ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮವಲಯದಲ್ಲಿ ಕಟ್ಟಡ ನಿರ್ಮಾಣ ನಡೆಯುತ್ತಿದೆ. ನಿಯಮ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಮೇಲುಕಾಮನಹಳ್ಳಿ ಸಮೀಪ ಬಂಡೀಪುರ ಸಫಾರಿ ಕೇಂದ್ರದ ಮುಂಭಾಗ ಹಾಗೂ ಗೋಪಾಲಸ್ವಾಮಿ ಬೆಟ್ಟ ವಲಯದ ಕಚೇರಿಯ ಕೂಗಳತೆ ದೂರದಲ್ಲೇ ಕಟ್ಟಡ ತಲೆ ಎತ್ತುತ್ತಿದೆ.

ಸಫಾರಿ ಕೇಂದ್ರದ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ, ಸರ್ವೆ ನಂ 65ರಲ್ಲಿ ಬೃಹತ್ ಕಟ್ಟಡ ನಿರ್ಮಾಣವಾಗುತ್ತಿದ್ದು, ಸಫಾರಿ ಕೇಂದ್ರದ ವಲಯದಿಂದ ಕೇವಲ ಇನ್ನೂರು ಮೀಟರ್ ದೂರದಲ್ಲಿದೆ. ಕಾಮಗಾರಿ ಸ್ಥಳದಲ್ಲಿ ಹಸಿರು ಪರದೆ ಹೊದಿಸಲಾಗಿದೆ.

‘ಪರಿಸರ ಸೂಕ್ಷ್ಮ ವಲಯದಲ್ಲಿರುವ ವಾಣಿಜ್ಯ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಅವರು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ (ಎನ್ಟಿಸಿಎ) ಪತ್ರ ಬರೆದಿದ್ದರೂ ನಿಯಮಬಾಹಿರ ಕಾಮಗಾರಿಗಳು ನಿಂತಿಲ್ಲ. ಕಾಮಗಾರಿ ನಡೆಯುವ ಸಂದರ್ಭ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದರೆ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿ ಕೆಲ ದಿನಗಳ ಬಳಿಕ ಕಾಮಗಾರಿ ಆರಂಭಿಸುತ್ತಾರೆ’ ಎಂಬುದು ಸ್ಥಳೀಯರ ದೂರು.

‘ಕೃಷಿಯ ಹೆಸರಿನಲ್ಲಿ ಹೋಂ ಸ್ಟೇ ಹಾಗೂ ರೆಸಾರ್ಟ್ಗಳನ್ನು ನಡೆಸುವ ಉದ್ದೇಶದಿಂದ ಕಟ್ಟಡ ನಿರ್ಮಾಣ ನಡೆಯುತ್ತಿದೆ.ಇದು ಅಧಿಕಾರಿಗಳ ಕಣ್ಣಿಗೆ ಕಂಡಿಲ್ಲವೇ’ ಎಂದು ರೈತ ಮುಖಂಡ ಹಂಗಳ ಮಾಧು ಪ್ರಶ್ನಿಸಿದ್ದಾರೆ.

1,282 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಬಂಡೀಪುರವು 872 ಚದರ ಕಿ.ಮೀ ಕೋರ್ ಝೋನ್ ಒಳಗೊಂಡಿದ್ದು, 410 ಚದರ ಕಿ.ಮೀ. ಬಫರ್ ಝೋನ್, 82 ಚದರ ಕಿ.ಮೀ ಟೂರಿಸಂ ಝೋನ್ ಹೊಂದಿದೆ. 1 ಚದರ ಕಿ.ಮೀ. ಮಿನಿ ಸ್ಪ್ರೇಟಿವ್ ಝೋನ್ ಎಂದು ವಿಂಗಡಿಸಲ್ಪಟ್ಟಿದೆ.

ಬಂಡೀಪುರ ರಾಷ್ಟ್ರೀಯದಂಚಿನಲ್ಲಿ ಪ್ರಾಣಿಗಳ ಹಾವಳಿಯಿಂದ ಪುನರ್ವಸತಿ ಹೊಂದಿರುವ ಗಿರಿಜನರು ಮತ್ತು ಕಾಡಂಚಿನ ರೈತರು ಕೃಷಿ ಮಾಡಲಾಗದೆ ಕೈಚೆಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅರಣ್ಯದ ಚಹರೆ ಇರುವ ಬೆಟ್ಟಗುಡ್ಡಗಳನ್ನು ಒಳಗೊಂಡ ಭೂಮಿಯನ್ನು ಉದ್ಯಮಿಗಳು ಖರೀದಿಸುತ್ತಿದ್ದು, ವಾಸ್ತವ್ಯದ ಹೆಸರಿನಲ್ಲಿ ವಿಶಾಲವಾದ ಮತ್ತು ಅತ್ಯಾಧುನಿಕ ಸೌಲಭ್ಯವಿರುವ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.

ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಶೀಘ್ರ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ
–ನವೀನ್ ಕುಮಾರ್ ಎಸಿಎಫ್

‘ಶೆಡ್ಗಳೇ ಕಟ್ಟಡಗಳಾಗುತ್ತವೆ’

ಜಾನುವಾರು ಸಾಕಲು ನಾಯಿ ಕಟ್ಟಲು ವಸ್ತುಗಳ ದಾಸ್ತಾನಿಗೆಂದು ನಿರ್ಮಿಸುವ ಶೆಡ್ಗಳು ನಂತರದಲ್ಲಿ ಗೋಡೆ ಹೆಂಚು ಮತ್ತು ಶೀಟ್ನ ಚಾವಣಿಯ ಕಟ್ಟಡಗಳಾಗಿ ಬದಲಾಗುತ್ತವೆ. ಹೀಗೆ ನಿಯಮ ಮೀರಿ ಕಟ್ಟಡಗಳ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ನಿರಾಕ್ಷೇಪಣಾ ಪತ್ರ ಕೂಡ ನೀಡುತ್ತಿರುವುದು ಬೇಸರದ ಸಂಗತಿ’ ಎನ್ನುತ್ತಾರೆ ಹಂಗಳ ಮಾಧು.

‘ಇಲಾಖೆಗಳೇ ನಿಯಮ ಮೀರುತ್ತಿರುವುದರಿಂದ ಸ್ಥಳೀಯರು ಅಸಹಾಯಕರಾಗಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಅಕ್ರಮ ಕಟ್ಟಡಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಹೊಸ ಕಟ್ಟಡಗಳ ನಿರ್ಮಾಣ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.