ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಗಾಳಿ ಮಳೆಯ ಆರ್ಭಟ: ನೆಲಕಚ್ಚಿದ ಬೆಳೆ

ಬಾಳೆ, ಜೋಳ ಬೆಳೆದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ, ಬೆಳೆ ಪರಿಹಾರಕ್ಕೆ ಆಗ್ರಹ
Last Updated 16 ಮೇ 2020, 18:07 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಶುಕ್ರವಾರ ಸುರಿದ ಗಾಳಿ ಮಳೆಗೆ ಹಲವು ಕಡೆಗಳಲ್ಲಿ ಬಾಳೆ, ಕಬ್ಬು, ಜೋಳ ಬೆಳೆ ನೆಲಕಚ್ಚಿವೆ.

ಚಾಮರಾಜನಗರ ಹಾಗೂ ಹನೂರು ತಾಲ್ಲೂಕುಗಳಲ್ಲಿ ಹತ್ತಾರು ಎಕರೆ ಬಾಳೆ ತೋಟ ನೆಲಸಮವಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಚಾಮರಾಜನಗರದ ಸಮೀಪದ ರಾಮಸಮುದ್ರ, ತಾಲ್ಲೂಕಿನ ಅಯ್ಯನಪುರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ 10ಕ್ಕೂ ಹೆಚ್ಚು ರೈತರು ಬೆಳೆದಿದ್ದ ಬಾಳೆ ನೆಲಕ್ಕುರುಳಿದೆ. ಕೆಲವೆಡೆ ಕಬ್ಬು, ಇನ್ನೂ ಕೆಲವೆಡೆ ಮೆಕ್ಕೆ ಜೋಳ ಪೈರು ಗಾಳಿಯ ರಭಸಕ್ಕೆ ನೆಲಕ್ಕೆ ಬಾಗಿ ಹೋಗಿವೆ.ಕೆಲವು ರೈತರ ಬಾಳೆ ಕಟಾವಿನ ಹಂತಕ್ಕೆ ಬಂದಿತ್ತು. ಇನ್ನೂ ಕೆಲವು ಕಡೆ ಗೊನೆ ಬಿಡಲು ಆರಂಭಿಸಿದ್ದವು.

ರಾಮಸಮುದ್ರದ ರೈತ ಪ್ರದೀಪ, ಮರಿಸಿದ್ದಪ್ಪ, ಶಿವಶಂಕರ, ಆರ್‌.ಎಸ್‌.ಸುರೇಶ್‌ ಕುಮಾರ್‌, ನಿತಿನ್‌ಕುಮಾರ್‌, ಆರ್‌.ಜೆ ಶಿವಸ್ವಾಮಿ ಅವರ ಬಾಳೆ ತೋಟ ನಾಶವಾಗಿದೆ. ಅಯ್ಯನಪುರ ಗ್ರಾಮದ ಬಸವಣ್ಣ ಎಂಬುವವರ ಬಾಳೆತೋಟ,ಮಹದೇವಪ್ಪ ಅವರ ಮುಸುಕಿನ ಜೋಳ, ರತ್ನಮ್ಮ ಅವರ ಕಬ್ಬಿನ ತೋಟಕ್ಕೂ ಹಾನಿಯಾಗಿದೆ.

ಹನೂರು ವರದಿ: ಶುಕ್ರವಾರಸಂಜೆಹಾಗೂರಾತ್ರಿಸುರಿದಭಾರಿ ಗಾಳಿ ಮಳೆಗೆ ಹನೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಬೆಳೆಗಳು ನೆಲೆಕಚ್ಚಿಲಕ್ಷಾಂತರರೂಪಾಯಿ ನಷ್ಟಉಂಟಾಗಿದೆ.

ಚಂಗವಾಡಿಗ್ರಾಮದ ನಟರಾಜಾಚಾರಿ ಅವರ ಎರಡುಎಕರೆಜೋಳ,ರಾಜೇಂದ್ರ ಅವರ ಮೂರುಎಕರೆಬೆಳೆ, ಪೊನ್ನಸ್ವಾಮಿ ಅವರ ಅರ್ಧ ಎಕರೆ ಬಾಳೆ, ಹನೂರಿನ ರೇವಣ್ಣ ಅವರ 2 ಸಾವಿರಬಾಳೆ,ವಿಜೇಂದ್ರ ಅವರ ಮೂರು ಎಕರೆ ಜೋಳನೆಲಕಚ್ಚಿದೆ.

ಪರಿಹಾರಕ್ಕೆ ಆಗ್ರಹ:ಕಟಾವುಹಂತಕ್ಕೆಬಂದಿದ್ದಬಾಳೆ,ಮುಸುಕಿನಜೋಳಸೇರಿದಂತೆ ಇನ್ನಿತರೆಬೆಳೆಗಳುನಷ್ಟ ಉಂಟಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ, ನಷ್ಟಕ್ಕೆ ಒಳಗಾಗಿರುವವರಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಹನೂರಿನಲ್ಲಿ 2.5 ಸೆಂ.ಮೀ ಮಳೆ
ಶುಕ್ರವಾರ ಸಂಜೆ ಹಾಗೂ ರಾತ್ರಿ ಜಿಲ್ಲೆಯಾದ್ಯಂತ 0.8 ಸೆಂ.ಮೀ ಮಳೆ ಬಿದ್ದಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ 1 ಸೆಂ.ಮೀ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 0.7 ಸೆಂ.ಮೀ, ಕೊಳ್ಳೇಗಾಲ ತಾಲ್ಲೂಕಿನಲ್ಲಿ 0.8 ಸೆಂ.ಮೀ ಹಾಗೂ ಯಳಂದೂರು ತಾಲ್ಲೂಕಿನಲ್ಲಿ 1.1 ಸೆಂ.ಮೀ ಮಳೆಯಾಗಿದೆ.

ಹನೂರು ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗಿದ್ದು, ಹನೂರು ಹೋಬಳಿಯಲ್ಲಿ ಅತಿ ಹೆಚ್ಚು ಅಂದರೆ 2.5 ಸೆಂ.ಮೀ ಮಳೆಯಾಗಿದೆ. ಲೊಕ್ಕನಹಳ್ಳಿ ಮತ್ತು ಪಾಳ್ಯ ಹೋಬಳಿಗಳಲ್ಲಿ ತಲಾ 1.1 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT