ಭಾನುವಾರ, ಮೇ 29, 2022
23 °C

ಬಡವರಿಗೆ ಬರೆ ಹಾಕಿ ಸರ್ಕಾರ ಖುಷಿ ಪಡುವುದಿಲ್ಲ: ಸಚಿವ ಸುರೇಶ್‌ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಬಡವರ ಮೇಲೆ ಬರ ಹಾಕಿ ಯಾವ ಸರ್ಕಾರವೂ ಖುಷಿ ಪಡುವುದಿಲ್ಲ. ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಬೆಲೆ ಇಳಿಕೆ ಮಾಡುವುದೇ ಸರ್ಕಾರದ ಉದ್ದೇಶ. ಬೆಲೆ ಏರಿಕೆ ಮಾಡಿ ಬೊಕ್ಕಸ ತುಂಬಿಸುವ ಉದ್ದೇಶವೂ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಸೋಮವಾರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಲೆ ಕಡಿಮೆಯಾದಾಗ ಯಾರೂ ಮಾತನಾಡಿಲ್ಲ. ಸದ್ಯ ಬೆಲೆ ಏರಿಕೆಯಾಗುತ್ತಿದೆ. ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿರುವುದರಿಂದ ಇಂಧನದ ಬೆಲೆ ಮೇಲೆ ಪರಿಣಾಮ ಬೀರಿದೆ. ಬೆಲೆ ಇಳಿಕೆಯಾಗಲಿದೆ ಎಂದು ಪೆಟ್ರೋಲಿಯಂ ಸಚಿವರು ಹೇಳಿದ್ದಾರೆ’ ಎಂದರು.

ಸಚಿವರೊಂದಿಗೆ ಮಾತನಾಡುತ್ತೇನೆ: ಟಿವಿ, ಫ್ರಿಡ್ಜ್‌ ಹೊಂದಿರುವ ಕುಟುಂಬಗಳ ಬಿಪಿಎಲ್‌ ಕಾರ್ಡ್‌ ರದ್ದುಪಡಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್‌ ಕತ್ತಿ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರು ಯಾವ ಆಧಾರದ ಮೇಲೆ ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಖುದ್ದಾಗಿ ನಾನೇ ಉಮೇಶ್‌ ಕತ್ತಿಯವರ ಬಳಿ ಮಾತನಾಡುತ್ತೇನೆ. ಟಿವಿ ಎಲ್ಲರ ಮನೆಲ್ಲಿದೆ. ಸಮಾಜದ ಕಟ್ಟ ಕಡೆಯ ಮಗು ಕೂಡ ಚಂದನವಾಹಿನಿಯಲ್ಲಿ ಸಂವೇದ ಕಾರ್ಯಕ್ರಮ ವೀಕ್ಷಿಸಿದೆ’ ಎಂದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು