ಚಾಮರಾಜನಗರ: ಜಿಲ್ಲಾಡಳಿತ ಭವನದ ಹಳೆಯ ಕೆಡಿಪಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಸಮಿತಿ ಸಭೆ ಗೊಂದಲಗಳ ಗೂಡಾಯಿತು.

ಎಸ್ಸಿ ಎಸ್ಟಿ ಸಮುದಾಯಗಳ ಸಮಸ್ಯೆಗಳ ಚರ್ಚೆಗೆ ವೇದಿಕೆಯಾಗಬೇಕಿದ್ದ ಸಭೆ ಗದ್ದಲ, ಆರೋಪ, ಪ್ರತ್ಯಾರೋಪಗಳಿಗೆ ಸೀಮಿತವಾಯಿತು. ಪರಿಶಿಷ್ಟ ಪಂಗಡದ ಕೆಲವು ಮುಖಂಡರು ಸಭೆಯನ್ನು ಬಹಿಷ್ಕರಿಸಿ ಹೊರನಡೆದ ಪ್ರಸಂಗವೂ ನಡೆಯಿತು.

ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಹಿತರಕ್ಷಣಾ ಸಮಿತಿ ಸಭೆಯನ್ನು ಒಟ್ಟಿಗೆ ಕರೆದಿದ್ದು ಸಮಂಜಸವಲ್ಲ ಎಂದು ಸಭೆಯ ಆರಂಭದಲ್ಲೇ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಪ್ರತ್ಯೇಕವಾಗಿ ಸಭೆ ನಡೆಸಿದ್ದರೆ ಎಸ್ಸಿ ಹಾಗೂ ಎಸ್ಟಿ ಸಮುದಾಯದವರು ಸಮಸ್ಯೆ, ಅಹವಾಲು ಹೇಳಿಕೊಳ್ಳಲು ಹೆಚ್ಚಿನ ಸಮಯಾವಕಾಶ ದೊರೆಯುತ್ತಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಧ್ಯಾಹ್ನ 3 ಗಂಟೆ ನಂತರ ಸಭೆ ನಿಗದಿಪಡಿಸಿರುವುದು ಸರಿಯಲ್ಲ; ಸಂಜೆ ಸಭೆ ಆರಂಭಿಸಿದರೆ ನೂರಾರು ಕಿ.ಮೀ ದೂರದಲ್ಲಿರುವವರು ಭಾಗವಹಿಸಲು ಹೇಗೆ ಸಾದ್ಯ, ಸಭೆ ಮುಗಿಸಿಕೊಂಡು ಮರಳಲು ಸಾಧ್ಯವೇ, ಸಭೆಯ ಉದ್ದೇಶ ಈಡೇರುತ್ತದೆಯೇ ಎಂದು ಪ್ರಶ್ನಿಸಿದರು.

ಇದೇವೇಳೆ ಸಮಾಜ ಕಲ್ಯಾಣ ಇಲಾಖೆ ಮುನಿರಾಜ್ ಅನುಪಾಲನಾ ವರದಿ ಓದುವಾಗ ಅಡ್ಡಿಪಡಿಸಿದ ಮುಖಂಡರು ‘ಕಳೆದ ಸಭೆಯಲ್ಲಿ ಚರ್ಚೆಯಾದ ವಿಚಾರ ಹಾಗೂ ತೆಗೆದುಕೊಂಡ ಕ್ರಮಗಳನ್ನು ಓದಲು ಸಭೆಯ ಬಹುಪಾಲು ಸಮಯ ಮೀಸಲಿಟ್ಟಿರುವುದು ಸರಿಯಲ್ಲ. 2 ವರ್ಷಗಳ ಹಿಂದೆ ನಡೆದ ಸಭೆಯಲ್ಲಿ ಚರ್ಚೆಯಾದ ಸಮಸ್ಯೆಗಳಿಗೆ ಸಮರ್ಪಕ ಕ್ರಮವನ್ನೂ ತೆಗೆದುಕೊಂಡಿಲ್ಲ. ಹಿಂದಿನ ಸಭೆಯಲ್ಲಿ 160ಕ್ಕೂ ಹೆಚ್ಚು ವಿಷಯಗಳು ಚರ್ಚೆಯಾಗಿದ್ದು ಎಲ್ಲವನ್ನೂ ಓದುತ್ತಾ ಕುಳಿತರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಜಿಲ್ಲಾಧಿಕಾರಿ ಶ್ರೀರೂಪಾ ‘ಅನುಪಾಲನಾ ವರದಿಯಲ್ಲಿರುವ ವಿಚಾರಗಳ ಕುರಿತು ಪ್ರತ್ಯೇಕವಾಗಿ ಅಧಿಕಾರಿಗಳ ಸಭೆ ನಡೆಸುತ್ತೇನೆ, ಈಗ ಕುಂದುಕೊರತೆಗಳನ್ನು ಆಲಿಸಿ ಬಗೆಹರಿಸಲಾಗುವುದು, ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡಬೇಕು ಎಂದು ಮುಖಂಡರನ್ನು ಸಮಾಧಾನಪಡಿಸಲು ಯತ್ನಿಸಿದರು. ಬಳಿಕ ಕೆಲಕಾಲ ಸಭೆ ಮುಂದುವರಿಯಿತು.

ಆದಿವಾಸಿ ಸಮುದಾಯಗಳ ಮುಖಂಡ ಮಾದೇಗೌಡ ಮಾತನಾಡಿ, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಬೆಟ್ಟ ವ್ಯಾಪ್ತಿಯ 20 ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ನನೆಗುದಿಗೆ ಬಿದ್ದಿದ್ದು ಆದಿವಾಸಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಮೆಂದಾರೆ ಗ್ರಾಮದಲ್ಲಿ 45 ಕುಟುಂಬಗಳು ಅರಣ್ಯದಿಂದ ಹೊರಬರಲು ಸಿದ್ಧರಾಗಿದ್ದರೂ ನಿವೇಶನ, ಕೃಷಿ ಭೂಮಿ, ಪರಿಹಾರ ಸಹಿತ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಶ್ರೀರೂಪಾ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ, ‘ಹಾಡಿಗಳಿಗೆ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಶೇ 50ರಷ್ಟು ಪೂರ್ಣಗೊಂಡಿದ್ದು ಶೀಘ್ರ ಮುಗಿಸಲಾಗುವುದು’ ಎಂದು ಭರವಸೆ ನೀಡಿದರು.

ಇದೇವೇಳೆ ಮಾದೇಗೌಡ ಮಾತನಾಡಿ, ‘ಕೆ.ಗುಡಿ ರಸ್ತೆ ಕಾಮಗಾರಿ ಆರಂಭವಾಗಿ 1 ವರ್ಷ ಕಳೆದರೂ ಫೂರ್ಣಗೊಂಡಿಲ್ಲ. ಕಾಡಂಚಿನ ಜನರು ನಿತ್ಯದ ಕೆಲಸ ಕಾರ್ಯಗಳಿಗೆ ಕೆ.ಗುಡಿಯಿಂದ ಬಿಆರ್ ಹಿಲ್ಸ್–ಯಳಂದೂರು ಮಾರ್ಗವಾಗಿ ಚಾಮರಾಜನಗರ ತಲುಪಬೇಕಾಗಿದೆ. ಹಿಂದೆ ₹40 ಸಾರಿಗೆ ವೆಚ್ಚವಾಗುತ್ತಿತ್ತು, ಈಗ ₹120 ವ್ಯಯ ಮಾಡಬೇಕಾಗಿದೆ, ಸಮಯವೂ ದುಪ್ಪಟ್ಟಾಗಿದೆ ಎಂದು ಸಮಸ್ಯೆ ಹೇಳಿಕೊಂಡರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಕೆ.ಗುಡಿ ರಸ್ತೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಕೆಲವೇ ದಿನಗಳಲ್ಲಿ ಬಸ್ಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಆದಿವಾಸಿ ಸಮುದಾಯದ ಮಹಿಳೆ ಪುಟ್ಟಮ್ಮ ಮಾತನಾಡಿ, ‘ದಶಕಗಳ ಹಿಂದೆ ಕಾರೆಮಾಳ ಹಾಗೂ ಮೇಲುಕಾಮನಹಳ್ಳಿ ಗ್ರಾಮಗಳಲ್ಲಿ ವಾಸವಿದ್ದವರಿಗೆ ಪುನರ್ವಸತಿ ಕಲ್ಪಿಸಿ ಸಂತ್ರಸ್ತರಿಗೆ ಪರ್ಯಾಯ ಭೂಮಿ ನೀಡಿದೆ. ಆದರೆ, ಭೂಮಿಯನ್ನು ಫಲಾನುಭವಿಗಳ ಹೆಸರಿಗೆ ದುರಸ್ತು ಮಾಡಿಕೊಟ್ಟಿಲ್ಲ, ಪಹಣಿಯೂ ಸಿಕ್ಕಿಲ್ಲ, ಪ್ರಭಾವಿಗಳು ಜಮೀನು ಒತ್ತುವರಿ ಮಾಡಿಕೊಳ್ಳುತ್ತಿದ್ದು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ಕೂಡಲೇ ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿ ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು, ಫಲಾನುಭವಿಗಳ ಹೆಸರಿಗೆ ಪಹಣಿ ಮಾಡಿಕೊಡಬೇಕು ಎಂದು ತಹಶೀಲ್ದಾರ್ಗೆ ಜಿಲ್ಲಾಧಿಕಾರಿ ಶ್ರೀರೂಪಾ ಸೂಚಿಸಿದರು. ಸಿಇಒ ಮೋನಾ ರೋತ್, ಎಸ್ಪಿ ಎಂ.ಮುತ್ತುರಾಜ್, ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಡಿ.ಸಿ.ಶೃತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ ಸೇರಿದಂತೆ ಹಲವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-37-368332989

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.