ಚಾಮರಾಜನಗರ: ದೇಶದ ಬಹು ಸಂಸ್ಕೃತಿಯ ಉಳಿವಿಗೆ, ಧರ್ಮಗಳ ಮಧ್ಯೆ ಕೋಮು ಸಾಮರಸ್ಯ ಮೂಡಿಸಲು, ಸೌಹಾರ್ದ ಹಾಗೂ ಸಹಬಾಳ್ವೆಯ ವಾತಾವರಣ ನಿರ್ಮಾಣ ಮಾಡಲು ಜಮಾತೆ ಇಸ್ಲಾಮಿ ಹಿಂದ್ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಜೂನ್

7ರಂದು ಮಧ್ಯಾಹ್ನ 3 ಗಂಟೆಗೆ ನಗರದ ವರ್ತಕರ ಭವನದಲ್ಲಿ ಈದ್ ಸೌಹಾರ್ದ ಕೂಟ ಹಾಗೂ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದು ಜಮಾತೆ ಇಸ್ಲಾಮಿ ಹಿಂದ್ ಮೈಸೂರು ವಲಯ ಸಂಚಾಲಕ ಯು.ಅಬ್ದುಸ್ಸಲಾಮ್ ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಮಧ್ಯಾಹ್ನ 3 ಗಂಟೆಗೆ ಚಿಂತಕ ಶಿವಸುಂದರ್ ಹಾಗೂ ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಭಾಷಣ ಮಾಡಲಿದ್ದಾರೆ. ನಂತರ ಬಹು ಭಾಷಾ ಕವಿಗೋಷ್ಠಿ ನಡೆಯಲಿದ್ದು ಕವಿಗಳಾದ ಶಿವಸುಂದರ್, ಆಸೀಮ, ಅನಿಲಕುಮಾರ್ ಹೊಸೂರು, ಪ್ರೊ.ತಮಿಳ್ ಸೆಲ್ವಿ, ಸ್ವಾಮಿ ಪೊನ್ನಾಚಿ, ಬಿ.ಎಸ್.ವಿನಯ್, ಬನಶಂಕರ ಆರಾಧ್ಯ, ಸಂವರ್ತ ಸಾಹಿಲ್, ಜಡೇಗೌಡ, ಪ್ರಕಾಶ್ ಪುಟ್ಟಪ್ಪ ಭಾಗವಹಿಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಚಿದಾನಂದ ಸಾಲಿ ವಹಿಸಲಿದ್ದಾರೆ ಎಂದರು

ಪತ್ರಕರ್ತ ಅಬ್ರಾಹಂ ಡಿಸಿಲ್ವ, ಚಾಮರಾಜನಗರದ ಮದೀನಾ ಮಸೀದಿ ಅಧ್ಯಕ್ಷ ನಯೀಮ್ ಉಲ್ ಹಕ್, ಪರಿಸರವಾದಿ ಡಿ.ಎಸ್.ದೊರೆಸ್ವಾಮಿ, ಡಾ.ಪಿ.ವೀರಭದ್ರನಾಯ್ಕ್, ವಕೀಲ ಕೆ.ಎಂ.ಶ್ರೀನಿವಾಸ ಮೂರ್ತಿ, ಮದೀನಾ ಮಸೀದಿ ವಸೀಂ ಪಾಶಾ, ಜಮಾತೆ ಇಸ್ಲಾಮಿ ಹಿಂದ್ ಸಂಚಾಲಕ ಝೈನುಲ್ ಅಬಿದಿನ್, ಮಹಮದ್ ಅಲಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಂಗಕರ್ಮಿ ಹಾಗೂ ಹೋರಾಟಗಾರ ಕೆ.ವೆಂಕಟರಾಜು, ಪಿ.ವೀರಭದ್ರ ನಾಯ್ಕ, ಡಿ.ಎಸ್.ದೊರೆಸ್ವಾಮಿ, ಝೈನುಲ್ ಅಬಿದೀನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-37-140516404

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.