ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ರುವನಾರಾಯಣ ಸರಳ, ಸಜ್ಜನ ಅಜಾತಶತ್ರು: ಸೊರಕೆ

ಹಠಾತ್‌ ಆಗಿ ಅಗಲಿದ ನಾಯಕನಿಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಶ್ರದ್ಧಾಂಜಲಿ
Last Updated 19 ಮಾರ್ಚ್ 2023, 7:35 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಸರಳ, ಸಜ್ಜನಿಕೆ, ಪ್ರಾಮಾಣಿಕ, ಆಜಾತ ಶತ್ತು, ಮಾನವೀಯ ಗುಣಗಳನ್ನು ಹೊಂದಿರುವಂತಹ ವ್ಯಕ್ತಿಯಾಗಿದ್ದರು’ ಎಂದು ಕಾಂಗ್ರೆಸ್‌ ಮುಖಂಡ ವಿನಯಕುಮಾರ್‌ ಸೊರಕೆ ಶನಿವಾರ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಧ್ರುವನಾರಾಯಣ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ‘ಧ್ರುವನಾರಾಯಣ ಅವರದು ಎಂದೂ ಮರೆಯಲು ಸಾಧ್ಯವಾಗದ ವ್ಯಕ್ತಿತ್ವ. ನಂಬಿಕೆ, ವಿಶ್ವಾಸ, ಎಲ್ಲವನ್ನೂ ಕ್ರೋಢೀಕರಿಸುವ ವ್ಯಕ್ತಿತ್ವ ಅವರಲ್ಲಿತ್ತು’ ಎಂದು ಬಣ್ಣಿಸಿದರು.

‘ಅವರೊಬ್ಬ ಆದರ್ಶ ರಾಜಕಾರಣಿ. ಬಡವರ ಪರ ಮಾತನಾಡುತ್ತಿದ್ದರು. ಅಂತಹ ಒಬ್ಬ ಉತ್ತಮ ರಾಜಕಾರಣಿಯನ್ನು ನಾವು ಕಳೆದುಕೊಂಡಿರುವುದು ಬಹಳ ನೋವಿನ ಸಂಗತಿ. ಜನರ, ಪ್ರೀತಿ ವಿಶ್ವಾಸವನ್ನು ಗಳಿಸಿದ್ದರು. ಅವರ ಕುಟುಂಬ ಹೆಸರು ಉಳಿಯುವಂತ ರೀತಿಯಲ್ಲಿ ನೀವೆಲ್ಲರೂ ಮಾಡಬೇಕು. ಧ್ರುವನಾರಾಯಣ ನೆನಪಿನಲ್ಲಿ ಅವರ ಮಗ ದರ್ಶನ್‌ಗೆ ಆಶೀರ್ವಾದ ಮಾಡಬೇಕು’ ಎಂದು ಮನವಿ ಮಾಡಿದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ‘ಧ್ರುವನಾರಾಯಣ ಅಭಿವೃದ್ದಿ ಹರಿಕಾರರಾಗಿದ್ದರು. ಮುಂದಿನ ಚುನಾವಣೆಯಲ್ಲಿ ಅವರು ಗೆದ್ದಿದ್ದರೆ, ಉಪಮುಖ್ಯಮಂತ್ರಿಯಾಗುವ ಅವಕಾಶ ಅವರಿಗಿತ್ತು’ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ‘ಧ್ರುವನಾರಾಯಣ ನಿಧನದಿಂದ ತುಂಬಲಾರದ ನಷ್ಟ ಉಂಟಾಗಿದ್ದು, ನಾವು ಅನಾಥರಾಗಿದ್ದೇವೆ’ ಎಂದರು.

‘ಎರಡು ಬಾರಿ ಶಾಸಕರಾಗಿ, ಸಂಸದರಾಗಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ದಿ ಕೆಲಸ ಮಾಡಿದ್ದರು. ಎಲ್ಲರ ಮನಗೆದ್ದಿದ್ದರು. ಪ್ರತಿಯೊಬ್ಬರ ಕಷ್ಠಗಳಿಗೆ ಸ್ಪಂದಿಸಿದ್ದರು. ಅವರ ಆಸೆಯಂತೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗುವ ಕೆಲಸವನ್ನು ನಾವೆಲ್ಲರೂ ಮಾಡೋಣ’ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಶ್ರೀಕಂಠ, ಪತ್ರಕರ್ತ ದೀಪಕ್, ಪ್ರಧಾನ ಕಾರ್ಯದರ್ಶಿ ಎಸ್.ಸಿ.ಬಸವರಾಜು ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪ ಅಮರನಾಥ್‌, ಜಿಲ್ಲಾಧ್ಯಕ್ಷೆ ಲತಾಜತ್ತಿ ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ ಮುಖಂಡ ಕಾಗಲವಾಡಿ ಎಂ.ಶಿವಣ್ಣ ಮಾತನಾಡಿದರು.

ಅಂತರರಾಷ್ಟ್ರೀಯ ಬೌದ್ದಭಿಕ್ಕು ಸಂಘದ ಪ್ರಧಾನ‌ ಕಾರ್ಯದರ್ಶಿ ಬಂತೆ ಬೋಧಿದತ್ತ ತೇರಾ, ಬವಸರಾಜು ಬಂತೇಜಿ ಆರ್ಶೀವಚನ ನೀಡಿದರು.

ಭಾವುಕ ಸನ್ನಿವೇಶ: ಸಭೆಯಲ್ಲಿ ಧ್ರುವನಾರಯಣ ಅವರನ್ನು ನೆನೆದು ಹಲವು ಮುಖಂಡರು ಕಾಗಲವಾಡಿ ಎಂ.ಶಿವಣ್ಣ, ಪುಪ್ಪುಅಮರನಾಥ್, ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಮಹಿಳಾ ಅಧ್ಯಕ್ಷ ಲತಾ ಜತ್ತಿ, ಇನ್ನಿತರ ಮುಖಂಡರು ಕಂಬನಿ ಸುರಿಸಿದರು. ಈ ಸಂದರ್ಭದಲ್ಲಿ ಭಾವುಕ ಸನ್ನಿವೇಶ ನಿರ್ಮಾಣವಾಯಿತು.

ಶಾಸಕ ಆರ್.ನರೇಂದ್ರ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವು, ಆರ್.ಮಹದೇವು, ಮುಖಂಡರಾದ ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜ್, ಜಿ.ಎನ್.ನಂಜುಂಡಸ್ವಾಮಿ, ಕಳಲೆ ಕೇಶವಮೂರ್ತಿ, ಗಣೇಶ್‌ಪ್ರಸಾದ್, ಪು.ಶ್ರೀನಿವಾಸನಾಯಕ, ಸಿ.ಎ.ಮಹದೇವಶೆಟ್ಟಿ, ಎಸ್.ಸೋಮನಾಯಕ, ಸದಾಶಿವಮೂರ್ತಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆರೆಹಳ್ಳಿನವೀನ್, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ವಕೀಲರಾದ ಅರುಣ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್‌ಅಸ್ಗರ್, ತೋಟೇಶ್, ವರ್ಮ, ಶಿವಕುಮಾರ್, ಎಚ್‌.ವಿ.ಚಂದ್ರು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT