ಕೊಳ್ಳೇಗಾಲ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಮದ್ಯವ್ಯಸನಿಗಳ ಹಾವಳಿ ಹೆಚ್ಚಾಗಿದ್ದು, ಪ್ರವಾಸಿಗರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಶಿವನ ಸಮುದ್ರ ಮುಖ್ಯರಸ್ತೆಯ ಬದಿಯಲ್ಲಿ ರಾಜಾರೋಷವಾಗಿ ಮದ್ಯ ಸೇವನೆ ಮಾಡಲಾಗುತ್ತಿದ್ದು, ಮಹಿಳೆಯರು ಮಕ್ಕಳು ಸೇರಿದಂತೆ ಪ್ರವಾಸಿಗರು ತೀವ್ರ ಮುಜುಗರ ಅನುಭವಿಸುತ್ತಿದ್ದಾರೆ.

ಶಿವನಸಮುದ್ರ ರಸ್ತೆಯ ಮೂಲಕವೇ ಪ್ರಸಿದ್ಧ ಭರಚುಕ್ಕಿ ಜಲಪಾತ, ವೆಸ್ಲಿ ಸೇತುವೆ, ಮಧ್ಯ ರಂಗನಾಥ ಸ್ವಾಮಿ ದೇವಾಲಯ, ಸೋಮೇಶ್ವರ ದೇವಾಲಯ, ಶಿವನಸಮುದ್ರದ ಆದಿಶಕ್ತಿ ಮಾರಮ್ಮಮ ದೇವಾಲಯ, ದರ್ಗಾ, ಕಾವೇರಿ ನದಿಯ ತೀರ ಸೇರಿದಂತೆ ಹಲವು ಪ್ರವಾಸಿಗಳ ತಾಣಗಳಿಗೆ ಹೋಗಬೇಕು.

‘ಈ ತಾಣಗಳನ್ನು ವೀಕ್ಷಿಸಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಪ್ರತಿ ವಾರಾಂತ್ಯದಲ್ಲಿ ಹಾಗೂ ರಜೆಯ ದಿನಗಳಲ್ಲಿ ಭಾರಿ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಕಿರಿದಾದ ರಸ್ತೆಯ ಎರಡೂ ಬದಿಗಳಲ್ಲಿ ಸಾರ್ವಜನಿಕವಾಗಿ ಮದ್ಯ ಸೇವನೆ ಮಾಡುವುದು, ಅಸಭ್ಯವಾಗಿ ವರ್ತಿಸುವುದು, ಕ್ಷುಲ್ಲಕ ಕಾರಣಕ್ಕೆ ಜಗಳು ನಡೆಯುತ್ತಿದ್ದು, ಮದ್ಯವ್ಯಸನಿಗಳ ಹಾವಳಿಗೆ ಪ್ರವಾಸಿಗರು ಬೇಸತ್ತಿದ್ದಾರೆ. ಇಷ್ಟಾದರೂ ಪೊಲೀಸ್ ಇಲಾಖೆಯಾಗಲಿ, ಸ್ಥಳೀಯ ಆಡಳಿತವಾಗಲಿ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ’ ಎಂಬ ದೂರುಗಳು ವ್ಯಾಪಕವಾಗಿವೆ.

ಶಿವನಸಮುದ್ರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಹಲವು ಮದ್ಯದ ಅಂಗಡಿಗಳು, ಬಾರ್ ಅಂಡ್ ರೆಸ್ಟೊರೆಂಟ್ಗಳು ಇವೆ. ಮದ್ಯಸೇವನೆಗೆ ಬರುವವರು ರೆಸ್ಟೊರೆಂಟ್ನ ಒಳಗಾಗಲಿ, ಬದಿಯಲ್ಲಾಗಲಿ ಸೇವಿಸದೆ ರಸ್ತೆಯ ಬದಿಯ ಕಟ್ಟೆಗಳ ಮೇಲೆ ಕುಳಿತು ಮದ್ಯಪಾನ ಮಾಡುತ್ತಿದ್ದಾರೆ. ನಶೆಯಲ್ಲಿ ರಸ್ತೆಯ ಮೇಲೂ ಕುಳಿತು ಮದ್ಯಸೇವನೆ ಮಾಡುವುದುಂಟು. ಬೈಕ್ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ.

ಕೆಲವರು ಅಕ್ಕಪಕ್ಕದ ಜಮೀನಿನೊಳಗೆ ಮದ್ಯವನ್ನು ಕೊಂಡೊಯ್ದು ಮದ್ಯ ಸೇವಿಸುತ್ತಿದ್ದಾರೆ, ನಶೆಯಲ್ಲಿ ಬಾಟೆಲ್ಗಳನ್ನು ಕೃಷಿ ಜಮೀನಿನಲ್ಲಿ ಹೊಡೆದು ಹಾಕುತ್ತಿದ್ದು ರೈತರಿಗೆ ಉಳುಮೆ ಮಾಡುವಾಗ ಗಾಜಿನ ಚೂರುಗಳು ಚುಚ್ಚಿ ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ.

ಮದ್ಯವ್ಯಸನಿಗಳ ಉಪದ್ರವ ತಾಳಲಾರದೆ ಪ್ರವಾಸಿಗರು ಬೇಸತ್ತಿದ್ದಾರೆ. ರಜಾ ದಿನಗಳಲ್ಲಿ ಶಿವನಸಮುದ್ರ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಸಂಚಾರ ಠಾಣೆಯ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ರಸ್ತೆಯ ಬದಿ ಸಹಿತ, ಅಪಾಯಕಾರಿ ತಿರುವುಗಳು ಸೇರಿದಂತೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ.

‘ಶಿವನಸಮುದ್ರ ರಸ್ತೆಯಲ್ಲಿ ಮದ್ಯವಸ್ಯನಿಗಳ ಕಿರಿಕಿರಿ ಹಾಗೂ ಸಂಚಾರ ದಟ್ಟಣೆಯ ಸಮಸ್ಯೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ನಿಯಮಿತವಾಗಿ ಬರುವುದಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು’ ಎಂದು ಒತ್ತಾಯಿಸುತ್ತಾರೆ ಶಿವನಸಮುದ್ರದ ಸೋಮಣ್ಣ.

ಪಾರ್ಟಿ ಪ್ರಿಯರು ಮದ್ಯ ಸೇವಿಸಿ ಆವಾಚ್ಯ ಶಬ್ದಗಳಿಂದ ನಿಂದಿಸುವುದು, ಜೋರಾಗಿ ಕಿರುಚಾಡುವುದು, ಅಸಭ್ಯವಾಗಿ ವರ್ತಿಸುತ್ತಿದ್ದು ಪ್ರಶ್ನಿಸಿದರೆ ಪ್ರವಾಸಿಗರ ಜೊತೆಗೆ ಜಗಳಕ್ಕೆ ನಿಲ್ಲುತ್ತಾರೆ. ಈಗಾಗಲೇ ಶಿವನಸಮುದ್ರ ರಸ್ತೆಯಲ್ಲಿ ಹಲವು ಬಾರಿ ಹೊಡೆದಾಟಗಳು ನಡೆದಿವೆ. ಕುಡುಕರ ಕಾಟದಿಂದ ಮತ್ತೆ ತಾಲ್ಲೂಕಿನ ಪ್ರವಾಸಿತಾಣಗಳಿಗೆ ಬರುವುದು ಬೇಡ ಎನಿಸುವಷ್ಟು ಪ್ರವಾಸಿಗರಿಗೆ ರೇಜಿಗೆ ಹುಟ್ಟಿಸುತ್ತಿದ್ದಾರೆ.

‘ನಿರ್ದಿಷ್ಟ ಸ್ಥಳದಲ್ಲಿ ಮದ್ಯಪಾನ ಮಾಡಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸಿದರೆ ತೀವ್ರ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ, ಮಹಿಳೆಯರು ಮಕ್ಕಳು ಭಯಭೀತರಾಗುತ್ತಿದ್ದಾರೆ. ಪ್ರವಾಸಿಗರಿಗೆ ಕಿರಿಕಿರಿ ಆಗುವುದರ ಜೊತೆಗೆ ತಾಲ್ಲೂಕಿಗೂ ಕೆಟ್ಟ ಹೆಸರು ಬರಲಿದೆ’ ಎನ್ನುತ್ತಾರೆ ಬೆಂಗಳೂರು ಮೂಲದ ಪ್ರವಾಸಿಗ ರಮೇಶ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-37-2095753060

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.