ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲಾ ಕೋವಿಡ್ ಅಂಕಿ ಅಂಶ

Last Updated 20 ಮೇ 2021, 4:31 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ ಕೊರೊನಾ ಸೋಂಕಿತರ ಪ್ರಮಾಣವು ಮತ್ತೆ 500ರ ಗಡಿ ದಾಟಿದೆ. ಸಾವಿನ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದೆ. ಒಟ್ಟು 576 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಮಂಗಳವಾರ 343 ಮಂದಿ ಮಾತ್ರವೇ ಸೋಂಕಿತರಾಗಿದ್ದರು.

ಮಂಗಳವಾರ ಸಂಜೆ 6 ಗಂಟೆಯಿಂದ ಬುಧವಾರ ಸಂಜೆ 6 ಗಂಟೆಯವರೆಗೆ ಒಟ್ಟು 6 ಮಂದಿ ಕೋವಿಡ್ ರೋಗಿಗಳು ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. 7 ಮಂದಿ ಇತರೆ ಕಾರಣಗಳಿಂದ ಮರಣ ಹೊಂದಿದ್ದಾರೆ. ಬುಧವಾರ 665 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬುಧವಾರ ಕೇವಲ 261 ಮಂದಿಯನ್ನು ಮಾತ್ರವೇ ಹೋಂಐಸೋಲೇಷನ್‌ಗೆ ಕಳುಹಿಸಲಾಗಿದೆ. ಒಟ್ಟು 2,242 ಮಂದಿ ಹೋಂ ಐಸೋಲೇಷನ್‌ಲ್ಲಿಯೇ ಇದ್ದಾರೆ. 48 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸ ಸೋಂಕಿತರ ಪೈಕಿ 97 ಮಂದಿ ಮಾತ್ರವೇ ಪಟ್ಟಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಇನ್ನುಳಿದ 479 ಮಂದಿ ವಿವಿಧ ಹಳ್ಳಿಗಳಿಗೆ ಸೇರಿದವರೇ ಆಗಿದ್ದಾರೆ. ಇವರಲ್ಲಿ 22 ಮಂದಿ ಮಕ್ಕಳೂ ಇದ್ದಾರೆ.

ಚಾಮರಾಜನಗರ ತಾಲ್ಲೂಕಿನಲ್ಲಿ 238, ಗುಂಡ್ಲುಪೇಟೆಯಲ್ಲಿ 140, ಕೊಳ್ಳೇಗಾಲದಲ್ಲಿ 108, , ಹನೂರಿನಲ್ಲಿ48, ಯಳಂದೂರಿನಲ್ಲಿ 37 ಹಾಗೂ ಹೊರ ಜಿಲ್ಲೆಯ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಸೋಮವಾರ ಮೃತಪಟ್ಟವರ ವಿವರಗಳು:

ಆರೋಗ್ಯ ಇಲಾಖೆಯು ಸೋಮವಾರ ಮೃತಪಟ್ಟ 7 ಮಂದಿಯ ವಿವರಗಳನ್ನು ಬಹಿರಂಗಪಡಿಸಿದೆ. ಆದರೆ, ಮಂಗಳವಾರ ಮೃತಪಟ್ಟವರ ಮಾಹಿತಿ ನೀಡಿಲ್ಲ

ಸೋಮವಾರ ಮೃತಪಟ್ಟವರಲ್ಲಿ ಚಾಮರಾಜನಗರ ಪಟ್ಟಣದ 34 ವರ್ಷದ ಪುರುಷ, ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ 57 ವರ್ಷದ ಮಹಿಳೆ, ಕೊಳ್ಳೇಗಾಲ ತಾಲ್ಲೂಕಿನ ಕೆಂಪನಪುರ ಗ್ರಾಮದ 50 ವರ್ಷದ ಪುರುಷ, ಹನೂರು ಪಟ್ಟಣದ 65 ವರ್ಷದ ಮಹಿಳೆ, 60 ವರ್ಷದ ಮಹಿಳೆ, ತಾಲ್ಲೂಕಿನ ಹೂಗ್ಯಾಂ ಗ್ರಾಮದ 30 ವರ್ಷದ ಮಹಿಳೆ, ಸಿದ್ದಾಪುರ ಗ್ರಾಮದ 50 ವರ್ಷದ ಮಹಿಳೆ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT