ಚಾಮರಾಜನಗರ: ನಗರದ ಪಿಡಬ್ಲ್ಯುಡಿ ಕಾಲೊನಿಯಲ್ಲಿ ಮನೆಯ ಮುಂಭಾಗ ಒಣಗಲು ಹಾಕಿದ್ದ ಮಹಿಳೆಯರ ವಸ್ತ್ರ ಹಾಗೂ ಒಳ ಉಡುಪುಗಳನ್ನು ವ್ಯಕ್ತಿಯೊಬ್ಬ ಕದ್ದೊಯ್ದಿದ್ದು ಬಡಾವಣೆಯ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮಧ್ಯರಾತ್ರಿಯ ಹೊತ್ತು ನೈಟಿ ಧರಿಸಿಕೊಂಡು ಕಾಲೋನಿಯ ಹಲವು ಮನೆಗಳ ಆವರಣ ಪ್ರವೇಶಿಸುವ ವ್ಯಕ್ತಿಯು ಮಹಿಳೆಯರ ಬಟ್ಟೆಗಳನ್ನು ಕಳವು ಮಾಡಿ ವಿಕೃತಿ ಮೆರೆಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಹಲವು ತಿಂಗಳುಗಳಿಂದ ಬಡಾವಣೆಯಲ್ಲಿ ಪದೇಪದೇ ಮಹಿಳೆಯರ ವಸ್ತ್ರಗಳು ಕಳವು ನಡೆಯುತ್ತಿತ್ತು. ಇದನ್ನು ಪತ್ತೆ ಹಚ್ಚಲು ಈಚೆಗೆ ಮನೆಯ ಮುಂದೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ದೃಶ್ಯಾವಳಿಯನ್ನು ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಮಹಿಳೆಯ ವೇಷದಲ್ಲಿ ಬಂದು ಬಟ್ಟೆಗಳನ್ನು ಕದ್ದೊಯ್ಯುತ್ತಿರುವುದು ಕಂಡುಬಂದಿದೆ. ಈ ಸಂಬಂಧ ನಗರ ಠಾಣೆಗೆ ದೂರು ನೀಡಿದ್ದೇನೆ ಎಂದು ಬಡಾವಣೆಯ ಗಣೇಶ್ ಪ್ರಸಾದ್ ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯ ಪತ್ತೆಗೆ ಶೋಧ ನಡೆಯುತ್ತಿದೆ, ರಾತ್ರಿ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಬಲಗೊಳಿಸಲಾಗಿದ್ದು ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-37-665310846

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.