ಚಾಮರಾಜನಗರ: ಮಲಿಯೂರಿನ ರಾಮನ ಕೆರೆ, ಗಾಣಿಗ ಕೆರೆ, ಅಂತರಗಂಗೆ ಕೆರೆ, ಊರ್ದಹಳ್ಳಿ ಕೆರೆ ತುಂಬಿಸಿ ಅಂತರ್ಜಲ ವೃದ್ಧಿಗೆ ಒತ್ತಾಯಿಸಿ ಶನಿವಾರ ಮಲಿಯೂರಿನ ರಾಮನ ಕೆರೆ ಬಳಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಸಭೆ ನಡೆಸಿತು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಬಗ್ಗೆ ಚರ್ಚೆ ನಡೆಯಿತು.

ಈವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ‘ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ 110 ಕೆರೆಗಳನ್ನು ತುಂಬಿಸುವ ಯೋಜನೆಯಲ್ಲಿ ರಾಮನ ಕೆರೆ, ಗಾಣಿಗ ಕೆರೆ, ಅಂತರಗಂಗೆ ಕೆರೆ, ಊರ್ದಹಳ್ಳಿ ಕೆರೆಗಳು ಸೇರಿವೆಯೇ ಇಲ್ಲವೇ ಎಂಬ ಅನುಮಾನ ಹಾಗೂ ಆತಂಕ ರೈತರಲ್ಲಿದೆ.

ಕೆರೆ ತುಂಬಿಸುವ ಯೋಜನೆ ನಿರ್ದಿಷ್ಟ ಕಾಲಾವಧಿಯೊಳಗೆ ಜಾರಿಯಾಗದಿದ್ದರೆ ಸುತ್ತಮುತ್ತಲಿನ ಗ್ರಾಮಗಳ ರೈತರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರ ಜೊತೆ ಚರ್ಚಿಸಿ ಕೆರೆಗಳನ್ನು ತುಂಬಿಸುವ ಯೋಜನೆ ಶೀಘ್ರ ಅನುಷ್ಠಾನಗೊಳ್ಳುವಂತೆ ಒತ್ತಾಯಿಸಲಾಗುವುದು. ತೀವ್ರ ಬರ ಮತ್ತು ಅಂತರ್ಜಲ ವೃದ್ಧಿ ಕುಸಿತವಾಗಿರುವ ಸಂದರ್ಭದಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆ ಅತ್ಯವಶ್ಯಕವಾಗಿದ್ದು ಜಾರಿಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ರಾಜ್ಯ ಖಜಾಂಚಿ ರಾಜಣ್ಣ, ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಗಾಂಧಿ, ಮಲಿಯೂರು ಮಹೇಂದ್ರ ಸತೀಶ್, ಗೌಡಕೆ ಸೋಮಣ್ಣ, ಶ್ರೀಕಂಠ, ಅರಳಿಕಟ್ಟೆ ಪ್ರಭುಸ್ವಾಮಿ, ಮಹದೇವಪ್ಪ, ಗುರುಪುರ ಚಂದ್ರು, ಕುಲಗಾಣ ಬಸವಣ್ಣ, ಅಂಡುವಿನಹಳ್ಳಿ ಮಹೇಶ್, ಹೊನ್ನೇಗೌಡನಳ್ಳಿ ಮಹೇಶ್, ಮಲಿಯೂರು ರಾಜಪ್ಪ, ಅರಳಿಕಟ್ಟೆ ಬಸವಣ್ಣ, ಕಿಲ್ಲಿಪುರ ಬಸವಣ್ಣ, ನಾಗರಾಜು, ಗೌಡ್ರು ಮಹದೇವಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-37-1962614745

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.