ಚಾಮರಾಜನಗರ: ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ 2.0 ಪೋರ್ಟಲ್ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಾದ್ಯಂತ ಕಾಗದರಹಿತ ನೋಂದಣಿ ವ್ಯವಸ್ಥೆ ಜಾರಿಗೊಳಿಸಿದ್ದು ಏ.30ರಿಂದ ನೂತನ ಸೇವೆ ಆರಂಭಗೊಳ್ಳಲಿದೆ.

ನೂತನ ಕಾಗದ ರಹಿತ ನೋಂದಣಿ ವ್ಯವಸ್ಥೆಯು ನಾಗರಿಕ ಕೇಂದ್ರಿತ, ಪಾರದರ್ಶಕ ಹಾಗೂ ಪರಿಣಾಮಕಾರಿ ನೋಂದಣಿ ಸೇವೆಗಳನ್ನು ಒದಗಿಸುವಲ್ಲಿ ಸಹಕಾರಿಯಾಗಲಿದೆ. ಕಾಗದ ಆಧಾರಿತ ನೋಂದಣಿ ವ್ಯವಸ್ಥೆಯಿಂದ ಸಂಪೂರ್ಣ ಡಿಜಿಟಲ್ ಹಾಗು ಕಾಗದರಹಿತ ವ್ಯವಸ್ಥೆಗೆ ಪರಿವರ್ತನೆಯಾಗಲಿದ್ದು ಆಸ್ತಿ ವ್ಯವಹಾರಗಳನ್ನು ನಿರ್ವಹಿಸುವ ವಿಧಾನದಲ್ಲಿ ಬದಲಾವಣೆ ತರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಳೆಯ ಕೈಚಾಲಿತ ವ್ಯವಸ್ಥೆಯಲ್ಲಿದ್ದ ಸಮಸ್ಯೆ ಹಾಗೂ ತೊಡಕುಗಳನ್ನು ನಿವಾರಿಸಲು ಕಾಗದ ರಹಿತ ನೋಂದಣಿ ಜಾರಿಗೆ ಬರಲಿದೆ. ಕಾಗದದ ವ್ಯವಸ್ಥೆಯಲ್ಲಿ ಭೌತಿಕ ದಾಖಲೆಗಳು ನಕಲಿ, ಅಕ್ಷರ ಬದಲಾವಣೆ, ಪುಟ ಬದಲಾವಣೆ ಹಾಗೂ ನಂತರದ ತಿದ್ದುಪಡಿಗಳಿಗೆ ಒಳಪಡುವ ಸಾಧ್ಯತೆ ಇದ್ದು ದೋಷಗಳ ಸಾಧ್ಯತೆ ಹೆಚ್ಚಾಗಿರುತ್ತದೆ. ಕಾಗದರಹಿತ ವ್ಯವಸ್ಥೆಯಲ್ಲಿ ಡಿಜಿಟಲ್ ದಾಖಲೆಗಳು ಎನ್ಕ್ರಿಪ್ಷನ್, ಆಡಿಟ್ ಟ್ರೇಲ್ ಮತ್ತು ಹ್ಯಾಶ್ ಆಧಾರಿತ ಪರಿಶೀಲನೆಯ ಮೂಲಕ ಸುರಕ್ಷಿತವಾಗಿರಲಿವೆ. ಡಿಜಿಟಲ್ ಸಹಿ ಮಾಡಿದ ನಂತರ ಬದಲಾವಣೆಗಳು ಪತ್ತೆಯಾಗಲಿದೆ.

ಪ್ರಸ್ತುತ ನೋಂದಣಿ ವ್ಯವಸ್ಥೆಯಡಿ ದಾಖಲೆಗಳನ್ನು ಸಂಗ್ರಹ ಕೊಠಡಿಗಳಲ್ಲಿ ಇಡಲಾಗುತ್ತಿತ್ತು. ಧೀರ್ಘಾವದಿ, ತೇವಾಂಶ, ಕೀಟ ಬಾಧೆ, ಅಗ್ನಿ ಅವಘಡಗಳಿಂದ ದಾಖಲೆಗಳು ಹಾನಿಗೊಳಗಾಗುವ ಸಂಭವ ಇತ್ತು. ಕಾಗದರಹಿತ ವ್ಯವಸ್ಥೆಯಡಿ ಡಿಜಿಟಲ್ ರೆಪೋಸಿಟರಿಗಳಲ್ಲಿ ಬ್ಯಾಕಪ್ ವ್ಯವಸ್ಥೆಯೊಂದಿಗೆ ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ. ದೀರ್ಘಕಾಲದವರೆಗೆ ಉಳಿಯುವುದರ ಜೊತೆಗೆ ತಕ್ಷಣ ಲಭ್ಯವಾಗುತ್ತವೆ. ದಾಖಲೆಗಳ ಸಾಗಾಟ, ಸಂಗ್ರಹಣೆ, ಕಳೆದುಹೋಗುವ ಭಯ ಇಲ್ಲ.

ಡಿಜಿಟಲ್ ದಾಖಲೆ ಇದ್ದರೆ ಎಲ್ಲ ಹಂತಗಳಲ್ಲಿ ಬಳಕೆ ಮಾಡಬಹುದು, ಕಾಗದಗಳ ಬಳಕೆ ಕಡಿಮೆಯಾಗಲಿದ್ದು ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ. ಆಧಾರ್ ಆಧಾರಿತ ಇ-ಸೈನ್ ಮತ್ತು ಡಿಜಿಟಲ್ ಸಹಿ ಮೂಲಕ ವೇಗ ಮತ್ತು ನಿಖರ ಪರಿಶೀಲನೆ ಸಾಧ್ಯವಾಗಲಿದೆ. ವಿಳಂಬ ಇಲ್ಲದೆ ದಾಖಲೆಗಳನ್ನು ಸುಲಭವಾಗಿ ಪಡೆಯಬಹುದು.

ಕಾವೇರಿ 2.0 ಪೋರ್ಟಲ್ನಡಿ ಅನುಷ್ಠಾನವಾಗುತ್ತಿರುವ ಕಾಗದ ರಹಿತ ನೋಂದಣಿ ಪ್ರಕ್ರಿಯೆಯು ಸರಳ, ಪಾರದರ್ಶಕವಾಗಿರಲಿದ್ದು ಸಮಯ ಉಳಿತಾಯವಾಗಲಿದೆ. ಕಾಗದರಹಿತ ನೋಂದಣಿ ಪ್ರಕ್ರಿಯೆ ವ್ಯವಸ್ಥೆಗೆ ಏ.30ರಂದು ಬೆಳಿಗ್ಗೆ 10 ಗಂಟೆಗೆ ನಗರದ ತಹಶೀಲ್ದಾರ್ ಕಚೇರಿ ಬಳಿ ಇರುವ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೋಂದಣಿ ಮಹಾ ಪರಿವೀಕ್ಷಕ ಹಾಗೂ ಆಯುಕ್ತ ಮುಲೈ ಮುಹಿಲನ್ ಎಂ.ಪಿ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ನೋಂದಣಾಧಿಕಾರಿ ಕಿರಣ್ ಸಿ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.