ಯಳಂದೂರು: ತಾಲ್ಲೂಕಿನ ಯರಿಯೂರು ಗ್ರಾಮದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಸದಸ್ಯರು ಅಂಬೇಡ್ಕರ್ ಭಾವಚಿತ್ರ ಹಾಗೂ ಕಮಾನು ಗೇಟು ನಿರ್ಮಾಣಕ್ಕೆ ಮುಂದಾದ ಸಂದರ್ಭ ಕೆಲಹೊತ್ತು ಬಿಗಿವಿನ ವಾತಾವರಣ ನಿರ್ಮಾಣವಾಯಿತು.

ಕಮಾನು ಗೇಟು ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಅಧಿಕಾರಿಗಳು ಮುಂದಾದರೂ ಯಜಮಾನರು ಹಾಗೂ ಸಂಘದ ಸದಸ್ಯರು ಜೆಸಿಬಿ ಮತ್ತು ಲಾರಿ ಬಳಸಿ ಕಮಾನು ಗೇಟು ಅಳವಡಿಸುವಲ್ಲಿ ಯಶಸ್ವಿಯಾದರು. ಈ ಘಟನೆಯಿಂದ ಅಧಿಕಾರಿಗಳು ಹಾಗೂ ಸ್ಥಳೀಯ ಸಮುದಾಯಗಳ ನಡುವೆ ವಾಗ್ವಾದ ನಡೆಯಿತು.

ಘಟನೆ ವಿವರ: ಯರಿಯೂರು ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರದ ಜೊತೆ ಕಮಾನು ಗೇಟು ಅಳವಡಿಸಲು ಅನುಮತಿ ಕೋರಿ ಮಾರ್ಚ್ 23ರಂದು ಗ್ರಾಮ ಪಂಚಾಯಿತಿಗೆ ಕುಲಸ್ಥರು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದದಿಂದ ಅರ್ಜಿ ನೀಡಲಾಗಿತ್ತು. ಅದೇ ದಿನ ಶ್ರೀ ಕನಕ ಸೇವಾ ಸಮಿತಿಯಿಂದಲೂ ಕಮಾನು ಗೇಟು ನಿರ್ಮಿಸಲು ಅರ್ಜಿ ನೀಡಲಾಗಿತ್ತು.

ಎರಡೂ ಕಡೆಯವರ ಅರ್ಜಿ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಹೊರತು ಪಡಿಸಿ ಇತರೆಡೆ ಅಳಸಡಿಸುವಂತೆ ಅನುಮತಿ ನೀಡಿದ್ದರು. ಅದರಂತೆ, ಭಾನುವಾರ ಅಂಬೇಡ್ಕರ್ ಸಂಘದ ಸದಸ್ಯರು ಕಮಾನು ಗೇಟು ನಿರ್ಮಿಸಲು ಮುಂದಾದಾಗ ಎರಡೂ ಸಮುದಾಯಗಳ ಯುವಕರ ಮಧ್ಯೆ ವಾಗ್ವಾದ ನಡೆದಿದೆ.

ನೋಟಿಸ್ ? ಮುಖ್ಯಮಂತ್ರಿ ಸಿದ್ದರಾಮಯ್ಯ ಏ.21ರಂದು ಗುಂಡ್ಲುಪೇಟೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಗಿಯುವವರೆಗೂ ಕಮಾನು ಗೇಟು ನಿರ್ಮಿಸಬೇಡಿ ಎಂದು ಅಧಿಕಾರಿಗಳು ಸೂಚನೆ ನೀಡಿದ್ದರೂ ಭಾನುವಾರ ಬೆಳಿಗ್ಗೆ ಧಿಡೀರ್ ಕಮಾನು ನಿರ್ಮಿಸಲು ಮುಂದಾಗಿದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಈ ಸಂಬಂಧ ಗ್ರಾಮ ಪಂಚಾಯಿತಿ ಪಿಡಿಒಗೆ ವಿವರಣೆ ಕೇಳಿ ನೋಟಿಸ್ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧನವಾದರೆ ಹೋರಾಟ: ಮಾಜಿ ಶಾಸಕ ಎನ್.ಮಹೇಶ್ ಯರಿಯೂರು ಗ್ರಾಮಕ್ಕೆ ಭೇಟಿನೀಡಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿ, ಗ್ರಾಮದಲ್ಲಿ ಅಂಬೇಡ್ಕರ್ ಕಮಾನು ಗೇಟು ಅಳವಡಿಸುವ ಹಕ್ಕು ಪರಿಶಿಷ್ಟರಿಗಿದೆ. ಜಿಲ್ಲಾಡಳಿತ ಕಮಾನು ಗೇಟು ತೆರವುಗೊಳಿಸಬಾರದು. ಪೊಲೀಸ್ ಇಲಾಖೆ ಸಮುದಾಯದವರ ಮೇಲೆ ಪ್ರಕರಣ ದಾಖಲಿಸಿದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಾಸಕ ಎ.ಆರ್.ಕೃಷ್ಣಮೂರ್ತಿ, ಎಸ್ಪಿ ಎಂ.ಮುತ್ತುರಾಜ್, ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಶೀಲ್ದಾರ್ ಎಸ್.ಎಲ್.ನಯನಾ, ಡಿವೈಎಸ್ಪಿ ಧರ್ಮೇಧ್ರ, ಶ್ರೀಧರ್, ಸಿಪಿಐಗಳಾದ ಸುಬ್ರಹ್ಮಣ್ಯ, ಶಿವಮಾದಯ್ಯ, ರಾಜಸ್ವ ನಿರೀಕ್ಷಕ ಎಂ.ಎಸ್.ಯದುಗಿರಿ, ಪೊಲೀಸರು ಹಾಗೂ ಅಂಬೇಡ್ಕರ್ ಯುವಕ ಸಂಘದ ಸದಸ್ಯರು, ಕುಲಸ್ಥರು ಮುಖಂಡರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-37-1812243927

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.