ಶನಿವಾರ, ಜುಲೈ 24, 2021
20 °C

52 ಹೊಸ ಪ್ರಕರಣ, 90 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ದೃಢಪಡುತ್ತಿರುವ ಕೋವಿಡ್‌ ಪ್ರಕರಣಗಳಲ್ಲಿ ಮತ್ತೆ ಇಳಿಕೆ ಕಂಡು ಬಂದಿದ್ದು, ಮಂಗಳವಾರ 52 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. 90 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ.

ಗುಣಮುಖರ ಸಂಖ್ಯೆ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 771ಕ್ಕೆ ಇಳಿದಿದೆ. ಈ ಪೈಕಿ ಐಸಿಯುನಲ್ಲಿ 46, ಹೋಂ ಐಸೊಲೇಷನ್‌ನಲ್ಲಿ 17 ಮಂದಿ ಇದ್ದಾರೆ. ಉಳಿದವರು ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಜಿಲ್ಲೆಯಲ್ಲಿ ಈವರೆಗೆ 30,317 ಪ್ರಕರಣಗಳು ವರದಿಯಾಗಿವೆ. 29,056 ಮಂದಿ ಗುಣಮುಖರಾಗಿದ್ದಾರೆ. 

ಮಂಗಳವಾರ 970 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 918 ವರದಿಗಳು ನೆಗೆಟಿವ್‌ ಆಗಿವೆ. 52 ಮಂದಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಈ ಪೈಕಿ 18 ಮಂದಿ ಚಾಮರಾಜನಗರ ತಾಲ್ಲೂಕಿನವರು. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ನಾಲ್ಕು, ಕೊಳ್ಳೇಗಾಲದಲ್ಲಿ 12, ಹನೂರು ತಾಲ್ಲೂಕಿನಲ್ಲಿ 18 ಪ್ರಕರಣಗಳು ವರದಿಯಾಗಿವೆ.

ಗುಣಮುಖರಾದ 90 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 31, ಗುಂಡ್ಲುಪೇಟೆಯ 25, ಕೊಳ್ಳೇಗಾಲ ಹಾಗೂ ಹನೂರಿನ ತಲಾ 13, ಯಳಂದೂರು ತಾಲ್ಲೂಕಿನ ಆರು ಹಾಗೂ ಹೊರ ಜಿಲ್ಲೆಯ ಇಬ್ಬರು ಇದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು