ಚಾಮರಾಜನಗರ: ಶ್ರೀರಾಮನ ಸದ್ಗುಣಗಳ ಪಾಲನೆ ಅಗತ್ಯ ಇಲ್ಲಿನ ಹಿಂದೂ ಜಾಗೃತಿ ಸಮಿತಿಯ ಮುಖಂಡ ಶ್ರೀಕಂಠ ಸ್ವಾಮಿ ಹೇಳಿದರು.

ಸಮಿತಿಯಿಂದ ಶ್ರೀರಾಮನವಮಿ ಆಚರಿಸಿ ಅವರು ಮಾತ

ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ರಾಮನವಮಿ ಆಚರಿಸಲಾಯಿತು.

ಶ್ರೀರಾಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ಸಂಘ ಸಂಸ್ಥೆಗಳು ಸಾರ್ವಜನಿಕವಾಗಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿ ಹಬ್ಬವನ್ನು ಆಚರಿಸಿದವು.

ಚಾಮರಾಜನಗರದಲ್ಲಿ ರಾಮ ನವಮಿಯ ಹಿಂದೂ ಜಾಗೃತಿ ಸಮಿತಿ ವತಿಯಿಂದ ರಾಮನವಮಿ ಆಚರಿಸಲಾಯಿತು. ಮಾರಿಗುಡಿ ಮುಂಭಾಗ ರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಭಕ್ತರಿಗೆ ಪಾನಕ, ಮಜ್ಜಿಗೆ ವಿತರಣೆ ಮಾಡಲಾಯಿತು.

ಸಮಿತಿಯ ಮುಖಂಡ ಶ್ರೀಕಂಠ ಸ್ವಾಮಿ ಮಾತನಾಡಿ, ‘ಶ್ರೀರಾಮನ ಸದ್ಗುಣಗಳ ಪಾಲನೆ ಅಗತ್ಯ, ರಾಮನವಮಿಯು ದಯೆ ಮತ್ತು ಸದ್ಗುಣದ ಹಾದಿಯಲ್ಲಿ ಸಾಗಲು, ಉತ್ತಮ ವ್ಯಕ್ತಿಗಳಾಗಿ ರೂಪುಗಳ್ಳಲು ಸಹಕಾರಿಯಾಗಿದೆ. ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಮೂಲವನ್ನು ಮರುಪರಿಶೀಲಿಸಲು ಮತ್ತು ಮರುಹೊಂದಿಸಲು ರಾಮನವಮಿ ಅನುವು ಮಾಡಿಕೊಡುತ್ತದೆ’ ಎಂದರು.

ಈ ಸಂದರ್ಭ ಸಮಿತಿಯ ಕೃಷ್ಣಕುಮಾರ್, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್, ಮುಖಂಡರಾದ ಕುಲಗಾಣ ಶಾಂತಮೂರ್ತಿ, ರಾಜು, ನಟರಾಜು, ಗುರು, ಶಿವರಾಜು ಇದ್ದರು.

ಕೊಳ್ಳೇಗಾಲ: ಇಲ್ಲಿನ ವಿವಿಧ ಬಡಾವಣೆಗಳಲ್ಲಿ ಶ್ರೀರಾಮ ನವಮಿ ಜಯಂತಿಯನ್ನು ಶುಕ್ರವಾರ ಭಕ್ತಿಭಾವದಿಂದ ಆಚರಿಸಲಾಯಿತು.

ನಗರದ ಕಾವೇರಿ ರಸ್ತೆಯ ದೊಡ್ಡ ನಾಯಕರ ಬೀದಿಯ ಚಾವಡಿ, ವಾಲ್ಮೀಕಿ ವೃತ್ತ, ದೇವಾಂಗಪೇಟೆಯ ದೇವಲ ಮಹರ್ಷಿ ವೃತ್ತ, ಪಂಚರಂಗಿ ವೃತ್ತ, ಗರಿಡಿ ಬೀದಿ, ಮುನೇಶ್ವರಸ್ವಾಮಿ ದೇವಸ್ಥಾನ ಬೀದಿ, ಹೆಳವರ ಬೀದಿ, ಓಂಶಕ್ತಿ ದೇವಸ್ಥಾನ ಹಾಗೂ ನಾರಾಯಣ ಗುರುಗಳ ವೃತ್ತ ಸೇರಿದಂತೆ ಹಲವೆಡೆ ಭಕ್ತರಿಗೆ ಮಜ್ಜಿಗೆ, ಪಾನಕ ಮತ್ತು ಕೋಸಂಬರಿ ವಿತರಣೆ ನಡೆಯಿತು.

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಪದಾಧಿಕಾರಿಗಳು ವಿವಿಧ ಕಡೆಗಳಲ್ಲಿ ಸೇವಾ ಕಾರ್ಯಗಳನ್ನು ನೆರವೇರಿಸಿದರು. ಕಾವೇರಿ ರಸ್ತೆಯ ರಾಮಮಂದಿರ ರಾಮಭಜನಾ ಸಭಾ ಭವನದ ಪದಾಧಿಕಾರಿಗಳು ಹಾಗೂ ವೀರಾಂಜನೇಯ ದೇವಸ್ಥಾನದ ಪ್ರಧಾನ ಅರ್ಚಕ ಟಿ.ವಿ.ಎಸ್. ರಾಘವನ್ ಅವರಿಂದಲೂ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

ದೊಡ್ಡ ನಾಯಕರ ಬೀದಿಯ ಚಾವಡಿಯಲ್ಲಿ ರಾಮನವಮಿ ಅಂಗವಾಗಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಚಿಕ್ಕಮಾದು, ಸುರೇಂದ್ರ, ನಾಗರಾಜು, ಈಶ್ವರ, ವೆಂಕಟರಾಮ್, ಗೋವಿಂದ, ಸುಂದರ, ತಂಬಡಿಗಳು ಹಾಗೂ ಟೈಲರ್ ಒಕ್ಕೂಟದ ರಂಗಸ್ವಾಮಿ ಭಾಗವಹಿಸಿದ್ದರು.

ದೇವಲ ಮಹರ್ಷಿ ವೃತ್ತದಲ್ಲಿ ನಾಗಮಂಟಪ ಸೇವಾ ಸಮಿತಿ 37 ವರ್ಷಗಳಿಂದ ನಿರಂತರ ನಡೆಸುತ್ತಿರುವ ಶ್ರೀರಾಮನವಮಿ ಅಂಗವಾಗಿ ಮಜ್ಜಿಗೆ, ಪಾನಕ ವಿತರಣೆ ಮಾಡಲಾಯಿತು. ರವಿ ಬಾಬು, ಪ್ರಕಾಶ್, ಗೋವಿಂದರಾಜು, ವಿಜಯಕುಮಾರ್, ಬಾಲಣ್ಣ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-37-419656744

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.