ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಪ್ಪನ ಪ್ರಸಾದಕ್ಕೆ ಎಫ್‌ಎಸ್‌ಎಸ್‌ಎಐ ಪರವಾನಗಿ

Last Updated 8 ನವೆಂಬರ್ 2020, 20:29 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ತಯಾರಿಸಲಾಗುವ ಲಾಡು ಪ್ರಸಾದ ಹಾಗೂ ದಾಸೋಹದ ಪ್ರಸಾದ ತಯಾರಿಕಾ ವಿಧಾನಕ್ಕೆಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಪರವಾನಗಿ ನೀಡಿದೆ.

ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಆರು ತಿಂಗಳ ಹಿಂದೆ ಪರವಾನಗಿಗಾಗಿ ಅರ್ಜಿ ಸಲ್ಲಿಸಿತ್ತು. ‘ಈಗ ಪರವಾನಗಿ ನೀಡಿ
ರುವುದರಿಂದ ಪ್ರಸಾದ ತಯಾರಿಕಾ ವಿಧಾನದಲ್ಲಿ ಆರೋಗ್ಯ ಸುರಕ್ಷತೆ, ತಯಾರಿಕೆದಾರರು ಹಾಗೂ ಅದನ್ನು ಬಳಕೆದಾರರಿಗೆ ತಲುಪುವವರೆಗೂ ಪ್ರತಿ ಹಂತದಲ್ಲೂ ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪ್ರಾಧಿಕಾರವು ಎಲ್ಲ ನಿಯಮಗಳನ್ನು ಪಾಲಿಸಲಿದೆ’ ಎಂದು ಕಾರ್ಯದರ್ಶಿ ಜಯವಿಭವಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT