ಶುಕ್ರವಾರ, ಡಿಸೆಂಬರ್ 4, 2020
24 °C
ವಿಡಿಯೊ

ಊಟಿ ರಸ್ತೆಯಲ್ಲಿ ಬೈಕ್‌ ಸವಾರರ ಮೇಲೆ ದಾಳಿಗೆ ಯತ್ನಿಸಿದ ಸಲಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 212ರಲ್ಲಿ (ಊಟಿ ರಸ್ತೆ) ಒಂಟಿ ಸಲಗವೊಂದು ಭಾನುವಾರ ಎರಡು ದ್ವಿಚಕ್ರ ವಾಹನಗಳ ಸವಾರರ ಮೇಲೆ ದಾಳಿಗೆ ಯತ್ನಿಸಿದೆ.

ಎರಡು ಬೈಕ್‌ಗಳಲ್ಲಿದ್ದ ನಾಲ್ವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸವಾರರು ಘಟನೆಯನ್ನು ಚಿತ್ರೀಕರಿಸಿದ್ದು, ವಿಡಿಯೊ ವೈರಲ್‌ ಆಗಿದೆ. 

ರಸ್ತೆ ಬದಿಯಲ್ಲಿ ಸಲಗವೊಂದು ಮೇಯುತ್ತಿತ್ತು. ಎರಡು ಬೈಕ್‌ಗಳಲ್ಲಿದ್ದ ಸವಾರರು, ಬೈಕ್‌ ನಿಲ್ಲಿಸದೆ ನಿಧಾನವಾಗಿ ಹೋಗುವುದಕ್ಕೆ ಯತ್ನಿಸಿದರು. ತಕ್ಷಣ ಬೈಕ್‌ಗಳತ್ತ ನುಗ್ಗಿ ಬಂದ ಆನೆ ದಾಳಿ, ನಡೆಸಲು ಯತ್ನಿಸಿತು. ಸವಾರು ಬೈಕ್‌ಗಳನ್ನು ತಿರುಗಿಸಿಕೊಂಡು ಹಿಂದಕ್ಕೆ ಬಂದರು. ಸ್ವಲ್ಪ ದೂರ ಹಿಂಬಾಲಿಸಿದ ಗಂಡಾನೆ, ನಂತರ ರಸ್ತೆಯ ಮಧ್ಯೆ ನಿಂತಿತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು