ಚಾಮರಾಜನಗರ: ಜಿಲ್ಲಾಧಿಕಾರಿ ಶ್ರೀರೂಪಾ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಿ.ಎಸ್.ಆರ್ ಹಾಗೂ ಎನ್.ಜಿ.ಒ ಮುಖ್ಯಸ್ಥರ ಸಭೆ ನಗರದಲ್ಲಿ ನಡೆಯಿತು.

ಜಿಲ್ಲೆಯ ಆದ್ಯತಾ ಅಭಿವೃದ್ಧಿ ಕ್ಷೇತ್ರಗಳ ಜೊತೆಗೆ ಇತರ ಸಮಾಜಮುಖಿಯಾದ ಚಟುವಟಿಕೆಗಳ ಅನುಷ್ಠಾನದ ಕುರಿತು ನಡೆದ ಸಭೆಯಲ್ಲಿ ಪ್ರಮುಖ ಯೋಜನೆ ಮತ್ತು ಅಗತ್ಯತೆಗಳನ್ನು ಪ್ರಸ್ತುತಪಡಿಸಲಾಯಿತು. ಜಿಲ್ಲಾಡಳಿತ ಕಾರ್ಯಕ್ರಮಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಎನ್ಜಿಒಗಳ ಮುಖ್ಯಸ್ಥರು ಭರವಸೆ ನೀಡಿದರು.

ಜಿಲ್ಲೆಯ ಅಗತ್ಯಗಳಿಗೆ ಅನುಗುಣ ವಾಗಿ ವಿಶೇಷವಾಗಿ ಆದಿವಾಸಿಗಳು ವಾಸವಾಗಿರುವ ಪ್ರದೇಶಗಳಲ್ಲಿ ಸಮುದಾಯದ ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ನೀಡಲು ಸಿ.ಎಸ್.ಆರ್ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಕಂಪನಿಗಳಿಗೆ ಸೂಚಿಸಲಾಯಿತು.

ಸರ್ಕರಿ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆ, ಶಾಲೆಗಳ ಮೂಲಸೌಕರ್ಯಕ್ಕೆ ಒತ್ತು ಸಹಿತ ಶೈಕ್ಷಣಿಕ ಕ್ಷೇತ್ರಕ್ಕೆ ಸಮಗ್ರ ಬೆಂಬಲ ನೀಡುವುದು, ಆದಿವಾಸಿಗಳು ವಾಸವಿರುವ ಹಾಡಿಗಳಿಗೆ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ನೆರವು ಹಾಗೂ ಬುಡಕಟ್ಟು ಸಮುದಾಯಗಳಿಗೆ ಉದ್ಯೋಗ ಅವಕಾಶ ಮತ್ತು ಜೀವನೋಪಾಯ ಅಭಿವೃದ್ಧಿ, ಕೌಶಲಾಭಿವೃದ್ಧಿ ಹಾಗೂ ಉದ್ಯೋಗ ಪಡೆಯಲು ಪೂರಕ ತರಬೇತಿ ಹಾಗೂ ವೃತ್ತಿ ಮಾರ್ಗದರ್ಶನ ನೀಡುವ ಕುರಿತು ಚರ್ಚಿಸಲಾಯಿತು. ಈಗಾಗಲೇ ನಡೆಯುತ್ತಿರುವ ಸಿ.ಎಸ್.ಆರ್ ಚಟುವಟಿಕೆಗಳ ಬಗ್ಗೆ ಅವಲೋಕಿಸಿ ಮುಂದಿನ ವರ್ಷದ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು. ಎನ್.ಜಿ.ಓ ಮುಖ್ಯಸ್ಥರು ಕಾರ್ಯವಿಧಾನ, ಆವಿಷ್ಕಾರ ಮತ್ತು ಕ್ಷೇತ್ರಾನುಭವಗಳನ್ನು ಹಂಚಿಕೊಂಡು ಜಿಲ್ಲಾಡಳಿತದೊಂದಿಗೆ ಸಹಕಾರ ನೀಡುವುದಾಗಿತಿಳಿಸಿದರು.

ಜಿಲ್ಲಾ ಸಿ.ಎಸ್.ಆರ್ ಸಂಯೋಜಕಿ ರಕ್ಷಿತಾ ಸಭೆಯಲ್ಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-37-866985868

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.