ಪಟ್ಟಣದ ಎಸ್‌ಡಿವಿಎಸ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಚೆಸ್, ಯೋಗ ಮತ್ತು ಕರಾಟೆ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಾಥಮಿಕ ಹಂತದಲ್ಲಿ ಆಟೋಟಗಳನ್ನು ಕೆಲವರು ಹವ್ಯಾಸವಾಗಿ ತಗೆದುಕೊಳ್ಳುತ್ತಾರೆ. ನಂತರ ನಿರ್ಲಕ್ಷಿಸುತ್ತಾರೆ. ಆದರೆ. ಬಹುತೇಕ ಮಾನಸಿಕ ದೃಢತೆ ಮತ್ತು ತಾಳ್ಮೆ ಬೇಡುವ ಆಟ ಯೋಗ ಮತ್ತು ಚೆಸ್. ಮನಸ್ಸಿನ ಏಕಾಗ್ರತೆಗೆ ನಿಲುಕುವ ಕ್ರೀಡೆಗಳಿಗೆ ಒತ್ತಾಸೆ ನೀಡಬೇಕಿದೆ. ಹಾಗಾಗಿ, ಮಕ್ಕಳನ್ನು ಕ್ರಿಕೆಟ್‌ಗೆ ಮಿತಿಗೊಳಿಸದೆ ದೇಶಿ ಆಟಗಳನ್ನು ಉಳಿಸಿ ಬೆಳೆಸುವತ್ತ ಚಿತ್ತ ಹರಿಸಬೇಕು ಎಂದರು.