ಸೋಮವಾರ, ಏಪ್ರಿಲ್ 6, 2020
19 °C

ರಾತ್ರಿ ಸ್ವಚ್ಛತೆ: ಜಿಲ್ಲಾಧಿಕಾರಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಚೆಲುವ ಚಾಮರಾಜನಗರ ಅಭಿಯಾನದ ಭಾಗವಾಗಿ ನಗರದಲ್ಲಿ ಆರಂಭಗೊಂಡಿರುವ ರಾತ್ರಿ ಸ್ವಚ್ಛತಾ ಕಾರ್ಯವನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೋಮವಾರ ರಾತ್ರಿ ಪರಿಶೀಲಿಸಿದರು.

ಚಾಮರಾಜೇಶ್ವರ ದೇವಾಲಯ, ರಥದ ಬೀದಿ, ಗುಂಡ್ಲುಪೇಟೆ ವೃತ್ತ ಸೇರಿದಂತೆ ವಿವಿಧ ಕಡೆಗಳಿಗೆ ಭೇಟಿ ನೀಡಿದ ಅವರು, ಪೌರಕಾರ್ಮಿಕರಿಗೆ ನೈರ್ಮಲ್ಯ ಕೆಲಸ ನಿರ್ವಹಣೆಗೆ ಮತ್ತಷ್ಟು ಸೌಲಭ್ಯಗಳನ್ನು ಒದಗಿಸುವಂತೆ ನಗರಸಭೆ ಆಯುಕ್ತ ಎಂ.ರಾಜಣ್ಣ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

ಪೌರ ಕಾರ್ಮಿಕರ ಅಹವಾಲನ್ನೂ ಆಲಿಸಿದರು. ರಾತ್ರಿ ವೇಳೆ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವುದರಿಂದ ಏನಾದರೂ ತೊಂದರೆಗಳು ಇವೆಯೇ ಎಂದು ಪ್ರಶ್ನಿಸಿ‌ದರು.

ಈ ಸಂದರ್ಭದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಎಂ.ಆರ್.ರವಿ ಅವರು, ‘ಬೆಳಿಗ್ಗೆಯಿಂದ ರಾತ್ರಿಯವರೆಗೆ ಉತ್ಪತ್ತಿಯಾಗುವ ತ್ಯಾಜ್ಯವನ್ನು ಆಯಾ ರಾತ್ರಿಯೇ ತೆರವುಗೊಳಿಸಿ, ಸ್ವಚ್ಛಗೊಳಿಸುವುದರಿಂದ ತ್ಯಾಜ್ಯ ಕೊಳೆಯಲು ಅವಕಾಶವಿರುವುದಿಲ್ಲ. ರಾತ್ರಿಯೇ ನೈರ್ಮಲ್ಯ ಕೆಲಸ ಪೂರ್ಣಗೊಳ್ಳುವುರಿಂದ ಬೆಳಿಗ್ಗೆ ನಗರ ಪ್ರದೇಶ ಸ್ವಚ್ಛಗೊಂಡು ಸುಂದರವಾಗುತ್ತದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು