ಚಾಮರಾಜನಗರ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಕೈಕೊಟ್ಟಿದ್ದು ಕೃಷಿ ಕ್ಷೇತ್ರದ ಮೇಲೆ ಆತಂಕದ ‘ಕಾರ್ಮೋಡ’ ಕವಿದಿದೆ. ಬಿತ್ತನೆ ಚಟುವಟಿಕೆಗಳು ಕುಂಠಿತವಾಗಿದ್ದು ವರುಣನ ಆಗಮನಕ್ಕಾಗಿ ರೈತರು ಆಗಸದತ್ತ ಮುಖಮಾಡಿದ್ದಾರೆ.

ಪ್ರತಿವರ್ಷ ಜಿಲ್ಲೆಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಪೂರ್ವ ಮುಂಗಾರು ಬಿತ್ತನೆ ಕಾರ್ಯ ಬಿರುಸು ಪಡೆಯುತ್ತಿತ್ತು. ಆರಂಭದ ಹದ ಮಳೆ ಬೀಳುತ್ತಿದ್ದಂತೆ ಭೂಮಿಯನ್ನು ಹಸನು ಮಾಡಿಕೊಂಡು ಬಿತ್ತನೆ ಬೀಜ ಖರೀದಿಸಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ಬಾರಿ ಹೊಲದಲ್ಲಿ ಅಂತಹ ದೃಶ್ಯಗಳು ಕಾಣಸಿಗುತ್ತಿಲ್ಲ.

ಉತ್ತಮ ಮಳೆ ನಿರೀಕ್ಷೆಯೊಂದಿಗೆ ಬಿತ್ತನೆ ಬೀಜ ಖರೀದಿಸಿಟ್ಟುಕೊಂಡಿರುವ ರೈತರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ. 15 ದಿನ ಕಳೆದರೆ ಪೂರ್ವ ಮುಂಗಾರು ಬಿತ್ತನೆ ಅವಧಿಯೇ ಪೂರ್ಣಗೊಳ್ಳಲಿದೆ.

ಜಿಲ್ಲೆ ಯಲ್ಲಿ ಪೂರ್ವ ಮುಂಗಾರು ಅವಧಿಯಲ್ಲಿ 25,000 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ 15,000 ಹೆಕ್ಟೇರ್ನಷ್ಟು ಸೂರ್ಯಕಾಂತಿ ಬಿತ್ತನೆ ಗುರಿ ಇತ್ತು. ಆದರೆ ಇದುವರೆಗೂ ಜಿಲ್ಲೆಯಲ್ಲಿ ಕೇವಲ ₹ 1,800 ಹೆಕ್ಟೇರ್ನಷ್ಟು ಮಾತ್ರ ಬಿತ್ತನೆಯಾಗಿದೆ. ತಿಂಗಳಾಂತ್ಯದೊಳಗೆ ಸೂರ್ಯಕಾಂತಿ ಬಿತ್ತನೆ ಮಾಡಲು ಸಾಧ್ಯವಾಗದಿದ್ದರೆ ರೈತರು ಪರ್ಯಾಯ ಬೆಳೆ ಬೆಳೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಸೂರ್ಯಕಾಂತಿ ಬೆಳೆಯುವುದು ಗುಂಡ್ಲುಪೇಟೆ ತಾಲ್ಲೂಕಿನಲ್ಲಿ. ಈ ವರ್ಷ ಮಳೆ ಕೊರತೆಯಿಂದ ಬಿತ್ತನೆ ಭಾರಿ ಕುಸಿತ ಕಂಡಿದೆ. ಗುಂಡ್ಲುಪೇಟೆಯಲ್ಲಿ 14,310 ಹೆಕ್ಟೇರ್ ಸೂರ್ಯಕಾಂತಿ ಬಿತ್ತನೆ ಗುರಿಗೆ ಪ್ರತಿಯಾಗಿ ಇದುವರೆಗೂ 1,250 ಹೆಕ್ಟೇರ್ ಮಾತ್ರ ಬಿತ್ತನೆ ನಡೆದಿದೆ. ಅಂದರೆ ಶೇ 5.44ರಷ್ಟು ಮಾತ್ರ ಬಿತ್ತನೆ ಗುರಿ ಸಾಧನೆಯಾಗಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ 650 ಹೆಕ್ಟೇರ್ ಸೂರ್ಯಕಾಂತಿ ಬಿತ್ತನೆ ಗುರಿಗೆ ಪ್ರತಿಯಾಗಿ 302 ಹೆಕ್ಟೇರ್, ಕೊಳ್ಳೇಗಾಲದಲ್ಲಿ 10 ಹೆಕ್ಟೇರ್ ಹಾಗೂ ಹನೂರಿನಲ್ಲಿ 30 ಹೆಕ್ಟೇರ್ ಗುರಿಗೆ ಪ್ರತಿಯಾಗಿ ಶೂನ್ಯ ಬಿತ್ತನೆಯಾಗಿದೆ.

ಪೂರ್ವ ಮುಂಗಾರು ಅವಧಿಯಲ್ಲಿ ದ್ವಿದಳ ಹಾಗೂ ಏಕದಳ ಧಾನ್ಯಗಳಾದ ಉದ್ದು, ಹೆಸರು, ಅಲಸಂದೆ, ತೊಗರಿ ಬೆಳೆಯಲಾಗುತ್ತಿದ್ದು ಇವುಗಳ ಮೇಲೂ ಮಳೆ ಕೊರತೆ ಪರಿಣಾಮ ಬೀರಿದೆ. ಒಟ್ಟಾರೆ ಪೂರ್ವ ಮುಂಗಾರು ಅವಧಿಯಲ್ಲಿ ಜಿಲ್ಲೆಯ ಒಟ್ಟು ಬಿತ್ತನೆ ಗುರಿಯ ಪೈಕಿ ಶೇ 10ರಷ್ಟು ತಲುಪಲು ಸಾಧ್ಯವಾಗಿಲ್ಲ.

ಮಳೆ ಕೊರತೆ: ಹವಾಮಾನ ಇಲಾಖೆಯ ಅಂಕಿ ಅಂಶಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿ ಮಳೆ ಕೊರತೆಯಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಜ.1ರಿಂದ ಏಪ್ರಿಲ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಸರಾಸರಿ 105 ಮಿ.ಮೀ ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ 68.8 ಮಿ.ಮೀ ಮಳೆ ಬಿದ್ದಿದ್ದು ಶೇ 34.5ರಷ್ಟು ಕೊರತೆಯಾಗಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ 101.9 ಮಿ.ಮೀ ವಾಡಿಕೆ ಮಳೆಗೆ 60.6 ಮಿ.ಮೀ ಮಳೆಯಾಗಿದ್ದು ಶೇ 40.5ರಷ್ಟು ಕೊರತೆ ಉಂಟಾಗಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ 99.5 ಮಿ.ಮೀ ಮಳೆಗೆ ಪ್ರತಿಯಾಗಿ 58.05 ಮಿಮೀ, ಹನೂರು ತಾಲ್ಲೂಕಿನಲ್ಲಿ 98.2 ಮಿಮೀ ವಾಡಿಕೆಗೆ ಪ್ರತಿಯಾಗಿ 41.3, ಯಳಂದೂರಿನಲ್ಲಿ 105.1 ಮಿ.ಮೀ ಮಳೆಗೆ ಪ್ರತಿಯಾಗಿ 58.2 ಮಿ.ಮೀ ಮಳೆಯಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮಾತ್ರ 128.6 ಮಿ.ಮೀಗೆ ಪ್ರತಿಯಾಗಿ 129.7 ಮಿ.ಮೀ ಮಳೆಯಾಗಿದೆ.

ಏಪ್ರಿಲ್ನಲ್ಲಿ ತೀವ್ರ ಕೊರತೆ: ಏಪ್ರಿಲ್ನಲ್ಲಿ ತೀವ್ರ ಮಳೆ ಕೊರತೆಯಾಗಿರುವುದನ್ನು ಕಾಣಬಹುದು. ಚಾಮರಾನಗರ ತಾಲ್ಲೂಕಿನಲ್ಲಿ ಶೇ -86.7, ಗುಂಡ್ಲುಪೇಟೆಯಲ್ಲಿ ಶೇ -45.8, ಕೊಳ್ಳೇಗಾಲದಲ್ಲಿ ಶೇ -82.8, ಹನೂರಿನಲ್ಲಿ ಶೇ -86.4,ಯಳಂದೂರಿನಲ್ಲಿ ಶೇ -92.9 ಮಳೆ ಕೊರತೆ ಉಂಟಾಗಿದೆ.

ಮೇನಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿರುವುದು ಬರದ ಮುನ್ಸೂಚನೆಯಂತೆ ಕಾಣುತ್ತಿದ್ದು ಮುಂಗಾರು ಹಾಗೂ ಹಿಂಗಾರು ಬಿತ್ತನೆಯ ಮೇಲೂ ಗಂಭೀರ ಪರಿಣಾಮ ಬೀರಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-37-1053522369

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.