ಚಾಮರಾಜನಗರ: ನಗರದ ಯಡಬೆಟ್ಟದಲ್ಲಿರುವ ಸರ್ಕಾರಿ ಮೆಡಿಕಲ್ ಕಾಲೇಜಿನ ಕೇಂದ್ರ ಪ್ರಯೋಗಾಲಯದ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸುವುದು ಬೇಡ ಎಂದು ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಎಂ.ಬಿ.ನಾಗಣ್ಣಗೌಡ ಒತ್ತಾಯಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿರುವ ಕೇಂದ್ರ ಪ್ರಯೋಗಾಲಯದ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿರುವುದು ಜನವಿರೋಧಿ ಕ್ರಮವಾಗಿದ್ದು ಬಡ ರೋಗಿಗಳಿಗೆ ಆರ್ಥಿಕ ಹೊರೆಯಾಗಲಿದೆ ಎಂದರು.

ಕ್ಷೇತ್ರದ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ಕೇಂದ್ರ ಪ್ರಯೋಗಾಲಯದ ನಿರ್ವಹಣೆಯು ಸರ್ಕಾರಿ ವ್ಯವಸ್ಥೆಯಲ್ಲಿ ಮುಂದುವರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಿಂದೆ ಮೆಡಿಕಲ್ ಕಾಲೇಜಿಗೆ ಸೇರಿದ ಪ್ರಯೋಗಾಲಯದ ನಿರ್ವಹಣೆಯನ್ನು ಕಾಲೇಜಿನಿಂದಲೇ ನಿರ್ವಹಿಸಲಾಗುತಿತ್ತು. ವಾರ್ಷಿಕ ₹ 3 ಕೋಟಿ ವ್ಯಯವಾಗುತ್ತಿತ್ತು. ಎಲ್ಲ ಬಗೆಯ ಕಾಯಿಲೆಗಳ ತಪಾಸಣೆ ನಡೆಯುತ್ತಿತ್ತು. ಖಾಸಗಿ ಲ್ಯಾಬೊರೇಟರಿಗಳ ಲಾಬಿಗೆ ಮಣಿದಿರುವ ಸಿಮ್ಸ್ ಆಡಳಿತ ಪ್ರಯೋಗಾಲಯದ ನಿರ್ವಹಣೆಯನ್ನು ಮ್ಯಾಕ್ಸಿಂ ಬಯೋಮೆಡಿಕಲ್ಸ್ ಎಂಬ ಏಜೆನ್ಸಿಗೆ ವಹಿಸುವ ತೀರ್ಮಾನ ಮಾಡಿದ್ದಾರೆ.

ಈ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನ ನಡೆದಿದೆ. ಇದರಿಂದ ವಾರ್ಷಿಕ ಹೆಚ್ಚುವರಿ ಹೊರೆ ಬೀಳಲಿದ್ದು ಆಸ್ಪತ್ರೆಯಲ್ಲಿ ತಪಾಸಣಾ ದರ ದುಬಾರಿಯಾಗಲಿದೆ ಎಂದರು.

ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಮಾಹಿತಿಯಲ್ಲಿ ಪ್ರಯೋಗಾಲಯದ ಯಂತ್ರಗಳೆಲ್ಲವೂ ಸುಸ್ಥಿತಿಯಲ್ಲಿರುವುದು ತಿಳಿದುಬಂದಿದೆ. ಹೀಗಿರುವಾಗ ಖಾಸಗಿಯವರಿಗೆ ಪ್ರಯೋಗಾಲಯದ ನಿರ್ವಹಣೆಯ ಗುತ್ತಿಗೆ ನೀಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ಸಿಮ್ಸ್ ನಿರ್ದೇಶಕರ ಅವಧಿಯಲ್ಲಿ ನಿಯಮಬಾಹಿರವಾಗಿ ನಡೆಸಿರುವ ಖರೀದಿ, ಕಾಮಗಾರಿಗಳು, ಹುದ್ದೆಗಳ ಬಡ್ತಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಬೇಕು. ಪ್ರಯೋಗಾಲಯದ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗೆ ವಹಿಸಿರುವ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಎಸ್.ಕೆ.ರಾಜೂಗೌಡ, ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ರಾಷ್ಟ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಶಿವದೇವಪ್ಪ, ಎಸ್.ಸಿದ್ದಯ್ಯ, ಚಿನ್ನಸ್ವಾಮಿ, ಮಾದೇಶ್, ರೈತಸಂಘದ ಮಲ್ಲೇಶ್, ಮಂಜು ಕೊತ್ತಲವಾಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-37-934451391

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.