ಸಂತೇಮರಹಳ್ಳಿ: ಮಳೆಗಾಗಿ ಪ್ರಾರ್ಥಿಸಿ ಮೂಡಲ ಅಗ್ರಹಾರ ಗ್ರಾಮಸ್ಥರು ಬಸವನ ಬೆಟ್ಟದಲ್ಲಿ ಸೋಮವಾರ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ನಡೆಸಿದರು.

ಗ್ರಾಮಸ್ಥರು ಮುಂಗಾರು ಮಳೆ ವಿಳಂಬವಾದ ಹಿನ್ನೆಲೆಯಲ್ಲಿ ಪ್ರತಿ ವರ್ಷವು ಉಮ್ಮತ್ತೂರು ಹಾಗೂ ಜನ್ನೂರು ಗ್ರಾಮಗಳ ನಡುವೆ ಇರುವ ಬಸವನ ಬೆಟ್ಟದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಗ್ರಾಮದ ಪ್ರತಿ ಮನೆಗಳಲ್ಲಿ ಮುದ್ದೆ, ಅನ್ನ ಸಾಂಬರ್, ವಿವಿಧ ಬಗೆಯ ಪಲ್ಯಗಳು ಸೇರಿದಂತೆ ಆಹಾರಗಳನ್ನು ಸ್ವೀಕರಿಸಿದರು.

ಎತ್ತುಗಳನ್ನು ಸಿಂಗರಿಸಿ ಹೂವು ಹೊಂಬಾಳೆಗಳೊಂದಿಗೆ ಅಲಂಕರಿಸಿದ ಎತ್ತಿನ ಗಾಡಿಗಳಿಗೆ ಆಹಾರ ಪದಾರ್ಥಗಳನ್ನು ಶೇಖರಿಸಿಕೊಂಡ ಸುತ್ತಲಿನ ಗ್ರಾಮಸ್ಥರು ಉಮ್ಮತ್ತೂರು ಮಾರ್ಗವಾಗಿ ಬಸವನ ಬೆಟ್ಟಕ್ಕೆ ಹೋದರು. ಅಲ್ಲಿರುವ ಬಸವನ ವಿಗ್ರಹಕ್ಕೆ ಗ್ರಾಮಸ್ಥರು ಮಳೆ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಕುಳಿತು ಸಾಮೂಹಿಕವಾಗಿ ಊಟ ಬಡಿಸಿಕೊಂಡು ಪ್ರಸಾದ ಸೇವಿಸಿದರು.

ನಂತರ ಗ್ರಾಮಕ್ಕೆ ಹಿಂತಿರುಗಿ ಎತ್ತಿನ ಗಾಡಿಯಲ್ಲಿ ಬಸವನ ವಿಗ್ರಹ ಕೂರಿಸಿ ಗ್ರಾಮದ ಬೀದಿಗಳಲ್ಲಿ ನಂದಿಕಂಭ ಹಾಗೂ ತಮಟೆ ಸದ್ದಿನೊಂದಿಗೆ ಮೆರವಣಿಗೆ ನಡೆಸಿದರು. ಪ್ರತಿ ಮನೆಗಳಲ್ಲಿ ಬಸವ ಮೂರ್ತಿಗೆ ಪೂಜೆ ಸಲ್ಲಿಸಿದರು.

ಮಳೆ ಬೀಳುವುದು ವಿಳಂಬವಾದರೆ ಗ್ರಾಮದಿಂದ ಪ್ರತಿ ವರ್ಷವು ಬಸವನ ಬೆಟ್ಟದಲ್ಲಿ ಪೂಜೆ ಸಲ್ಲಿಸುತ್ತೇವೆ. ಪೂಜೆ ಸಲ್ಲಿಸಿದ ದಿನ ಅಥವಾ ವಾರದೊಳಗೆ ಮಳೆ ಬೀಳುತ್ತದೆ ಎಂದು ಗ್ರಾಮದ ಮಂಜುನಾಥ್ ಹೇಳುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-37-930650203

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.