ಮಂಗಳವಾರ, ಜೂನ್ 28, 2022
25 °C

ಟಿಎಪಿಸಿಎಂಎಸ್ ಚುನಾವಣೆ: 12 ನಿರ್ದೇಶಕರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್‌) ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಂಘದ ಏಳು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಐದು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಈ ಪೈಕಿ ಒಂದು ಸ್ಥಾನಕ್ಕೆ ಸಮವಾಗಿ ಮತಗಳು ಬಿದ್ದುದರಿಂದ ಲಾಟರಿ ಮೂಲಕ ಆಯ್ಕೆ ನಡೆಯಿತು. 

ಸಂಘದ ಮಾಜಿ ಅಧ್ಯಕ್ಷ ಎಚ್.ಎಂ.ಬಸವಣ್ಣ ( ಸುಂದ್ರಪ್ಪ) ಬಣವು ಚುನಾವಣೆಯಲ್ಲಿ ಮೇಲುಗೈ ಸಾಧಿಸಿದೆ. ಅವರು ಸೇರಿದಂತೆ ಬಣದ 11 ಮಂದಿ ಜಯಗಳಿಸಿದ್ದಾರೆ.

ಟಿಎಪಿಸಿಎಂಎಸ್ ಕಚೇರಿ ಸಭಾಂಗಣದಲ್ಲಿ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದು ಎಚ್.ಎಂ.ಬಸವಣ್ಣ ಸೇರಿದಂತೆ ಏಳು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ ಐದು ಸ್ಥಾನಗಳಿಗೆ ಚುನಾವಣೆ ನಡೆಯಿತು. ಈ ಪೈಕಿ ನಾಲ್ಕರಲ್ಲಿ ಬಸವಣ್ಣ ಬಣದವರೇ ಗೆದ್ದರು. ಒಂದು ಸ್ಥಾನದಲ್ಲಿ ಶಿವಕುಮಾರ್ ಅವರಿಗೆ ಲಾಟರಿ ಮೂಲಕ ಅದೃಷ್ಟ ಒಲಿಯಿತು.

ಕೃಷಿ ಪತ್ತಿನ ಸಹಕಾರ ಸಂಘಗಳ ಎ ವರ್ಗದ ಕ್ಷೇತ್ರದಿಂದ ಅರಕಲವಾಡಿ ಪಿಎಸಿಸಿ ಬ್ಯಾಂಕಿನಿಂದ ಹೊಸಹಳ್ಳಿ ರಾಜೇಶ್ ( 7 ಮತಗಳು), ಸಂತೇಮರಹಳ್ಳಿ ಪಿಎಸಿಸಿ ಬ್ಯಾಂಕಿನಿಂದ ಮಹದೇವಪ್ರಭು (7 ಮತಗಳು), ಮಾದಾಪುರ ಪಿಎಸಿಸಿ ಬ್ಯಾಂಕಿನಿಂದ ಕಾಡಹಳ್ಳಿ ರೂಪೇಶ್ (6 ಮತಗಳು), ಬಿಸಲವಾಡಿ ಪಿಎಸಿಸಿ ಬ್ಯಾಂಕಿನಿಂದ ಬಂದಿಗೌಡನಹಳ್ಳಿ ಶಿವಕುಮಾರ್ (6 ಮತಗಳು) ಜಯಗಳಿಸಿದರೆ, ಈ ತಂಡದಲ್ಲಿ ಬಂಡಾಯವಾಗಿ ಸ್ಪರ್ಧೆ ಮಾಡಿದ್ದ ಉಡಿಗಾಲ ಪಿಎಸಿಸಿ ಬ್ಯಾಂಕ್‌ನ ತಮ್ಮಡಹಳ್ಳಿ ಶಿವಕುಮಾರ್( 6 ಮತಗಳು) ಲಾಟರಿ ಎತ್ತುವ ಮೂಲಕ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಎಚ್.ಎಂ.ಬಸವಣ್ಣ, ನಾಗೇಶನಾಯಕ, ಅಂಕಯ್ಯ, ಕೃಷ್ಣ, ಕೆ.ವಿ.ನಾಗರಾಜು, ರತ್ನಮ್ಮ, ಶಾಂತಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಎಸ್.ನಾಗೇಶ್ ಘೋಷಿಸಿದರು.

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಎನ್‌ರಿಚ್ ಮಹದೇವಸ್ವಾಮಿ, ನಲ್ಲೂರು ಮಹದೇವಪ್ಪ, ಬಿಸಲವಾಡಿ ಕುಮಾರ್, ಪುಟ್ಟಸ್ವಾಮಿಗೌಡ, ಕೊಟ್ಟಂಬಳ್ಳಿ ವೀರಭದ್ರಸ್ವಾಮಿ, ಗೂಳಿಪುರ ನಾಗೇಂದ್ರ, ಮುತ್ತುನಾಯಕ ಇತರರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು