ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಚಟುವಟಿಕೆ, ಚಿತ್ರಕಲೆಯಲ್ಲಿ ಮಿಂದೆದ್ದ ಮಕ್ಕಳು

ಹನೂರು: ಕಣ್ಣೂರು ಶಾಲೆಯಲ್ಲಿ 12 ವರ್ಷಗಳಿಂದ ಆಶ್ರಯ ಸಂಸ್ಥೆಯಿಂದ ಸ್ಪರ್ಧಾ ಕಾರ್ಯಕ್ರಮ
Last Updated 29 ಫೆಬ್ರುವರಿ 2020, 9:50 IST
ಅಕ್ಷರ ಗಾತ್ರ

ಹನೂರು: ಕಲಿಕೆಜೊತೆಗೆಮಕ್ಕಳಲ್ಲಿವೈಜ್ಞಾನಿಕಚಿಂತನೆಬೆಳೆಸುವ ಉದ್ದೇಶದಿಂದ ತಾಲ್ಲೂಕಿನ ಕಣ್ಣೂರು ಗ್ರಾಮದಸರ್ಕಾರಿಹಿರಿಯಪ್ರಾಥಮಿಕಶಾಲೆಯಲ್ಲಿ ಇತ್ತೀಚೆಗೆ ನಡೆದ 'ಲಿಯೋನಾರ್ಡೋಡವಿಂಚಿ' ಹೆಸರಿನಸ್ಪರ್ಧಾ ಕಾರ್ಯಕ್ರಮಮಕ್ಕಳ ಕುತೂಹಲವನ್ನುಹೆಚ್ಚಿಸುವುದರೊಂದಿಗೆ ಹಲವು ವೈಜ್ಞಾನಿಕಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಿತು.

12 ವರ್ಷಗಳಿಂದಪ್ರತಿವರ್ಷವೂಫೆಬ್ರವರಿತಿಂಗಳಲ್ಲಿಹನೂರುಶೈಕ್ಷಣಿಕವಲಯದಒಂಬತ್ತು ಸರ್ಕಾರಿ ಶಾಲೆಗಳಮಕ್ಕಳು ಕಣ್ಣೂರಿನ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿಭಾಗವಹಿಸಿತಮ್ಮಪ್ರತಿಭೆಪ್ರದರ್ಶಿಸುತ್ತಾರೆ.

ಬೆಂಗಳೂರಿನಆಶ್ರಯಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಗ್ರಾಮೀಣ ಭಾಗದ ಮಕ್ಕಳಪ್ರತಿಭಾಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ.

ಈಬಾರಿ ಸ್ಥಳದಲ್ಲೇ ವಿಜ್ಞಾನ ಮಾದರಿಗಳನ್ನು ತಯಾರಿಸುವುದು, ಸ್ಥಳದಲ್ಲೇ ಭಾವಚಿತ್ರ, ಪರಿಸರದ ಚಿತ್ರ, ಮ್ಯೂರಲ್‌ ಚಿತ್ರಗಳನ್ನು, ಶೇಡಿಂಗ್‌ ಚಿತ್ರಕಲೆಯಲ್ಲಿ ನಿಕೊಲಸ್‌ ಟೆಸ್ಲ ಅವರ ಭಾಚಿತ್ರಗಳನ್ನು ಬಿಡಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದರ ಜೊತೆಗ'ತಂತ್ರಜ್ಞಾನ' ಮತ್ತು 'ಬೆಂಗಳೂರುಸಿಟಿ'ಎಂಬ ವಿಷಯದ ಅಡಿಯಲ್ಲಿಮಕ್ಕಳುಮೈಂಡ್ಮ್ಯಾಪ್ರಚಿಸುವಮೂಲಕಗಮನ ಸೆಳೆದರು.

ಅಲ್ಲದೇ ಬುಕ್ಕ್ಲಬ್ವಿಭಾಗದಲ್ಲಿ ನಾಟಕದ ಪ್ರಮುಖಪಾತ್ರ,ಸನ್ನಿವೇಶ,ಕಥೆಗೆತಿರುವುಮತ್ತು ನೀತಿಯನ್ನೊಳಗೊಂಡಂತೆ ಮಕ್ಕಳಿಗೆ ಒಂದುಕಥೆಯನ್ನುಸೃಷ್ಟಿಸಿ ಪ್ರಸ್ತುತಪಡಿಸುವಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಈಎಲ್ಲಾಶಾಲೆಗಳುಜೂಲಿಯಸ್ಸೀಜರ್‌ ನಾಟಕವನ್ನುಪ್ರದರ್ಶಿಸಿ ತೀರ್ಪುಗಾರರ ಪ್ರಶಂಸೆಗೆಪಾತ್ರರಾದರು.

ವಿಜ್ಞಾನಪ್ರಯೋಗಗಳುಮತ್ತು ಮಾದರಿಗಳು,ಚಿತ್ರಕಲೆ,ಕಂಪ್ಯೂಟರ್ವಿಭಾಗದಲ್ಲಿಕಂಪ್ಯೂಟರ್‌ನ ಭಾಗಗಳು, ಮಕ್ಕಳಅಭಿರುಚಿತಿಳಿಯಲು‌ ಎಕ್ಸೆಲ್ ಪ್ರಾಜೆಕ್ಟ್‌ಗಳನ್ನುಪ್ರದರ್ಶಿಸಲಾಗಿತ್ತು.ಬುಕ್ಕ್ಲಬ್ ವಿಭಾಗದಲ್ಲಿಶೇಕ್ಸ್‌ಪಿಯರ್‌ನ ಪ್ರಸಿದ್ಧನಾಟಕಗಳಾದಒಥೆಲೊ,ಹ್ಯಾಮ್ಲೆಟ್, ಜೂಲಿಯಸ್ಸೀಜರ್, ಮ್ಯಾಬತ್‌ಗಳಿಗೆ ಚಾರ್ಟ್ ಬರೆದುವಿವರಿಸಿದರು.

ಮಾನವನದೇಹಕ್ಕೆಸಂಬಂಧಿಸಿದಂತೆದೇಹದವಿವಿಧಭಾಗಗಳು,ಒಳ್ಳೆಯದು,ಕೆಟ್ಟದ್ದು, ಹಾಗೂಪ್ರಕೃತಿಯೊಂದಿಗೆಮಾನವನದೇಹದ ಹೊಂದಾಣಿಕೆಯನ್ನು ವಿವರಿಸುವ ಚಿತ್ರಗಳನ್ನು ಮಕ್ಕಳು ಪ್ರದರ್ಶಿಸಿದರು.

‘ವ್ಯಕ್ತಿತ್ವ ವಿಕಸನ, ಕೌಶಲ ಅಭಿವೃದ್ಧಿಯ ಉದ್ದೇಶ’

‘ಶಾಲಾವಯಸ್ಸಿನಎಲ್ಲಾಮಕ್ಕಳನ್ನುಶಾಲೆಗೆದಾಖಲಿಸಿಸರ್ವತೋಮುಖವ್ಯಕ್ತಿತ್ವದವಿಕಾಸವನ್ನುಂಟುಮಾಡಲು,ಪ್ರಾಥಮಿಕಶಿಕ್ಷಣವನ್ನುಅರ್ಥಪೂರ್ಣವಾಗಿಪ್ರತಿಯೊಬ್ಬವಿದ್ಯಾರ್ಥಿಯೂಪೂರ್ಣಗೊಳಿಸುವಉದ್ದೇಶದಿಂದಅನೇಕಪರಿಣಾಮಕಾರಿಅನುಭವಗಳನ್ನುಪಡೆಯುವಸಲುವಾಗಿಹಾಗೂಕ್ರಿಯಾತ್ಮಕಕಾರ್ಯಚಟುವಟಿಕೆಗಳ್ನುಆಶ್ರಯಸಂಸ್ಥೆಯುಹಮ್ಮಿಕೊಂಡಿದೆ. ಸ್ಪಧಾತ್ಮಕಯುಗದಲ್ಲಿಪ್ರತಿಮಗುವು ಕಲಿಕೆಯಅವಧಿಯಲ್ಲಿಅಧ್ಯಯನಶೀಲ ಗುಣ ಬೆಳೆಸಿಕೊಳ್ಳುವುದರಜೊತೆಗೆವಿವಿಧಕೌಶಲ ವೃದ್ಧಿಸಿಕೊಂಡುತಮ್ಮಭವಿಷ್ಯದಲ್ಲಿವೃತ್ತಿಹೊಂದಲುಸಹಾಯವಾಗಬೇಕುಎಂಬುದುಕಾರ್ಯಕ್ರಮದಉದ್ದೇಶವಾಗಿದೆ’ನ ಎಂದು ಕಣ್ಣೂರು ಶಾಲೆಯ ಒಜಿಟಿಶಿಕ್ಷಕಡಿ.ಸಾವುಕರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT