ಚಾಮರಾಜನಗರ: ರಾಷ್ಟ್ರೀಯ ಅರಿಶಿನ ಮಂಡಳಿ ಸದಸ್ಯ ವಿಷ್ಣುವರ್ಧನ ದೇವಲ ನಾಯ್ಕ್ ನಗರದ ಎಪಿಎಂಸಿಯಲ್ಲಿರುವ ಅರಿಸಿನ ಮಾರುಕಟ್ಟೆಗೆ ಭೇಟಿ ನೀಡಿದರು.

ಮಾರುಕಟ್ಟೆಗೆ ಪೂರೈಕೆಯಾಗುವ ಅರಿಸಿನದ ಪ್ರಮಾಣ, ಜಿಲ್ಲೆಯಲ್ಲಿ ಬೆಳೆ ವಿಸ್ತೀರ್ಣ, ಬೆಲೆ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳು ಹಾಗೂ ಬೆಳೆಗಾರರಿಂದ ಮಾಹಿತಿ ಪಡೆದರು.

ಅವರು ಮಾತನಾಡಿ ಶೀಘ್ರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರೈತ ಉತ್ಪಾದಕ ಸಂಸ್ಥೆಗಳು, ರೈತ ಸಂಘಟನೆಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಅರಿಶಿನ ಬೆಳೆಯುವ ರೈತರ ಸಭೆ ನಡೆಸಲಾಗುವುದು. ಅರಿಸಿನ ಮಂಡಳಿಯಿಂದ ದೊರೆಯುವ ಸೌಲಭ್ಯಗಳನ್ನು ಬೆಳೆಗಾರರಿಗೆ ತಲುಪಿಸಲು ಒತ್ತು ನೀಡಲಾಗುವುದು ಎಂದರು.

ಅರಿಶಿನ ಬೆಳೆಯುವ ರೈತರಿಗೆ ಅಗತ್ಯವಾಗಿ ಬೇಕಾದ ಬಾಯ್ಲರ್, ಡ್ರೈಯರ್, ಟಾರ್ಪಾಲಿನ್, ಸಂಸ್ಕರಣ ಘಟಕಗಳಿಗೆ ಹಣಕಾಸು ನೆರವಿನ ಜೊತೆಗೆ ತಾಂತ್ರಿಕ ನೆರವು ನೀಡಲಾಗುವುದು ಎಂದು ವಿಷ್ಣುವರ್ಧನ ಭರವಸೆ ನೀಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಉತ್ಕೃಷ್ಠ ಗುಣಮಟ್ಟದ ಅರಿಶಿನವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯ ಅರಿಶಿನದಲ್ಲಿ ಕರ್ಕುಮಿನ್ ಪ್ರಮಾಣ ಶೇ 4ಕ್ಕಿಂತ ಹೆಚ್ಚಾಗಿದ್ದು ಔಷಧೀಯ ಗುಣಗಳ ಕಾರಣಕ್ಕೆ ಬೇಡಿಕೆ ಹೆಚ್ಚಿದೆ ಎಂದರು.

ಜಿಲ್ಲೆಯಲ್ಲಿ 8,500 ಹೆಕ್ಟೇರ್ ಪ್ರದೇಶದಲ್ಲಿ ಅರಿಶಿನ ಬೆಳೆಯಲಾಗುತ್ತಿದ್ದು ಮೌಲ್ಯವರ್ಧನೆಯ ಮೂಲಕ ಬೆಳೆಗಾರರು ಹೆಚ್ಚಿನ ಲಾಭ ಪಡೆಯಲು ಅವಕಾಶ ಇದೆ. ಅರಿಶಿನ ಮಂಡಳಿಯಿಂದ ತರಬೇತಿ, ತಾಂತ್ರಿಕ ನೆರವು ದೊರೆತರೆ ರೈರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ರೈತರು ಮಾತನಾಡಿ, ಅರಿಶಿನ ಬೆಳೆಗೆ ಉತ್ತಮ ದರ ಸಿಗಬೇಕು, ಬೆಲೆ ಏರಿಳಿತದಿಂದ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅರಿಶಿನ ಬೆಳೆಗೆ ಸ್ಥಿರವಾದ ಬೆಲೆ ನಿಗದಿಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಸುಸ್ಥಿರವಾಗಿ ನಿಲ್ಲುವ ಹೊಸ ಅರಿಶಿನ ತಳಿಗಳನ್ನು ಪರಿಚಯಿಸಬೇಕು. ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಅರಿಶಿನ ಬಿತ್ತನೆಗೆ ಅನುಕೂಲವಾಗುವ ತಳಿಗಳ ಸಂಶೋಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಎಪಿಎಂಸಿ ಕಾರ್ಯದರ್ಶಿ ಜಗದೀಶ್, ಸಹಾಯಕ ಕಾರ್ಯದರ್ಶಿ ಮಧುಕುಮಾರ್ ಹಾಗೂ ರೈತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-37-550017363

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.