ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಕಾಯ್ದೆ ವಾಪಸ್‌: ಕಾಂಗ್ರೆಸ್‌ ಸಂಭ್ರಮಾಚರಣೆ

Last Updated 19 ನವೆಂಬರ್ 2021, 12:14 IST
ಅಕ್ಷರ ಗಾತ್ರ

ಚಾಮರಾಜನಗರ: ಮೂರುರೈತ ಕಾಯ್ದೆಗಳನ್ನು ವಾಪಸ್‌ ಪಡೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿ ಮುಂದೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ವರ್ಷದ ಹಿಂದೆ ರೈತ ವಿರೋಧಿಯಾಗಿರುವ ಮೂರು ಕಾಯ್ದೆಗಳನ್ನು ಜಾರಿ ಮಾಡಿತ್ತು. ಇವುಗಳನ್ನು ಸಂಸತ್ ಒಳಗೆ ಹಾಗೂ ಹೊರಗೆ ಪಕ್ಷ ತೀವ್ರವಾಗಿ ವಿರೋಧಿಸಿತ್ತು. ಅಲ್ಲದೇ ರೈತ ಸಂಘಟನೆಗಳ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆ ಬಗ್ಗೆ ಜನ ಜಾಗೃತಿ ಮೂಡಿಸಿತ್ತು. ಇದರ ಪರಿಣಾಮ ಪ್ರಧಾನಿ ಮೋದಿ ಕಾಯ್ದೆ ಜಾರಿಯಾದ ನಂತರ ರೈತರ ಉಗ್ರ ಹೋರಾಟ ಹಾಗೂ ನಂತರ ನಡೆದ ಚುನಾವಣೆಗಳು ಸೋಲು ಮತ್ತು ಮುಂಬರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ಸೋಲುವ ಬೀತಿಯಿಂದ ಕಾಯ್ದೆಯನ್ನು ಪ್ರಧಾನಿ ಬೇಷರತ್ ವಾಪಸ್ ಪಡೆದುಕೊಂಡಿದ್ದಾರೆ. ರೈತರು ಹಾಗೂ ಜನರು ತಿರುಗಿ ಬಿದ್ದರೆ ಯಾವುದೇ ಸರ್ಕಾರ ಉಳಿಯುವುದಿಲ್ಲ. ಎಂಬುವುದಕ್ಕೆ ಸರ್ವಾಧಿಕಾರಿ ಮೋದಿಗೆ ಈಗ ಮನವರಿಕೆಯಾಗಿದೆ. ಇದು ರೈತರ ಹಾಗೂ ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಸಿಕ್ಕ ಜಯವಾಗಿದೆ’ ಎಂದು ಬಣ್ಣಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಬ್ಲಾಕ್ ಅಧ್ಯಕ್ಷ ಮಹಮದ್ ಅಸ್ಗರ್, ಕೆಪಿಸಿಸಿ ಸದಸ್ಯ ಸೈಯದ್ ರಫಿ, ಮುಖಂಡರಾದ ಸಿ.ಎ.ಮಹದೇವಶೆಟ್ಟಿ, ಸಿ.ಕೆ.ರವಿಕುಮಾರ್, ರಮೇಶ್, ಮಹದೇವಶೆಟ್ಟಿ, ನಾಗರ್ಜುನ ಪ್ರಥ್ವಿ, ನಾಗೇಂದ್ರ, ಸುಹೇಲ್ ಅಲಿ ಖಾನ್, ಎಎಚ್ ಎನ್ ಖಾನ್, ಅಯುಬ್‌ಖಾನ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಉಪಾಧ್ಯಕ್ಷ ಸೈಯದ್ ರಿಜ್ವಾನ್, ಚಂದನ್ ಅಬ್ಬಾಸ್, ನಗರ ಘಟಕದ ಅಧ್ಯಕ್ಷ ಸೈಯದ್ ನವೀದ್, ಅಬ್ಬಾಸ್, ಮಹೇಶ್ ಇತರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT