ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡ್ಲುಪೇಟೆ | ವೈದ್ಯರ ಪ್ರತಿಭಟನೆ: ರೋಗಿಗಳ ಪರದಾಟ

Published 17 ಆಗಸ್ಟ್ 2024, 14:12 IST
Last Updated 17 ಆಗಸ್ಟ್ 2024, 14:12 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕೊಲ್ಕತ್ತದಲ್ಲಿ ಸಂಭವಿಸಿದ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಖಂಡಿಸಿ ವೈದ್ಯರು ಆರೋಗ್ಯ ಸೇವೆಯಿಂದ ಹೊರಗುಳಿದ ಪರಿಣಾಮ ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಖಾಸಗಿ ಕ್ಲಿನಿಕ್‍ಗಳು, ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ರೋಗಿಗಳು ಪರದಾಡುವಂತಾಯಿತು.

ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆ, ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೊರರೋಗಿ ವಿಭಾಗವನ್ನು (ಒಪಿಡಿ) ಬಂದ್ ಮಾಡಲಾಗಿತ್ತು. ನೆಗಡಿ, ಜ್ವರ, ಕೆಮ್ಮು ಮುಂತಾದ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಬಂದ ರೋಗಿಗಳು  ವಾಪಸ್ ತೆರಳಿದರು. ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ರಕ್ಷಣೆಗೆ ಗೃಹ ರಕ್ಷಕರನ್ನು ನೇಮಕ ಮಾಡಲಾಗಿತ್ತು. ಹೀಗಿದ್ದರೂ ಕೆಲವರು ಹಠ ಮಾಡಿ ಆಸ್ಪತ್ರೆಯೊಳಗೆ ಹೋದರೂ ವೈದ್ಯರು ಲಭ್ಯರಿಲ್ಲದೆ ನಿರಾಸೆಯಿಂದ ವಾಪಸ್ಸಾದರು. ‌ಆಸ್ಪತ್ರೆ ನೌಕರರು ಮತ್ತು ಗೃಹ ರಕ್ಷಕರೊಂದಿಗೆ ವಾಗ್ವಾದ ನಡೆಸಿದರು.

ಮಾಹಿತಿ ಕೊರತೆಯಿಂದಾಗಿ ಬೈಕ್, ರಿಕ್ಷಾ ಗಳಲ್ಲಿ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಕ್ಲಿನಿಕ್‍ಗೆಂದು ಅತ್ತಿಂದಿತ್ತ ಅಲೆದು ಎಲ್ಲಿಯೂ ಚಿಕಿತ್ಸೆ ಸಿಗುತ್ತಿಲ್ಲ ಎಂದು ರೋಗಿಗಳು ಹತಾಶರಾಗಿ ಕುಳಿತಿದ್ದ ದೃಶ್ಯಗಳು ಕಂಡು ಬಂದವು. ಕೆಲವರು ಔಷಧ ಅಂಗಡಿಗಳಿಗೆ ತೆರಳಿ ತಾತ್ಕಾಲಿಕ   ಮಾತ್ರೆಗಳು ಮತ್ತು ಔಷಧಿ ಖರೀದಿಸಿ ತೆರಳಿದರೆ, ವೈದ್ಯರ ಶಿಫಾರಸ್ಸು ಚೀಟಿ ಇಲ್ಲದವರಿಗೆ ಮೆಡಿಕಲ್ ಸ್ಟೋರ್‌ಗಳಲ್ಲೂ ಔಷಧ ಸಿಗಲಿಲ್ಲ.

ತಾಲ್ಲೂಕಿನ ಬೇಗೂರು, ಕಬ್ಬಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಹಂಗಳ, ತೆರಕಣಾಂಬಿ ಹೋಬಳಿ ಕೇಂದ್ರ ಸ್ಥಾನದ ಆರೋಗ್ಯ ಕೇಂದ್ರಗಳಲ್ಲೂ ಇದೇ ಪರಿಸ್ಥಿತಿ ಕಂಡು ಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT