ಸರಗೂರು: ‘ಪಟ್ಟಣದ ಲೋಡರ್ಸ್ ಅಸೋಸಿಯೇಷನ್ ಕಟ್ಟಡದ ಚಾವಣಿ ನಿರ್ಮಿಸಲು ಸಂಪೂರ್ಣ ಅನುದಾನ ನೀಡುತ್ತೇನೆ’ ಎಂದು ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು.

ಪಟ್ಟಣದ ಅಸೋಸಿಯೇಷನ್ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ತಂದೆ, ಮಾಜಿ ಶಾಸಕ ದಿ.ಚಿಕ್ಕಮಾದು ಹಾಗೂ ರಾಜಕೀಯ ಗುರು ಆರ್.ಧ್ರುವನಾರಾಯಣ್ ಅವರು ಲೋಡರ್ಸ್ ಸಂಘಕ್ಕೆ ಅನುದಾನವನ್ನು ನೀಡುತ್ತಾ ಬಂದಿದ್ದರು. ಅವರನ್ನು ಅನುಸರಿಸಿ ನಾನೂ ಅನುದಾನ ನೀಡುತ್ತಿದ್ದೇನೆ’ ಎಂದರು.

‘ಚಾವಣಿಯಿಂದ ನೀರು ಸೋರುತ್ತಿದ್ದು ಎಂದು ಗಮನಕ್ಕೆ ತಂದು ಹಿನ್ನೆಲೆಯಲ್ಲಿ ₹5 ಲಕ್ಷ ಅನುದಾನ ನೀಡಿ ಕೆಲಸ ಮಾಡಿಸಿದ್ದೇನೆ’ ಎಂದರು.

ಅಸೋಸಿಯೇಷನ್ ಕಾರ್ಯದರ್ಶಿ ಗೋವಿಂದರಾಜು ಮಾತನಾಡಿ, ‘ನಮ್ಮ ಸಂಘದಲ್ಲಿ 200ರಿಂದ 250 ಲೋಡರ್ಸ್ಗಳು ಇದ್ದಾರೆ. ಈ ಚಿಕ್ಕ ಕಟ್ಟಡದಲ್ಲಿ ಸಭೆ ಸಮಾರಂಭಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಚಾವಣಿ ನಿರ್ಮಾಣಕ್ಕೆ ಸಹಾಯ ಮಾಡಬೇಕ’ ಎಂದು ಮನವಿ ಮಾಡಿಕೊಂಡರು.

ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ‘ಕಟ್ಟಡ ನಿರ್ಮಾಣ ರೂಪುರೇಷೆಗಳನ್ನು ಮಾಡಿಕೊಳ್ಳಿ 20 ರಿಂದ 25 ದಿನಗಳಲ್ಲಿ ಕೆಲಸ ಮಾಡಿಸುತ್ತೇನೆ. ಮುಂದಿನ ದಿನಗಳಲ್ಲಿ 50ನೇ ವರ್ಷದ ಬೆಳ್ಳಿ ಹಬ್ಬ ಆಚರಣೆ ಮಾಡೋಣ’

‘ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಸ್ವಾಮಿ, ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ಎಸ್.ಎನ್.ನಾಗರಾಜು, ಲೋಡರ್ಸ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಜವರಯ್ಯ(ಕೂಸಣ್ಣ), ಉಪಾಧ್ಯಕ್ಷ ಸಿ.ವೆಂಕಟೇಶ್, ಕಾರ್ಯದರ್ಶಿ ಶ್ರೀಕಂಠ, ಸಹ ಕಾರ್ಯದರ್ಶಿ ರವಿ ಕುಮಾರ್, ಖಜಾಂಚಿ ಚಿಕ್ಕಣ್ಣ ಶೆಟ್ಟಿ, ಸದಸ್ಯರಾದ ಬಸವರಾಜು, ಮಂಜು, ಮಹದೇವಸ್ವಾಮಿ, ಚಂದ್ರ, ಗೊವಿಂದರಾಜು ರಂಗಸ್ವಾಮಿ, ರಂಗನಾಥ್, ಗೋಪಾಲಯ್ಯ, ರಾಧಾಕೃಷ್ಣ, ತಂಬಾಕು ಮಂಡಳಿ ಸದಸ್ಯ ಪರಶಿವಮೂರ್ತಿ, ತಾ.ಪಂ.ಮಾಜಿ ಅಧ್ಯಕ್ಷ ಮನುಗನಹಳ್ಳಿ ಗುರುಸ್ವಾಮಿ, ಜಲೀಲ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-38-501450610

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.