ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಸ ತಿಂದು ದೇಗುಲ ಪ್ರವೇಶದ ಚರ್ಚೆಯಿಂದ ನಾಡಿಗೇನು ಪ್ರಯೋಜನ?: ಡಾ. ಯತೀಂದ್ರ

Last Updated 23 ಆಗಸ್ಟ್ 2022, 4:34 IST
ಅಕ್ಷರ ಗಾತ್ರ

ಚಾಮರಾಜನಗರ: ‘ಆಹಾರ ಸೇವನೆ ಅವರವರ ಇಚ್ಛೆ‌. ದೇವಸ್ಥಾನಕ್ಕೆ ಇಂತಹದ್ದನ್ನೇ ತಿಂದು ಹೋಗಬೇಕು ಎಂದು ಯಾರು ಹೇಳಿದ್ದಾರೆ? ಅಲ್ಲಿಗೆ ಬರುವ ಪ್ರತಿಯೊಬ್ಬರನ್ನೂ ಏನು ತಿಂದಿದ್ದಾರೆ ಎಂದು ಪರಿಶೀಲಿಸಲು ಆಗುತ್ತದೆಯೇ. ಈ ಚರ್ಚೆಯಿಂದ ಜನರು, ನಾಡಿಗೇನು ಪ್ರಯೋಜನ’ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದರು.

‘ನಮ್ಮ ತಂದೆಯವರು ದನ ಮತ್ತು ಹಂದಿ ಮಾಂಸ ತಿನ್ನುವುದಿಲ್ಲ. ಹಾಗಿರುವಾಗ ಬೇರೆಯವರನ್ನು ತಿನ್ನಿ ಎನ್ನಲಾಗುತ್ತದೆಯೇ‌? ಪ್ರತಾಪ್ ಸಿಂಹ ಬಂದು ಬಲವಂತವಾಗಿ ತಿನ್ನಿಸಲು ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

ಆಗಸ್ಟ್‌ 18ರಂದು ಗುರುವಾರ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಸಿದ್ದರಾಮಯ್ಯ ಅವರು ಮಾಂಸದೂಟ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ನಡೆಯುತ್ತಿರುವ ಚರ್ಚೆಗೆ ಡಾ. ಯತೀಂದ್ರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT