ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನರ: 866 ಪ್ರಕರಣ, 358 ಮಂದಿ ಗುಣಮುಖ

Last Updated 27 ಜನವರಿ 2022, 15:32 IST
ಅಕ್ಷರ ಗಾತ್ರ

ಚಾಮರಾಜನರ: ಜಿಲ್ಲೆಯಲ್ಲಿ ಗುರುವಾರ 2,460 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 866 ಜನರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಇವರಲ್ಲಿ 174 ಮಕ್ಕಳಿದ್ದಾರೆ.

ಒಂದೇ ದಿನ 358 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಕರಣ ವರದಿಯಾಗಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆ 4,558ಕ್ಕೆ ತಲುಪಿದೆ. ಸೋಂಕಿತರಲ್ಲಿ ಮೂವರು ಐಸಿಯುನಲ್ಲಿದ್ದು, 3,409 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು, ಕೋವಿಡ್‌ ಆಸ್ಪತ್ರೆ ಹಾಗೂ ಕೇರ್‌ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ ದೃಢಪಟ್ಟ ಒಟ್ಟು ಪ್ರಕರಣಗಳಲ್ಲಿ ಗ್ರಾಮೀಣ ಭಾಗಗಳಲ್ಲಿ 652 ಪ್ರಕರಣಗಳು ಗ್ರಾಮೀಣ ಭಾಗಗಳಲ್ಲಿ ವರದಿಯಾಗಿವೆ. 214 ಪ್ರಕರಣಗಳು ನಗರ ಪ್ರದೇಶಗಳಲ್ಲಿ ದೃಢಪಟ್ಟಿವೆ.

ತಾಲ್ಲೂಕುವಾರು: ಚಾಮರಾಜನಗರ ತಾಲ್ಲೂಕಿನಲ್ಲಿ 388, ಗುಂಡ್ಲುಪೇಟೆಯಲ್ಲಿ 223, ಕೊಳ್ಳೇಗಾಲದಲ್ಲಿ 125, ಹನೂರಿನಲ್ಲಿ 108 ಹಾಗೂ ಯಳಂದೂರಿನಲ್ಲಿ 22 ಪ್ರಕರಣಗಳು ದೃಢಪಟ್ಟಿವೆ.

ಗುರುವಾರ ಗುಣಮುಖರಾದ 358 ಮಂದಿಯಲ್ಲಿ 61 ಮಕ್ಕಳಿದ್ದಾರೆ. ಚಾಮರಾಜನಗರ ತಾಲ್ಲೂಕಿನ 147 ಮಂದಿ, ಕೊಳ್ಳೇಗಾಲದ 88, ಹನೂರಿನ 51, ಗುಂಡ್ಲುಪೇಟೆಯ 36 ಹಾಗೂ ಯಳಂದೂರು ತಾಲ್ಲೂಕಿನ 34 ಹಾಗೂ ಹೊರಜಿಲ್ಲೆ ಇಬ್ಬರು ಸೋಂಕು ಮುಕ್ತರಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 38,897 ಪ್ರಕರಣಗಳು ವರದಿಯಾಗಿವೆ. 33,793 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ ಹಾಗೂ ಕೋವಿಡ್‌ಯೇತರ ಕಾರಣಗಳಿಂದ 587 ಮಂದಿ ಕೊನೆಯುಸಿರೆಳೆದಿದ್ದಾರೆ.

ಕುದೇರು: 18 ಮಕ್ಕಳಿಗೆ ಸೋಂಕು
ಸಂತೇಮರಹಳ್ಳಿ:
ಹೋಬಳಿಯ ಕುದೇರು ಸಂಗಶೆಟ್ಟಿ ಸರ್ಕಾರಿ ಪ್ರೌಢ ಶಾಲೆಯ 18 ಮಕ್ಕಳಿಗೆ ಕೋವಿಡ್‌ ದೃಢಪಟ್ಟಿದೆ. ಶಾಲೆಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಭಾನುವಾರದ ವರೆಗೆ ರಜೆ ಘೋಷಿಸಲಾಗಿದೆ.

ಮೂರು ದಿನಗಳ ಹಿಂದೆ ಶಾಲೆಯಲ ಎಲ್ಲ 80 ಮಕ್ಕಳಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 18 ಮಕ್ಕಳಿಗೆ ಸೋಂಕು ಇರುವುದು ಖಚಿತವಾಗಿದೆ. ಎಲ್ಲ ವಿದ್ಯಾರ್ಥಿಗಳೂ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

ಬುಧವಾರ ನಡೆದಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಕರು ಮಾತ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT