ಸಂತೇಮರಹಳ್ಳಿ: ಮುಂಗಾರು ವಿಳಂಬವಾದ ಹಿನ್ನೆಲೆಯಲ್ಲಿ ಹೋಬಳಿ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ. ಕೃಷಿ ಪಂಪ್ಸೆಟ್ಗಳಲ್ಲಿ ನೀರಿನ ಒರತೆ ಪಾತಾಳಕ್ಕಿಳಿದಿದ್ದು, ರೈತರ ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿದೆ. ಬಿಸಲಿನ ಬೇಗೆಗೆ ಬೆಳೆಗಳು ಒಣಗಲು ಆರಂಭಿಸಿವೆ.

ಹೋಬಳಿ ವ್ಯಾಪ್ತಿಯಲ್ಲಿ ಬಹಳಷ್ಟು ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಾಳೆ, ಕಬ್ಬು ಬೆಳೆದಿದ್ದಾರೆ. ಮುಂಗಾರು ಹಂಗಾಮಿನ ಅವಧಿಯಲ್ಲಿ ಈ ಹೊತ್ತಿಗೆ ಒಂದೆರಡು ದೊಡ್ಡ ಮಳೆ ಸುರಿಯಬೇಕಾಗಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದಾಗಿ ಬೆಳೆಗಳು ಬಾಡುತ್ತಿವೆ. ಬೇಸಿಗೆ ಬಿಸಿಲಿನ ಝಳ ಕೃಷಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟುನೀಡುವ ಆತಂಕ ಎದುರಾಗಿದೆ.

ಬಿಸಿಲಿನ ಶಾಖಕ್ಕೆ ಅಂತರ್ಜಲ ಮಟ್ಟ ಕಡಿಮೆಯಾಗಿದ್ದು ಪಂಪ್ಸೆಟ್ಗಳಲ್ಲಿ ನೀರು ಜಿನುಗುತ್ತಿಲ್ಲ. ಕೊಳವೆ ಬಾವಿಗಳನ್ನು ನಂಬಿ ಕೃಷಿ ಮಾಡಿರುವ ರೈತರ ಬದುಕು ಅತಂತ್ರವಾಗಿದೆ. ಕೈಲಿದ್ದ ಹಣವನ್ನು ಬೆಳೆ ಬೆಳೆಯಲು ಬಂಡವಾಳವಾಗಿ ಉಪಯೋಗಿಸಿರುವ ರೈತರು ಲಾಭದ ಮಾತಿರಲಿ ಖರ್ಚು ಮಾಡಿದ್ದಷ್ಟಾದರೂ ಕೈಗೆ ಬರಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.

ಹೋಬಳಿಯಲ್ಲಿ ಪ್ರತಿದಿನ ಸಂಜೆಯ ಹೊತ್ತು ಮೋಡ ಕವಿದ ವಾತಾವರಣ ನಿರ್ಮಾಣವಾದರೂ ಮಳೆ ಬೀಳುವ ಲಕ್ಷಣ ಕಾಣುತ್ತಿಲ್ಲ. ಬಾಳೆ ಹಾಗೂ ಕಬ್ಬು ಫಸಲು ಒಣಗಿ ನಿಂತಿದ್ದು ನೀರಿಗಾಗಿ ಬಾಯ್ತೆರೆದು ನಿಂತಿವೆ.

ಸಂತೇಮರಹಳ್ಳಿ, ಹೆಗ್ಗವಾಡಿಪುರ, ಕುದೇರು, ದೇಮಹಳ್ಳಿ, ಉಮ್ಮತ್ತೂರು, ನವಿಲೂರು ಹಾಗೂ ಬಾಗಳಿ ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು ಹೆಚ್ಚು ಬಾಳೆ ಹಾಗೂ ಕಬ್ಬು ಬೆಳೆದಿದ್ದು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಬೇಸಿಗೆಯ ದಗೆ ಹೆಚ್ಚಾದರೆ ಫಸಲು ಬಾಡುವುದರ ಜತೆಗೆ ಇಳುವರಿ ಕುಸಿತವಾಗುವ ಆತಂಕದಲ್ಲಿ ಸಿಲುಕಿದ್ದಾರೆ.

‘ಸಂತೇಮರಹಳ್ಳಿ ಹೋಬಳಿ ಬಹುತೇಕ ಮಳೆಯಾಶ್ರಿತ ಪ್ರದೇಶವಾಗಿದ್ದು, ರೈತರು ಮುಂಗಾರು ಅವಧಿಗೆ ಹೆಸರು, ಅಲಸಂದೆ, ಉದ್ದು ಹಾಗೂ ಸೂರ್ಯಕಾಂತಿ ಬಿತ್ತಲು ಹಾತೊರೆಯುತ್ತಿದ್ದಾರೆ. ಬಿತ್ತನೆ ಬೀಜಗಳನ್ನು ಸಂಗ್ರಹಿಸಿಕೊಟ್ಟಿಕೊಂಡಿರುವ ರೈತರು ಆಗಸದತ್ತ ಮುಖ ಮಾಡಿದ್ದಾರೆ. ಭೂಮಿ ಹಸನು ಮಾಡುವಷ್ಟಾದರೂ ಮಳೆ ಬಿದ್ದರೆ ಬಿತ್ತನೆ ಮಾಡುತ್ತೇವೆ. ಮುಂದೆ ಮಳೆಯಾಗುತ್ತದೆ ಎಂಬ ನಿರೀಕ್ಷೆ ಇದೆ’ ಎನ್ನುತ್ತಾರೆ ರೈತ ಮಹೇಶ್ವರಪ್ಪ.

‘ಈಗಾಗಲೇ ಸೂರ್ಯಕಾಂತಿ ಬಿತ್ತನೆ ಅವಧಿ ಮೀರುತ್ತಾ ಬಂದಿದ್ದು ಇನ್ನೊಂದು ವಾರ ಮಳೆ ಬೀಳದಿದ್ದರೆ ಬಿತ್ತನೆ ಸಾಧ್ಯವಿಲ್ಲ. ನಂತರ ಮಳೆ ಬಿದ್ದರೂ ಸೂರ್ಯಕಾಂತಿ ಬಿತ್ತಿ ಪ್ರಯೋಜನವಾಗುವುದಿಲ್ಲ’ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

‘ಮಧ್ಯಮ ಮತ್ತು ಅತಿ ಸಣ್ಣ ಮಳೆಯಾಶ್ರಿತ ವ್ಯವಸಾಯ ನಂಬಿರುವ ರೈತರು ಕೃಷಿಯನ್ನೂ ಮಾಡಲಾಗದೆ, ಕೂಲಿಗೂ ಹೋಗಲಾರದೆ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದಾರೆ. ಈ ಬಾರಿ ಮಳೆ ಕೈಕೊಟ್ಟರೆ ಪಟ್ಟಣಗಳಿಗೆ ಗುಳೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎನ್ನುತ್ತಾರೆ ರೈತರು.

‘ಈಗಾಗಲೇ ಕೆಲವರು ದೂರದ ಪಟ್ಟಣ ಪ್ರದೇಶಗಳಿಗೆ ಗಾರೆ ಕೆಲಸ ಸೇರಿದಂತೆ ಕೂಲಿ ಕೆಲಸಗಳಿಗೆ ತೆರಳುತ್ತಿದ್ದಾರೆ. ಕೆಲವರು ಪ್ರತಿ ತಿಂಗಳು ಬರುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ನಂಬಿ ದಿನ ದೂಡುತ್ತಿದ್ದಾರೆ. ಮಳೆ ಬೀಳದಿದ್ದರೆ ರೈತರ ಸ್ಥಿತಿ ಗಂಭೀರವಾಗಲಿದೆ, ಸರ್ಕಾರ ಸಣ್ಣ ರೈತ ಕುಟುಂಬಗಳ ಹಿತ ಕಾಯಲು ತಾತ್ಕಾಲಿಕ ಪರಿಹಾರ ನೀಡಬೇಕು’ ಎಂದು ರೈತ ಜಯಶಂಕರ್ ಒತ್ತಾಯಿಸುತ್ತಾರೆ.

‘ಅಂತರ್ಜಲ ಸಮಸ್ಯೆಗೆ ಪರಿಹಾರವಾಗಿ ಜಿಲ್ಲಾಡಳಿತ ಇಂಗುಗುಂಡಿಗಳನ್ನು ನಿರ್ಮಾಣ ಮಾಡಬೇಕು, ಕೆರೆಗಳಿಗೆ ನೀರು ತುಂಬಿಸಬೇಕು, ರಾಜ ಕಾಲುವೆಗಳಲ್ಲಿ ಹರಿಯುವ ಮಳೆಯ ನೀರು ಭೂಮಿಗೆ ಇಂಗಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಬೇಕು, ರೈತರ ನಷ್ಟ ತುಂಬಿಸಿಕೊಡಬೇಕು’ ಎಂದು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಬಸವಣ್ಣ ಒತ್ತಾಯಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು, ಉದ್ದು, ಅಲಸಂದೆ ಹಾಗೂ ಸೂರ್ಯಕಾಂತಿ ಬಿತ್ತನೆ ಬೀಜಗಳು ಲಭ್ಯವಿದೆ. ಅಗತ್ಯ ಪ್ರಮಾನದ ಬಿತ್ತನೆ ಬೀಜದ ದಾಸ್ತಾನು ಇರಿಸಿಕೊಳ್ಳಲಾಗಿದೆ. ಮಳೆ ಬಾರದ ಹಿನ್ನೆಲೆಯಲ್ಲಿ ರೈತರು ರೈತಸಂಪರ್ಕ ಕೇಂದ್ರಕ್ಕೆ ಬಿತ್ತನೆ ಬೀಜ ಖರೀದಿಗೆ ಆಗಮಿಸುತ್ತಿಲ್ಲ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-37-117295930

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.