ಯಳಂದೂರು: ತಾಲ್ಲೂಕಿನ ಕಸಬಾ ಹೋಬಳಿ ಗುಂಬಳ್ಳಿ ಸಮೀಪದ ಸುತ್ತಮುತ್ತ ಸಂಚರಿಸುತ್ತಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಬುಧವಾರ ಸೆರೆಯಾಗಿದೆ.

ಯಳಂದೂರು ವನ್ಯಜೀವಿ ವಲಯದ ಕೃಷ್ಣಯ್ಯನಕಟ್ಟೆ ಬೀಟ್ ಸಮೀಪದ ಗುಂಬಳ್ಳಿ ವಿಭಾಗದಲ್ಲಿ ಸತೀಶ್ ಅವರ ಗದ್ದೆಯಲ್ಲಿ ಚಿರತೆ ಸೆರೆಯಾಗಿದೆ. ಹಲವು ದಿನಗಳಿಂದ ಕಾಡಂಚಿನ ಪ್ರದೇಶಗಳಲ್ಲಿ ಚಿರತೆ ಸಂಚರಿಸುತ್ತಿದ್ದು, ಇದರ ಚಲನ ವಲನಗಳ ಬಗ್ಗೆ ಅರಣ್ಯ ಇಲಾಖೆ ಗಸ್ತು ಪಡೆ ಕಣ್ಣಿಟ್ಟಿತ್ತು. ಚಿರತೆ ಸರೆ ಹಿಡಿಯುವಂತೆ ಗ್ರಾಮೀಣರು ಅಧಿಕಾರಿಗಳಿಗೆ ಮನವಿ ಮಾಡಿದ್ದರು.

‘ಕಾಡಂಚಿನ ಪ್ರದೇಶದಲ್ಲಿ ವನ್ಯ ಜೀವಿಗಳ ಸಂಚಾರ ಸಾಮಾನ್ಯ, ಹಾಗಾಗಿ ಸಾರ್ವಜನಿಕರು ಮತ್ತು ಪ್ರವಾಸಿಗರು ಸಂಚರಿಸುವಾಗ ಕಾಡು ಪ್ರಾಣಿಗಳನ್ನು ಕಂಡರೆ ಹತ್ತಿರ ಹೋಗಿ, ಮೊಬೈಲ್ ಫೋನ್ನಲ್ಲಿ ವಿಡಿಯೊ ಮತ್ತು ಚಿತ್ರ ತೆಗೆಯಲು ಹೋಗಬಾರದು. ಸಾಧ್ಯವಾದಷ್ಟು ಕೃಷಿಕರು ಆತಂಕಕ್ಕೆ ಒಳಗಾಗದೆ ಅರಣ್ಯ ಗಸ್ತು ಪಡೆಗೆ ಮಾಹಿತಿ ನೀಡಿದರೆ ಪ್ರಾಣಿಗಳನ್ನು ಹಿಡಿದು ಸುರಕ್ಷಿತವಾಗಿ ಸಾಗಿಸಲಾಗುವುದು’ ಎಂದು ಸ್ಥಳಕ್ಕೆ ಭೇಟಿ ನಿಡಿದ ಆರ್ಎಫ್ಒ ಸತೀಶ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-37-853344127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.