ಶನಿವಾರ, ನವೆಂಬರ್ 16, 2019
24 °C

ಹನೂರು: ಮಾಜಿ ಯೋಧ ನಿಧನ

Published:
Updated:
Prajavani

ಹನೂರು (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ಮಾಜಿ ಯೋಧ ರಾಯಪ್ಪನ್ (75) ಅವರು ಹೃದಯಾಘಾತದಿಂದ ಬುಧವಾರ ನಿಧನರಾದರು. 

ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು ಪಾಕಿಸ್ತಾನದೊಂದಿಗೆ 1965ರಲ್ಲಿ ಹಾಗೂ 1971ರಲ್ಲಿ (ಬಾಂಗ್ಲಾ ವಿಮೋಚನೆ) ನಡೆದಿದ್ದ ಯುದ್ಧಗಳಲ್ಲಿ ಭಾಗವಹಿಸಿದ್ದರು. 

ರಾಯಪ್ಪನ್‌ ಅವರಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗ ಮಾರ್ಟಳ್ಳಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಕ್ರಿಶ್ಚಿಯನ್‌ ರುದ್ರಭೂಮಿಯಲ್ಲಿ ನೆರವೇರಿತು.

 

ಪ್ರತಿಕ್ರಿಯಿಸಿ (+)