ ಬಿಸಿನಿಲಲ್ಲಿ ನಿಲ್ಲುವ ಶಿಕ್ಷೆ ಅನುಭವಿಸುತ್ತಿದ್ದಾರೆ.

ಕೊಳ್ಳೇಗಾಲ ನಗರ ವೇಗವಾಗಿ ಬೆಳೆಯುತ್ತಿದ್ದರೂ ನಗರದಲ್ಲಿ ಬಸ್ ತಂಗುದಾಣಗಳ ಕೊರತೆ ಎದ್ದು ಕಾಣುತ್ತಿದೆ. ಅಗತ್ಯ ಸ್ಥಳಗಳಲ್ಲಿ ತಂಗುದಾಣಗಳು ಇಲ್ಲದೆ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ರಸ್ತೆಯ ಬದಿಯ ಮರಗಳು, ವಾಣಿಜ್ಯ ಮಳಿಗೆಗಳನ್ನು ಆಶ್ರಯಿಸಬೇಕಾಗಿದೆ.

ನಗರದ ಬಹುತೇಕ ಭಾಗಗಳಿಗೆ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳು ಸಂಚರಿಸುತ್ತಿದ್ದರೂ ಪ್ರಯಾಣಿಕರು ಬಸ್ಗಳನ್ನು ಹತ್ತಲು ಬಸ್ ತಂಗುದಾಣಗಳ ಕೊರತೆ ಇದೆ. ಬಿಸಿಲಿನಿಂದ ರಕ್ಷಣೆ ಪಡೆದುಕೊಳ್ಳಲು ನೆತ್ತಿಯ ಮೇಲೆ ನೆರಳಿನ ಸೂರು ಕಲ್ಪಿಸದ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಸಮರ್ಪಕವಾದ ಬಸ್ ತಂಗುದಾಣಗಳು ಇಲ್ಲದಿರುವುದರಿಂದ ಪ್ರಯಾಣಿಕರು ಬಸ್ಗಾಗಿ ಬಿಸಿಲಿನಲ್ಲಿ ನಿಲ್ಲಬೇಕು. ಬಸ್ ಬರುವವರೆಗಾದರೂ ವಿರಮಿಸಲು ಯಾವುದೇ ಸೌಲಭ್ಯಗಳು ಇಲ್ಲ. ನೆರಳು ಹುಡುಕಿಕೊಂಡು ಹೋದರೆ ಬಸ್ಗಳು ತಪ್ಪುವ ಭಯದಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಿಸಿಲಿನಲ್ಲಿ ನಿಲ್ಲುತ್ತಿದ್ದಾರೆ.

ನಗರದ ಬಸ್ ನಿಲ್ದಾಣ ಉತ್ತಮವಾಗಿದ್ದು ಕುಡಿಯುವ ನೀರು, ಆಸನ, ಸಹಿತ ಮೂಲಸೌಕರ್ಯಗಳು ಇವೆ. ಆದರೆ, ನಗರದ ಪ್ರಮುಖ ವೃತ್ತಗಳಿಂದ ಬೇರೆ ಊರುಗಳಿಗೆ ತೆರಳುವ ಸ್ಥಳಗಳಲ್ಲಿ ತಂಗುದಾಣಗಳು ಇಲ್ಲ. ಹಾಗಾಗಿ ಪ್ರಯಾಣಿಕರು ಪಾದಾಚಾರಿ ಮಾರ್ಗ ಅಥವಾ ರಸ್ತೆಯ ಮೇಲೆ ನಿಲ್ಲಬೇಕು, ವಯಸ್ಸಾದವರು, ಮಕ್ಕಳು ನಿಲ್ಲಲಾಗದೆ ರಸ್ತೆಯ ಬದಿಯಲ್ಲಿ ಕೂರಬೇಕು.

ಪಾದಚಾರಿ ಮಾರ್ಗವನ್ನು ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದು ಅಲ್ಲಿ ನಿಲ್ಲಲು ಜಾಗವಿಲ್ಲದೆ ಪ್ರಯಾಣಿಕರು ರಸ್ತೆಯ ಮೇಲೆ ಬಂದು ನಿಲ್ಲಬೇಕು. ವಾಹನಗಳು ರಸ್ತೆಯಲ್ಲಿ ಹೋಗುವಾಗ ಉಗುಳುವ ಹೊಗೆ, ದೂಳು ಸೇವನೆ ಮಾಡಬೇಕು, ಕೆಲವೊಮ್ಮೆ ವಾಹನಗಳು ಮೈಮೇಲೆ ಬಂದ ಅನುಭವವಾಗುತ್ತದೆ ಎನ್ನುತ್ತಾರೆ ಪ್ರಯಾಣಿಕರು.

ಮಳೆ ಬಂದರೆ ಸಮೀಪದ ಮರ ಗಿಡಗಳ ಬುಡದಲ್ಲಿ ಆಶ್ರಯ ಪಡೆಯಬೇಕು, ಇಲ್ಲವಾದರೆ ವಾಣಿಜ್ಯ ಮಳಿಗೆಗಳ ಮುಂದೆ ನಿಲ್ಲಬೇಕು. ಸ್ಥಳೀಯ ಆಡಳಿತ ಅಗತ್ಯವಿರುವ ಕಡೆಗಳಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ನಾಗರಿಕರಾದ ರಮೇಶ್.

ಎಡಿಬಿ ವೃತ್ತದಲ್ಲಿ ಬಸ್ ತಂಬುದಾಣವಿದ್ದರೂ ಪ್ರಯಾಣಿಕರು ಹೆಚ್ಚು ಬಳಕೆ ಮಾಡುವುದಿಲ್ಲ. ಬಿಕ್ಷುಕರು ಹಾಗೂ ನಿರ್ಗತಿಕರ ವಿಶ್ರಾಂತಿ ತಾಣವಾಗಿ ಬದಲಾಗಿದೆ. ಹಗಲು, ರಾತ್ರಿ ಮಲಗಲು ಬಳಕೆಯಾಗುತ್ತದೆ. ಕೆಲವು ತಂಗುದಾಣಗಳು ನಿರ್ವಹಣೆ ಕೊರತೆಯಿಂದ ಕುಡುಕರ ಮೋಜಿನ ತಾಣವಾಗಿದೆ. ಮದ್ಯಸೇವನೆಗೆ ಹಾಗೂ ವಿಶ್ರಾಂತಿ ಪಡೆಯಲು ಬಳಕೆಯಾಗುತ್ತಿದೆ.

ಬೆರಳೆಣಿಕೆ ತಂಗುದಾಣಗಳ ಬಳಿ ಪುಂಡರು ಜಮಾಯಿಸಿ ಹೆಣ್ಣುಮಕ್ಕಳನ್ನು ಚುಡಾಯಿಸುತ್ತಾರೆ. ಪೊಲೀಸ್ ಇಲಾಖೆ ಗಮನ ಹರಿಸಬೇಕು ಎಂದು ವಿದ್ಯಾರ್ಥಿನಿ ಪ್ರತಿಭಾ ಒತ್ತಾಯಿಸುತ್ತಾರೆ.

ಪ್ರತಿನಿತ್ಯ ಗ್ರಾಮಗಳಿಂದ ಹಾಗೂ ನೆರೆಯ ಜಿಲ್ಲೆಗಳಿಂದ ಸಾವಿರಾರು ಜನರು ಕೊಳ್ಳೇಗಾಲಕ್ಕೆ ಬರುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಹೋಟೆಲ್ಗಳಲ್ಲಿ ನೀರು ಕುಡಿಯಲು ಹೋಗಲು ಮುಜುಗರವಾಗುತ್ತದೆ, ಹಾಗಾಗಿ, ಬಹಳಷ್ಟು ಮಂದಿ ತಂಪು ಪಾನೀಯ ಹಾಗೂ ಬಾಟಲಿ ನೀರು ಖರೀದಿಸುತ್ತಾರೆ. ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕ ಮಂಚಯ್ಯ ಪ್ರಜಾವಾಣಿಗೆ ತಿಳಿಸಿದರು.

ಅಂಬೇಡ್ಕರ್ ವೃತ್ತದಲ್ಲಿ ಬಸ್ ತಂಗುದಾಣಕ್ಕೆ ಸ್ಥಳವಿಲ್ಲ; ಹಾಗಾಗಿ ಬೇರೆಡೆ ತಂಗುದಾಣ ವ್ಯವಸ್ಥೆ ಮಾಡಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ ಸಹ ಮಾಡಲಾಗುವುದು.
ರುದ್ರಮ್ಮ ಶರಣಯ್ಯ, ನಗರಸಭೆ ಪೌರಾಯುಕ್ತೆ

ಬಿಸಿಲಿನ ದಗೆ ಹೆಚ್ಚಾಗಿರುವುದರಿಂದ ತಂಗುದಾಣ ನಿರ್ಮಾಣ ಮಾಡಿದರೆ ವಿದ್ಯಾರ್ಥಿನಿಯರಿಗೆ ಅನುಕೂಲವಾಗುತ್ತದೆ. ನೆರಳಿನ ವ್ಯವಸ್ಥೆ , ಕುಡಿಯುವ ನೀರಿನ ಸೌಲಭ್ಯ ಮಾಡಬೇಕು.
ಎಲಿಜಬೆತ್ ರಾಣಿ, ವಿದ್ಯಾರ್ಥಿನಿ

ಕುಡಿಯುವ ನೀರಿನ ವ್ಯವಸ್ಥೆ ಇಲ್ಲ

ಬಿಸಿಲಿನ ಬೇಗೆ ತಣಿಸಿಕೊಳ್ಳಲು ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಬಸ್ ನಿಲ್ದಾಣ ಹೊರತುಪಡಿಸಿದರೆ ನಗರದಲ್ಲಿರುವ ಮುಖ್ಯ ರಸ್ತೆಗಳು ಹಾಗೂ ಪ್ರಮುಖ ವೃತ್ತಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿಲ್ಲ. ನೀರಿಗೆ ದಾಹವಾದರೆ ಹಣ ಕೊಟ್ಟು ಬಾಟೆಲ್ ನೀರು ಕುಡಿಯಬೇಕು. ಬೇಸಗೆಯಲ್ಲಿ ದೇಹ ನಿರ್ಜಲೀಕರಣಗೊಳ್ಳುವುದರಿಂದ ವೃದ್ಧರ ಹಾಗೂ ಅಸಹಾಯಕರ ಅನುಕೂಲಕ್ಕಾಗಿ ನಗರದ ಅಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ ಸಾರ್ವಜನಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.