ಭಾನುವಾರ, ಆಗಸ್ಟ್ 25, 2019
23 °C

ಜೂಜಾಟ: 16 ಮಂದಿ ಬಂಧನ, ₹2.74 ಲಕ್ಷ ವಶ

Published:
Updated:

ಚಾಮರಾಜನಗರ: ನಗರದ ಸತ್ಯಮಂಗಲ ರಸ್ತೆಯಲ್ಲಿರುವ ಸಂತೋಷ್ ಲಾಡ್ಜ್‌ನಲ್ಲಿ ಜೂಜಾಟದಲ್ಲಿ ತೊಡಗಿದ್ದ 16 ಮಂದಿಯನ್ನು ಬಂಧಿಸಿರುವ ಪೊಲೀಸರು, ಅವರಿಂದ ₹2.74 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. 

ಗುರುವಾರ ರಾತ್ರಿ ಈ ಪ್ರಕರಣ ನಡೆದಿದೆ. ನಗರದ ಸೈಬರ್‌, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳ ನಿಗ್ರಹ (ಸಿಇಎನ್) ಪೊಲೀಸರು ಕಾರ್ಯಾಚರಣೆ ನಡೆಸಿ ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸಿದ್ದಾರೆ. 

ಲಾಡ್ಜ್‌ನಲ್ಲಿ ಕೆಲವರು ಜೂಜಾಟದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಸಿಇಎನ್‌ ಠಾಣೆಯ ಇನ್‌ಸ್ಪೆಕ್ಟರ್‌ ರಾಜಣ್ಣ ಅವರಿಗೆ ಗುರುವಾರ ಸಂಜೆ ಸಿಕ್ಕಿತು. ತಕ್ಷಣ ಕಾರ್ಯಪ್ರವೃತ್ತರಾದ ಅವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ, ಕೊಠಡಿಯೊಂದರಲ್ಲಿ 16 ಮಂದಿ ಜೂಜಾಟದಲ್ಲಿ ತೊಡಗಿದ್ದುದು ಕಂಡು ಬಂತು. 

ಮಂಗಲ ಗ್ರಾಮದ ಕೃಷ್ಣ, ಶಂಕರ, ಚಾಮರಾಜನಗರದ ಕೃಷ್ಣ, ಸಂಪತ್ತು, ಬದನಗುಪ್ಪೆ ಗ್ರಾಮದ ಶಿವಲಿಂಗಪ್ಪ, ನಾಗರಾಜು, ದೊಡ್ಡರಾಯಪೇಟೆ ಗ್ರಾಮದ ಮುತ್ತು, ಮಸಣಾಪುರ ಗ್ರಾಮದ ಅಶ್ವಥ್‌, ಕಕ್ಕೇರಹಟ್ಟಿ ಗ್ರಾಮದ ಮೂರ್ತಿ, ಸಂತೇಮರಹಳ್ಳಿಯ ಮಹೇಶ್‌ಕುಮಾರ್‌, ಸಂಜಯ, ಕಿರಗಸೂರಿನ ಮಹಮ್ಮದ್‌ ಇಲಿಯಾಸ್‌, ಕಾಡಹಳ್ಳಿಯ ನಾಗೇಶ್‌, ಕುಮಾರ್‌, ಹಂಡ್ರಕಳ್ಳಿಯ ರೇಚಣ್ಣ, ಕೆ.ಬಸನಪುರದ ನಾಗರಾಜು ಬಂಧಿತರು. ಇವರ ಬಳಿಯಿಂದ ₹2,74,330 ಹಣವನ್ನು ವಶಕ್ಕೆ ಪಡೆಯಲಾಗಿದೆ. 

Post Comments (+)