ಚಾಮರಾಜನಗರ: ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ವ ರಾಮಸಮುದ್ರ ವ್ಯಾಪ್ತಿಯ ಬಡಾವಣೆಗಳಿಗೆ ಹಾಗೂ ಗಾಳಿಪುರ ವಾರ್ಡ್ನ ಸೋಮವಾರಪೇಟೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿನೀಡಿ ಈಚೆಗೆ ಕೊರೆಸಿದ್ದ ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಕುರಿತು ಮಾಹಿತಿ ಪಡೆದರು.

ಇದೇವೇಳೆ ಮಾತನಾಡಿ, ಕೊಳವೆ ಬಾವಿ ಕೊರೆಸಿರುವ ಕಡೆ ನೀರು ಸಿಗುತ್ತಿದ್ದು ಮೋಟಾರ್ ಅಳವಡಿಕೆ ಮಾಡಿ ಪೈಪ್ಲೈನ್ ಕಾಮಗಾರಿ ಮಾಡುವ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದೇವೇಳೆ ರಾಮಸಮುದ್ರದಲ್ಲಿ ಮೇ 8ರಿಂದ 11ರವರಗೆ ನಡೆಯುವ ರಾಮಲಿಂಗ ಚೌಡೇಶ್ವರಿ ಅಮ್ಮನವರ 47ನೇ ವರ್ಧಂತ್ಯುತ್ಸವ ಹಾಗೂ ಕತ್ತಿಹಬ್ಬ ನಡೆಯಲಿದ್ದು ಮೆಟ್ಲಿಂಗ್ ರಸ್ತೆಗೆ ಡಾಂಬಾರು ಹಾಕಿಸಬೇಕು, ಕಸ ವಿಲೇವಾರಿಗೆ ಸೂಕ್ತ ಕ್ರಮ ವಹಿಸಬೇಕು, ಚರಂಡಿಗಳನ್ನು ಹೂಳೆತ್ತಿಸಬೇಕು, ಸಮರ್ಪಕ ಕುಡಿಯುವ ನೀರು ಪೂರೈಸಬೇಕು ಎಂದು ಮನವಿ ಮಾಡಿದರು. ನಿವಾಸಿಗಳ ಅಹವಾಲು ಆಲಿಸಿ ಕ್ರಮ ತೆಗೆದುಕೊಳ್ಳುವಂತೆ ಸ್ಥಳದಲ್ಲಿದ್ದ ನಗರಸಭೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಮುಖಂಡರಾದ ರಾಜಪ್ಪ, ಪುಟ್ಟಸ್ವಾಮಿ, ಕುಮಾರ್, ಉಮೇಶ್, ಕರುಣಾಕರ್, ನಂಜುಂಡ, ಶಿವಮೂರ್ತಿ, ನಗರಸಭೆ ಆಯುಕ್ತ ಪರಶುರಾಮ ಛಲವಾದಿ, ಆರೋಗ್ಯ ನಿರೀಕ್ಷಕ ಮಂಜು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-37-99210307

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.