ಕೊಳ್ಳೇಗಾಲ: ತಾಲ್ಲೂಕಿನ ಶಿವನಸಮುದ್ರ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡು ಕಂಗೊಳಿಸುತ್ತಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಟ್ಟಿರುವ ಪುರಾಣ ಪ್ರಸಿದ್ಧ ಹಾಗೂ ಚೋಳ ರಾಜರ ಕಾಲದಲ್ಲಿ ನಿರ್ಮಿಸಲಾಗಿರುವ ಶ್ರೀಮಧ್ಯರಂಗನಾಥಸ್ವಾಮಿ ದೇಗುಲ ಉದ್ಘಾಟನೆ ಮೇ.21ರಂದು ಅದ್ದೂರಿಯಾಗಿ ನೇರವೇರಲಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಬೆಳಿಗ್ಗೆ 10.50 ರಿಂದ 11.50ರವರೆಗೆ ಸಲ್ಲುವ ಶುಭ ಕಟಕ ಲಗ್ನದಲ್ಲಿ ದೇಗುಲ ಉದ್ಘಾಟನೆ ಮಾಡಲಿದ್ದಾರೆ. ಉದ್ಘಾಟನೆ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ದೇಗುಲದಲ್ಲಿ ಪಾಂಚರಾತ್ರಾ ಆಗಮಶಾಸ್ತ್ರದ ಪ್ರಕಾರ ಶ್ರೀ ಭೂನೀಳಾ, ಶ್ರೀರಂಗನಾಯಕಿ ಸಮೇತ ಶ್ರೀಜಗನ್ ಮೋಹನ ರಂಗನಾಥಸ್ವಾಮಿ ಪೂರ್ವಕ ಸ್ಥಿರ–ಚರ ಬಿಂಬಗಳ ಅಷ್ಟಬಂಧನ ಹಾಗೂ ವಿಮಾನ ಗೋಪುರಗಳ ಧ್ವಜಸ್ತಂಭ ಜೀರ್ಣೋದ್ಧಾರ ಮಹಾ ಸಂಪ್ರೋಕ್ಷಣಾ ಮಹೋತ್ಸವದ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. 21ರಂದು ದೇಗುಲದಲ್ಲಿ ಮಹಾ ಕುಂಬಾಭೀಷೇಕ ಸಂಪ್ರೋಕ್ಷಣಾ ಮಹೋತ್ಸವ ಜರುಗಲಿದೆ.

ದೇಗುಲ ಇರುವ ಶಿವನಸಮುದ್ರ ಗ್ರಾಮವು ಐತಿಹಾಸಿಕವಾಗಿ ಗುರುತಿಸಿಕೊಂಡಿದ್ದು, ಕಾವೇರಿ ಮಡಿಲಿನಲ್ಲಿ ನೆಲೆಯೂರಿದೆ. ಏಳು ಹೆಡೆಗಳ ಆದಿಶೇಷನ ವಿಗ್ರಹದ ಮೇಲೆ ಶಯನಾವಸ್ಥೆಯಲ್ಲಿರುವ ಮಧ್ಯರಂಗನಾಥ ಸ್ವಾಮಿ ಪವಡಿಸುತ್ತಿದ್ದಾನೆ. ದೇವತೆಗಳಾದ ಇಂದ್ರ ಮತ್ತು ಚಂದ್ರರ ಶಾಪ ವಿಮೋಚನೆಯಾದ ಸ್ಥಳ ಎಂಬ ಪುರಾಣ ಐತಿಹ್ಯ ಇದೆ.

ಶ್ರೀರಂಗಪಟ್ಟಣವನ್ನು ಆದಿರಂಗ ಎಂತಲೂ, ಶಿವನಸಮುದ್ರವನ್ನು ಮಧ್ಯರಂಗ ಎಂತಲೂ, ತಮಿಳುನಾಡಿನಲ್ಲಿರುವ ದೇಗುಲವನ್ನು ಅಂತ್ಯರಂಗ ಎಂತಲೂ ಕರೆಯುವುದು ಪ್ರತೀತಿ. ಶ್ರೀರಂಗವನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ದರ್ಶನ ಮಾಡಿದರೆ ಮೋಕ್ಷ ದೊರೆಯಲಿದೆ ಎಂಬುದು ಭಕ್ತರಲ್ಲಿರುವ ಅಚಲವಾದ ನಂಬಿಕೆ.

ಪಂಚಾಂಗದ ಪ್ರಕಾರ ವೈಕುಂಠ ಏಕಾದಶಿಯ ದಿನ ಆದಿರಂಗ, ಮಧ್ಯರಂಗ ಹಾಗೂ ಅಂತ್ಯರಂಗ ದೇವಾಲಯಗಳನ್ನು ಒಂದೇ ದಿನ ನೋಡಿದರೆ ಒಳಿತಾಗುತ್ತದೆ ಎನ್ನಲಾಗುತ್ತದೆ. ಹಾಗಾಗಿ ವೈಕುಂಠ ಏಕಾದಶಿ ದಿನ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ.

ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಿರುವ ಮಧ್ಯರಂಗನ ದರ್ಶನ ಮಾಡಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದ್ದು ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ದೇವೇಗೌಡರು ದೇವಸ್ಥಾನಕ್ಕೆ ಭೇಟಿನೀಡಿದ್ದಾರೆ.

ಗಣ್ಯರು ಭಾಗಿ; ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಉಪಸ್ಥಿತಿಯಲ್ಲಿ ದೇಗುಲ ಲೋಕಾರ್ಪಣಾ ಕಾರ್ಯಗಳು ನಡೆಯಲಿದ್ದು ಹನೂರು ಶಾಸಕ ಎಂ.ಆರ್.ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್ ಪ್ರಸಾದ್ ಭಾಗವಹಿಸಲಿದ್ದಾರೆ.

ಸಂಸದ ಸುನಿಲ್ ಬೋಸ್, ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ವಿಧಾನ ಪರಿಷತ್ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.