ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯ ಇಕ್ಕೆಲಗಳಲ್ಲಿರುವ ನೂರಾರು ಸಾಲು ಮರಗಳಿಗೆ ಕಂಟಕ ಎದುರಾಗಿದೆ. ಅವೈಜ್ಞಾನಿಕವಾಗಿ ಫುಟ್ಪಾತ್ ಕಾಮಗಾರಿಗೆ ಸಾಲುಮರಗಳು ಬಲಿಯಾಗುತ್ತಿವೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಫುಟ್ಪಾತ್ ಕಾಮಗಾರಿ ಆರಂಭವಾದಗಲೇ ಮರಗಳ ಬೇರುಗಳಿಗೆ ಗಂಭೀರ ಸ್ವರೂಪದ ಹಾನಿ ಮಾಡಲಾಗಿತ್ತು. ಇದೀಗ ಮರಗಳ ಬುಡಕ್ಕೆ ಜೆಲ್ಲಿ ಸುರಿಯಲಾಗಿದೆ. ಇದರಿಂದ ಮರಗಳ ಬೇರುಗಳ ಉಸಿರಾಟಕ್ಕೆ ತೊಂದರೆಯಾಗಲಿದೆ. ಮಳೆಗಾಲದಲ್ಲಿ ಬಿದ್ದ ನೀರು ಬೇರುಗಳಿಗೆ ತಲುಪುದೆ ಮರಗಳ ಬೆಳವಣಿಗೆ ಕುಂಠಿತವಾಗಲಿದ್ದು ಹಂತಹಂತವಾಗಿ ನಾಶವಾಗಲಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರಸಭೆಯಾಗಲಿ, ಜಿಲ್ಲಾಡಳಿತವಾಗಲಿ ಸಾರ್ವಜನಿಕರ ಸ್ಥಳಗಳಲ್ಲಿ, ರಸ್ತೆಗಳ ಬದಿ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯ ಮಾಡುತ್ತಿಲ್ಲ. ಪರಿಸರ ಪ್ರೇಮಿಗಳು, ಸಂಘ ಸಂಸ್ಥೆಗಳು ನೆಟ್ಟ ಗಿಡಗಳನ್ನಾದರೂ ಉಳಿಸಿಕೊಳ್ಳುವ ಕೆಲಸಕ್ಕೆ ಮುಂದಾಗದಿರುವುದು ವಿಪರ್ಯಾಸ.

ಪರಿಸರ ಪ್ರೇಮಿ ಸಾಲುಮರದ ವೆಂಕಟೇಶ್ 2019ರಲ್ಲಿ ಜೋಡಿ ರಸ್ತೆಯ ಇಕ್ಕೆಲಗಳಲ್ಲಿ ನೆಟ್ಟ ನೂರಾರು ಗಿಡಗಳನ್ನು ಸಾಲುಮರಗಳಾಗಿದ್ದು ಸಾರ್ವಜನಿಕರಿಗೆ ನೆರಳು ನೀಡುತ್ತಿವೆ. ಬಿಸಿಲಿನ ಝಳಕ್ಕೆ ಬಳಲಿ ಬಂದವರಿಗೆ ನೆರಳು ನೀಡುತ್ತಿವೆ. ಬೀದಿ ಬದಿ ವ್ಯಾಪಾರಿಗಳಿಗೂ ಆಶ್ರಯ ನೀಡಿವೆ. ಜೋಡಿ ರಸ್ತೆಯ ಅಂದ ಹೆಚ್ಚಿಸುತ್ತಿರುವ ಮರಗಳ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದಿರುವುದು ವಿಪರ್ಯಾಸ ಎಂದು ಟೀಕಿಸಿದ್ದಾರೆ.

ಹೊಂಗೆ, ಗಸಗಸೆ ಗಿಡ, ಕಾಡು ಬಾದಾಮಿ, ಬಸವನಪಾದ ಸಹಿತ ಹಲವು ಬಗೆಯ ಹೂ ಬಿಡುವ ಮರಗಳು ತಂಪಾದ ಗಾಳಿ ಬೀಸುತ್ತ ಬೇಸಗೆಯಲ್ಲಿ ನೆರಳು ಕೊಡುತ್ತಿವೆ. ಸಮೃದ್ಧವಾಗಿ ಬೆಳೆದಿರುವ ಮರಗಳನ್ನು ನಾಶ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.

ಪುಟ್ಪಾತ್ ಅಭಿವೃದ್ದಿ ನೆಪದಲ್ಲಿ ಸಾಲು ಮರಗಳಿಗೆ ಹಾನಿ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಪಟ್ಟಣ ಠಾಣೆಗೆ ದೂರು ನೀಡಿದೆ.

ಯುವ ಮೋರ್ಚಾ ಅಧ್ಯಕ್ಷ ಸೂರ್ಯಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಠಾಣೆಗೆ ತೆರಳಿ ಸಹಾಯಕ ಇನ್ಸ್ಪೆಕ್ಟರ್ಗೆ ದೂರು ನೀಡಿದರು.

ಜೋಡಿ ರಸ್ತೆಯಲ್ಲಿ ಬೇಜವಾಬ್ದಾರಿಯುತವಾಗಿ ಫುಟ್ಪಾತ್ ಕಾಮಗಾರಿ ನಡೆಯುತ್ತಿದ್ದು ಪರಿಸರಕ್ಕೆ ಹಾನಿಯಾಗುತ್ತಿದೆ. ಪರಿಸರ ಪ್ರೇಮಿ ವೆಂಕಟೇಶ್ ಸಂಘ ಸಂಸ್ಥೆಗಳ ನೆರವಿನೊಂದಿಗೆ ನೆಟ್ಟಿರುವ ಗಿಡಗಳನ್ನು ಕಾಮಗಾರಿ ಹೆಸರಿನಲ್ಲಿ ನಾಶ ಮಾಡುತ್ತಿದ್ದಾರೆ. ಈಗಾಗಲೇ ಬೇರುಗಳಿಗೆ ಜೆಸಿಬಿಯಿಂದ ಹಾನಿ ಮಾಡಲಾಗಿದ್ದು ಇದೀಗ ಬುಡಕ್ಕೆ ಜೆಲ್ಲಿ ಸಿಮೆಂಟ್ ಹಾಕಲಾಗುತ್ತಿದೆ.

ಸಾರ್ವಜನಿಕರು, ಪ್ರಾಣಿ, ಪಕ್ಷಿಗಳಿಗೆ ನೆರಳು ಹಾಗೂ ಆಶ್ರಯ ನೀಡುತ್ತಿರುವ ಶುದ್ಧ ಗಾಳಿ ಹೊರಸೂಸುತ್ತಿರುವ ಮರಗಳನ್ನು ಉಳಿಸಿಕೊಳ್ಳಬೇಕು. ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದುದೂರಿನಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ಸೋಮವಾರಪೇಟೆ ಗುರು, ಮಹೇಶ್, ನಗರ ಘಟಕದ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ನಾಯಕ್, ಗ್ರಾಮಾಂತರ ಮಂಡಲ ಅಧ್ಯಕ್ಷ ಹರದನಹಳ್ಳಿ ಪ್ರದೀಪ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-37-487096053

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.