ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಬಾಳೆಗೆ ಹೆಚ್ಚಿದ ಬೇಡಿಕೆ; ಕೃಷಿಕರ ಒಲವು

Last Updated 22 ಜೂನ್ 2021, 19:30 IST
ಅಕ್ಷರ ಗಾತ್ರ

ಯಳಂದೂರು: ಮಹಾನಗರಗಳ ಸೂಪರ್‌ಬಜಾರ್‌ಗಳಲ್ಲಿ ಹೆಚ್ಚಾಗಿ ಕಾಣಸಿಗುವ ಚಂದ್ರಬಾಳೆ ಹಣ್ಣಿಗೆ ಕೋವಿಡ್‌ ಸಂದರ್ಭದಲ್ಲಿ ಬೇಡಿಕೆ ಹೆಚ್ಚಾಗಿದೆ.

'ಸಿ' ಮತ್ತು'ಡಿ' ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಈ ಫಲಕ್ಕೆ ಬೇಡಿಕೆ ಹೆಚ್ಚಾಗಿರುವುದನ್ನು ಗಮನಿಸಿರು ರೈತರು, ಈ ಬಾಳೆ ತಳಿಗಳನ್ನು ಬೆಳೆಯಲು ಒಲವು ತೋರುತ್ತಿದ್ದಾರೆ.

ತಾಲ್ಲೂಕಿನ ಹೊನ್ನೂರು-ಕೆಸ್ತೂರು ಭಾಗಗಳಲ್ಲಿ ಬೆಳೆಗಾರರು ಏಲಕ್ಕಿ, ಪಚ್ಚಬಾಳೆ,ಮದರಂಗ ಮತ್ತು ನೇಂದ್ರದ ಜೊತೆ ಈಗ ಚಂದ್ರಬಾಳೆಗೂ ಸ್ಥಾನ ನೀಡಿದ್ದಾರೆ. ವಿಶೇಷ ಆರೈಕೆಇಲ್ಲದೆ ಸಹಜ ಕೃಷಿಯಲ್ಲಿ ಸಮೃದ್ಧ ಫಸಲು ನೀಡುವ ಚಂದ್ರಬಾಳೆಯನ್ನು ಬೆಳೆದು ಪಟ್ಟಣಗಳಮಾರುಕಟ್ಟೆಗೆ ಪೂರೈಸುತ್ತಾರೆ.

ಈ ಬಾಳೆ ಗಿಡಕ್ಕೆ ರೋಗ-ರುಜಿನ ಅಷ್ಟಾಗಿ ಬಾಧಿಸುವುದಿಲ್ಲ.ಸಾವಯವ ಕೃಷಿ ಮಾಡುವವರಿಗೆ ಈ ಬೆಳೆ ವರದಾನ. ಔಷಧೀಯ ಗುಣಗಳಿಂದಸಮೃದ್ಧವಾಗಿರುವ ಈ ತಳಿ ದೊಡ್ಡ ಗಾತ್ರದ ಹಣ್ಣನ್ನು ನೀಡುತ್ತದೆ. ಕೆಂಪು ಮಿಶ್ರಿತಕೇಸರಿ ಇಲ್ಲವೇ ಹಳದಿ ಬಣ್ಣಗಳಿಂದ ಕೂಡಿರುತ್ತದೆ.

'ಮೂರು ಎಕರೆ ಪಚ್ಚೆ ಬಾಳೆ ಜೊತೆ ಈ ಬಾಳೆಯನ್ನು ಬೆಳೆಸಿದ್ದೇವೆ. ಪ್ರತಿ ವರ್ಷ 10 ರಿಂದ 20ಗೊನೆ ಕೈಸೇರುತ್ತದೆ. ಮಾರಾಟಕ್ಕೆ ಮೈಸೂರು ನಂಬಿಕೊಂಡಿದ್ದೇವೆ. ಹಣ್ಣಿನ ಮಹತ್ವಅರಿತಿದ್ದವರು ಮನೆಗೆ ಬಂದು ಕೊಳ್ಳುತ್ತಾರೆ. ಉಳಿದಂತೆ ಮಾಲ್‌ಗಳಲ್ಲಿ ಮಾರಾಟಆಗುತ್ತದೆ. ನಗರಗಳಲ್ಲಿ ಈ ಹಣ್ಣಿಗೆ ವರ್ಷಪೂರ್ತಿ ಬೇಡಿಕೆ ಇರುತ್ತದೆ' ಎನ್ನುತ್ತಾರೆಕೆಸ್ತೂರು ಬಸವಣ್ಣಪ್ಪ.

ಔಷಧೀಯ ಗುಣಗಳ ಆಗರ: ‘ಚಂದ್ರಬಾಳೆಯಲ್ಲಿ ನಾರಿನ ಅಂಶ ಹೆಚ್ಚಿದ್ದು, ವಿಷಹರ ಗುಣಗಳಿಂದ ಕೂಡಿದೆ. 11 ಮಿನರಲ್ಸ್, 6 ವಿಟಮಿನ್‌ಗಳಿಂದ ಕೂಡಿದ ಪೋಷಕ ಆಹಾರ. ಬಾಳೆಯ 14 ರಿಂದ 15 ತಳಿಗಳಲ್ಲಿಚಂದ್ರಬಾಳೆಗೆ ಮೊದಲ ಸ್ಥಾನ ನೀಡಲಾಗಿದೆ. ಇದರ ಸೇವನೆಯಿಂದ ಕಿಡ್ನಿ ಕಲ್ಲುಕರಗುತ್ತದೆ. ಇದರಲ್ಲಿನ ಪೊಟ್ಯಾಷಿಯಂ ಮತ್ತು ಬೀಟಾ ಕ್ಯಾರಾನಿನ್ ಅಂಶಗಳು ಸಹಜಸೌಂದರ್ಯಕ್ಕೆ ನೆರವಾಗಿದೆ. ರಕ್ತ ಹಿಮೋಗ್ಲೋಬಿನ್ ಪ್ರಮಾಣದಲ್ಲಿ ಏರಿಕೆ ಆಗುತ್ತದೆ.ಮುಖದ ಕಾಂತಿ ವೃದ್ಧಿಸಲು ಚಂದ್ರಬಾಳೆ ಹಣ್ಣಿಗೆ ಓಟ್ಸ್ ಮತ್ತು ಜೇನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳುವವರೂ ಇದ್ದಾರೆ’ ಎಂದು ಸಸ್ಯತಜ್ಞ ರಾಮಾಚಾರಿ ಅವರು 'ಪ್ರಜಾವಾಣಿ'ಗೆತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಸಹಾಯಕ ತೋಟಗಾರಿಕಾ ನಿರ್ದೇಶಕ ಬಿ.ಎಸ್‌.ರಾಜು ಅವರು, ‘ಚಂದ್ರ ಬಾಳೆಯನ್ನು ಕಲಬುರ್ಗಿಯ ಕೆಲವೊಂದು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಅದರ ಔಷಧೀಯ ಮಹತ್ವವನ್ನು ಅರಿತವರು ಹೆಚ್ಚು ಇಷ್ಟಪಟ್ಟು ಕೊಳ್ಳುತ್ತಾರೆ ಮತ್ತು ತಾಲ್ಲೂಕಿನ ಕೆಲವು ರೈತರು ಈ ಹಣ್ಣನ್ನು ಬೆಳೆಯುವತ್ತ ಒಲವು ತೋರಿದ್ದಾರೆ. ಸದ್ಯ ಈ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ’ ಎಂದು ಹೇಳಿದರು.

ಕಾಣದಾದ ಹತ್ತಾರು ತಳಿ

ದೇಶದಲ್ಲಿ 50ಕ್ಕೂ ಹೆಚ್ಚು ಬಾಳೆಗಳ ತಳಿಗಳಿವೆ. ಇದರಲ್ಲಿ ಹಲವು ತಳಿಗಳು ಈಗ ಅಪರೂಪವಾಗಿವೆ.

‘ತಾಲ್ಲೂಕಿನ ಹಿಡುವಳಿದಾರರು 16 ಪ್ರಭೇದದ ಬಾಳೆ ಬೆಳೆಯುತ್ತಿದ್ದರು. ವಾಣಿಜ್ಯ ಕೃಷಿಗೆ ಒತ್ತು ನೀಡಿದ ಕಾರಣ 10ಕ್ಕೂ ಹೆಚ್ಚಿನ ಬಾಳೆವೈವಿಧ್ಯ ನಶಿಸಿತು. ದುರ್ಗಾಬಾಳೆ, ಬೂದಿಬಾಳೆ, ಪುಟ್ಟಬಾಳೆ, ಒಡುರಾ, ಕಬ್ಬಾಳೆ,ಶಕಲಾಟಿ, ಗುಜ್ಜಬಾಳೆ, ಆನೆಬಾಳೆ ಮತ್ತು ಕಾಡು ಬಾಳೆ ಈಗ ಕಂಡುಬರುತ್ತಿಲ್ಲ. ಪ್ರಾಣಿಮತ್ತು ಜನರ ಸೇವನೆಗಾಗಿ ಪ್ರತ್ಯೇಕವಾಗಿ ಬೆಳೆಯುತ್ತಿದ್ದ ಬಹಳಷ್ಟು ಬಾಳೆ ಈಗನಶಿಸಿವೆ. ಕೊರೊನಾ ಹಾವಳಿಯ ನಡುವೆ ಮತ್ತೆ ಚಂದ್ರಬಾಳೆಗೆ ಬೇಡಿಕೆ ಬಂದಿದ್ದು, ತಳಿವಿಶೇಷತೆಯನ್ನು ಉಳಿಸಬೇಕು’ ಸಾವಯವ ಕೃಷಿಕ ಹೊನ್ನೂರು ಪ್ರಕಾಶ್ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT