ಚಾಮರಾಜನಗರ: ನೌಕರನ ವೇತನದಿಂದ ವಿಮಾ ಕಂತನ್ನು ಕಡಿತಗೊಳಿಸಿಯೂ ವಿಮಾ ಕಂಪನಿಗೆ ಭರಿಸದೆ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕೆಎಸ್ಆರ್ಟಿಸಿಗೆ ಬಿಸಿ ಮುಟ್ಟಿಸಿದ್ದು ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಈಚೆಗೆ ಆದೇಶಿಸಿದೆ.

ಈ ಮೂಲಕ ಯಾವುದೇ ಸಂಸ್ಥೆ ಅಥವಾ ಕಂಪನಿಯು ತನ್ನ ನೌಕರರು ಹಾಗೂ ಸಿಬ್ಬಂದಿಯ ವೇತನದಿಂದ ವಿಮಾ ಕಂತು ಕಡಿತಗೊಳಿಸಿ ವಿಮಾ ಕಂಪನಿಗೆ ಪಾವತಿ ಮಾಡಲು ವಿಫಲವಾದರೆ ಬಡ್ಡಿ ಸಹಿತ ಪರಿಹಾರ ನೀಡಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

ಏನಿದು ಘಟನೆ: 2010ರಲ್ಲಿ ಚಾಮರಾಜನಗರ ವಿಭಾಗದ ಕೊಳ್ಳೇಗಾಲ ಘಟಕದಲ್ಲಿ ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚೆಲು ವೆಂಕಟೇಶ್ ಎಲ್ಐಸಿಯಲ್ಲಿ ಜೀವವಿಮೆ ಮಾಡಿಸಿ ಪತ್ನಿ ಭಟ್ಟಮ್ಮ ಅವರನ್ನು ನಾಮ ನಿರ್ದೇಶನ (ನಾಮಿನಿ) ಮಾಡಿದ್ದರು. ಕೊಳ್ಳೇಗಾಲ ಘಟಕವು ಪ್ರತಿ ತಿಂಗಳು ನೌಕರನ ವೇತನದಿಂದ ವಿಮಾ ಕಂತು ಕಡಿತಗೊಳಿಸಿ ವಿಮಾ ಕಂಪನಿಗೆ ಪಾವತಿ ಮಾಡುತ್ತಿತ್ತು.

ಫೆ.2, 2013ರಲ್ಲಿ ಬಸ್ ಚಾಲನೆ ಮಾಡುವಾಗ ಚಾಲಕ ಮೃತಪಟ್ಟಿದ್ದರು. ಬಳಿಕ ಪತ್ನಿ ಭಟ್ಟಮ್ಮ ಪತಿಯ ಮರಣೋತ್ತರ ಅಪಘಾತ ವಿಮೆಯ ರಕ್ಷೆಯ ಹಣ ಪಡೆಯಲು ಎಲ್ಐಸಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನಿಯಮಿತವಾಗಿ ಕಂತು ಜಮೆ ಮಾಡದ ಕಾರಣ ವಿಮೆ ಹಣ ನೀಡಲು ಸಾಧ್ಯವಿಲ್ಲ ಎಂದು ಎಲ್ಐಸಿ ಪ್ರತಿನಿಧಿಗಳು ತಿಳಿಸಿದ್ದರು.

ಕೊಳ್ಳೇಗಾಲ ಘಟಕದಿಂದ ಚಾಮರಾಜನಗರ ಘಟಕಕ್ಕೆ ವರ್ಗಾವಣೆಯಾದ ಬಳಿಕ ಚಾಲಕನ ವೇತನದಲ್ಲಿ ವಿಮಾ ಕಂತು ಕಡಿತಗೊಳಿಸಿಯೂ ವಿಮಾ ಕಂಪನಿಗೆ ಜಮೆ ಮಾಡದೆ ನಿರ್ಲಕ್ಷ್ಯ ತೋರಿರುವ ವಿಚಾರ ಬಯಲಾಯಿತು. ಇದರ ವಿರುದ್ಧ ಮೃತ ನೌಕರನ ಪತ್ನಿ ಭಟ್ಟಮ್ಮ 2014ರಲ್ಲಿ ಎಲ್ಐಸಿ ಪ್ರತಿನಿಧಿಗಳು ಹಾಗೂ ಚಾಮರಾಜನಗರ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಕರು ಹಾಗೂ ಡಿಪೊ ವ್ಯವಸ್ಥಾಪಕರನ್ನು ಎದುರುದಾರನ್ನಾಗಿ ಮಾಡಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.

ಅಂದು ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದ ಆಯೋಗವು ₹ 1.55 ಲಕ್ಷ ಅಪಘಾತ ವಿಮಾ ರಕ್ಷೆಯ ಹಣ ಪಾವತಿಸುವಂತೆ ಕೆಎಸ್ಆರ್ಟಿಸಿ ಹಾಗೂ ವಿಮಾ ಕಂಪನಿಗೆ ಆದೇಶಿಸಿತ್ತು. ಆದೇಶದ ವಿರುದ್ಧ ಎರಡೂ ಸಂಸ್ಥೆಗಳು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದವು. ಬಳಿಕ ದೂರುದಾರರು ವಿಚಾರಣೆಗೆ ನಿಯಮಿತವಾಗಿ ಹಾಜರಾಗದ ಪರಿಣಾಮ ಪ್ರಕರಣ ನನೆಗುದಿಗೆ ಬಿದ್ದಿತ್ತು.

2025ರಲ್ಲಿ ರಾಜ್ಯ ಆಯೋಗ ಕೆಎಸ್ಆರ್ಟಿಸಿಯ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ, ಎಲ್ಐಸಿ ಅರ್ಜಿಯನ್ನು ಮಾತ್ರ ಪುರಸ್ಕರಿಸಿತು. ನೌಕರನ ವೇತನದಲ್ಲಿ ವಿಮಾ ಕಂತು ಕಡಿತಗೊಳಿಸಿಯೂ ವಿಮಾ ಕಂಪನಿಗೆ ಪಾವತಿ ಮಾಡದ ಕೆಎಸ್ಆರ್ಟಿಸಿ ಕ್ರಮ ಸರಿಯಲ್ಲ, 2014ರಿಂದ ಶೇ 10ರ ಬಡ್ಡಿ ಸೇರಿಸಿ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆದೇಶಿಸಿತು.

ರಾಜ್ಯ ಆಯೋಗದ ಆದೇಶದ ಬಳಿಕವೂ ಪರಿಹಾರ ಪಾವತಿಸಲು ವಿಳಂಬ ತೋರಿದ ಕೆಎಸ್ಆರ್ಟಿಸಿ ಅಧಿಕಾರಿಗಳ ವಿರುದ್ಧ ಈಚೆಗೆ ಜಿಲ್ಲಾ ಆಯೋಗ ಬಂಧನ ವಾರೆಂಟ್ ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ ₹ 2.71 ಲಕ್ಷ ಪರಿಹಾರ ಪಾವತಿಸಲು ಮುಂದಾಗಿದ್ದಾರೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಚ್.ಎನ್.ಶ್ರೀನಿಧಿ ಪ್ರಕರಣದ ವಿವರ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-37-1738966231

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.